ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಹಿಟ್ಲರ್’ಗೆ ಹೋಲಿಸಿದ್ದ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಅವರನ್ನು ನಟ ಬುಲೆಟ್ ಪ್ರಕಾಶ್ ತರಾಟೆಗೆ ತೆಗೆದುಕೊಂಡ ಬೆನ್ನಲ್ಲೇ, ನಟ ಜಗ್ಗೇಶ್ ಕೂಡಾ ಚಾಟಿ ಬೀಸಿದ್ದಾರೆ.
ಸಹೋದರ ದಾರಿ ತಪ್ಪಿದ ಮಕ್ಕಳ ತಿದ್ದಬಹುದು!
ದಾರಿ ತಪ್ಪಲೆ ಹುಟ್ಟಿದ ಮಕ್ಕಳ ತಿದ್ದಬಾರದು!
ಕಾರಣ ದಾರಿ ತಪ್ಪಲು ಹುಟ್ಟಿದ ಮಕ್ಕಳ ಇತಿಹಾಸ ಯಕ್ಷಪ್ರಶ್ನೆ!
ಯತಃ ಜನನ ತಥಃ ಜೀವನ!
ಅನುಕಂಪವಿರಲಿ ಅಂಥ ಮಕ್ಕಳಿಗೆ!
ಕಾರಣ ಮಾನಸಿಕ ವಿಕಲಚೇತರು ಅಂಥ ಮಕ್ಕಳು!
ಇಂತ ಮಕ್ಕಳನ್ನು ನೋಡಿ ಸಂತೋಷಪಡುವ ಒಂದು ವರ್ಗವಿದೆ ದೌರ್ಭಾಗ್ಯ! https://t.co/7ZSKPJzzUV— Chowkidar🙏ನವರಸನಾಯಕ ಜಗ್ಗೇಶ್ (@Jaggesh2) April 29, 2019
ಈ ವಿಚಾರದಲ್ಲಿ ನಟ ಬುಲೆಟ್ ಪ್ರಕಾಶ್ ಮಾಡಿರುವ ಟ್ವೀಟ್ ಗೆ ಪ್ರತಿಕ್ರಿಯೆ ನೀಡಿರುವ ಅವರು, ಸಹೋದರ, ದಾರಿ ತಪ್ಪಿದ ಮಕ್ಕಳನ್ನು ತಿದ್ದಬಹುದು. ಆದರೆ ದಾರಿ ತಪ್ಪಲೆಂದೇ ಹುಟ್ಟಿದ ಮಕ್ಕಳ ತಿದ್ದಬಾರದು. ಹೀಗೆ ದಾರಿ ತಪ್ಪಲು ಹುಟ್ಟಿದ ಮಕ್ಕಳ ಇತಿಹಾಸವೇ ಯಕ್ಷಪ್ರಶ್ನೆ. ಜನನವು ಹೇಗೋ ಹಾಗೇ ಜೀವನ. ಅಂಥ ಮಕ್ಕಳ ಬಗ್ಗೆ ಅನುಕಂಪ ವಹಿಸಬೇಕು. ಅಂಥವರೆಲ್ಲ ಮಾನಸಿಕ ವಿಕಲಚೇತನರು. ಇಂತಹವರನ್ನು ನೋಡಿ ಕೂಡ ಸಂತೋಷ ಪಡುವ ಜನರು ಇರುವುದು ದೌರ್ಭಾಗ್ಯ ಎಂದು ವ್ಯಂಗ್ಯಭರಿತವಾಗಿ ಟ್ವೀಟ್ ಮಾಡಿದ್ದು, ಸಾಮಾಜಿಕ ಜಾಲತಾನದಲ್ಲಿ ಭಾರೀ ವೈರಲ್ ಆಗಿದೆ.
What are your thoughts? pic.twitter.com/b8GcgKL2ih
— Divya Spandana/Ramya (@divyaspandana) April 29, 2019
ರಮ್ಯಾ ಟ್ವೀಟ್’ಗೆ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದ ನಟ ಬುಲೆಟ್ ಪ್ರಕಾಶ್, ಇಡೀ ವಿಶ್ವವೇ ಮೋದಿಗೆ ಸೆಲ್ಯೂಟ್ ಹೊಡೆಯುವಾಗ ರಮ್ಯಾ ಅವರು ಹೀಯಾಳಿಸೋದು ಸರಿಯಲ್ಲ. ಗಣ್ಯವ್ಯಕ್ತಿಗಳ ಬಗ್ಗೆ ಮಾತನಾಡುವಾಗ ಎಚ್ಚರ ವಹಿಸಬೇಕು. ರಾಜಕೀಯ ತಜ್ಞರ ಬಳಿ ಟ್ಯೂಷನ್ ಗೆ ಹೋಗಿ ಕಲಿತುಕೊಳ್ಳಿ. ಜನರಿಗೆ ತಪ್ಪು ಸಂದೇಶ ರವಾನೆ ಮಾಡ್ಬೇಡಿ ರಮ್ಯಾ ಮೇಡಂ ಎಂದಿದ್ದರು.
Discussion about this post