ಬೆಂಗಳೂರು: ಸದಾ ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸುತ್ತಲೇ ಸುದ್ದಿಯಲ್ಲಿರುವ ಮಾಜಿ ನಟಿ ಹಾಗೂ ಸಂಸದೆ ರಮ್ಯಾ ಅವರನ್ನು ತರಾಟೆಗೆ ತೆಗೆದುಕೊಂಡಿರುವ ನಟ ಬುಲೆಟ್ ಪ್ರಕಾಶ್, ಸಾಮಾಜಿಕ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ಜಾಡಿಸಿದ್ದಾರೆ.
ಹಿಟ್ಲರ್ ಭಾವಚಿತ್ರದೊಂದಿಗೆ ಮೋದಿಯವರನ್ನು ಹೋಲಿಕೆ ಮಾಡಿ ಟ್ವೀಟ್ ಮಾಡಿದ್ದ ರಮ್ಯಾಗೆ ಚಾಟಿ ಬೀಸಿರುವ ಬುಲೆಟ್ ಪ್ರಕಾಶ್, ಇಡೀ ವಿಶ್ವವೇ ಮೋದಿಗೆ ಸೆಲ್ಯೂಟ್ ಹೊಡೆಯುವಾಗ ರಮ್ಯಾ ಅವರು ಹೀಯಾಳಿಸೋದು ಸರಿಯಲ್ಲ. ಗಣ್ಯವ್ಯಕ್ತಿಗಳ ಬಗ್ಗೆ ಮಾತನಾಡುವಾಗ ಎಚ್ಚರವಹಿಸಬೇಕು. ರಾಜಕೀಯ ತಜ್ಞರ ಬಳಿ ಟ್ಯೂಷನ್’ಗೆ ಹೋಗಿ ಕಲಿತುಕೊಳ್ಳಿ. ಜನರಿಗೆ ತಪ್ಪು ಸಂದೇಶ ರವಾನೆ ಮಾಡ್ಬೇಡಿ ರಮ್ಯಾ ಮೇಡಂ ಎಂದು ತಿರುಗೇಟು ನೀಡಿದ್ದಾರೆ.
ರಮ್ಯ ಮೇಡಮ್ (ಪದ್ಮಾವತಿ) ಈ ಮಗುವಿನ ವಯಸ್ಸಿನಲ್ಲಿ ನಿಮ್ಮ ತಂದೆಯವರು ನಿಮ್ಮ ಕಿವಿ ಹಿಂಡಿದಿದ್ದರೆ ನೀವು ಹೀಗೆ ಆಗುತ್ತಿರಲಿಲ್ಲ. ನೀವು ಎರಡು ಚುನಾವಣೆಗಳಲ್ಲಿ ನಿಮ್ಮ ಹಕ್ಕು ಅಂದರೆ ಮತ ಚಲಾಯಿಸದವರು, ನಿಮಗೆ ವಿಶ್ವನಾಯಕ ನರೇಂದ್ರ ಮೋದಿಯವರ ಬಗ್ಗೆ ಮಾತಾಡೋಕ್ಕೆ ಯಾವುದೇ ನೈತಿಕತೆ ಇಲ್ಲ. ನಾಳೆ ವೀಡಿಯೋ ಮೂಲಕ ಉತ್ತರ ಕೊಡುತ್ತೇನೆ ಎಂದಿದ್ದರು.
ರಮ್ಯ ಮೇಡಮ್ (ಪದ್ಮಾವತಿ) ಈ ಮಗುವಿನ ವಯಸ್ಸಿನಲ್ಲಿ ನಿಮ್ಮ ತಂದೆಯವರು ನಿಮ್ಮ ಕಿವಿ ಹಿಂಡಿದ್ದರೆ ನೀವು ಹೀಗೆ ಆಗುತ್ತಿರಲಿಲ್ಲ.ನೀವು ಎರಡು ಚುನಾವಣೆಗಳಲ್ಲಿ ನಿಮ್ಮ ಹಕ್ಕು ಅಂದರೆ ಮತ ಚಲಾಯಿಸದವರು ನಿಮಗೆ ವಿಶ್ವನಾಯಕ ನರೇಂದ್ರ ಮೋದಿಯವರ ಬಗ್ಗೆ ಮಾತಾಡೋಕ್ಕೆ ಯಾವುದೇ ನೈತಿಕತೆ ಇಲ್ಲ
ನಾಳೆ ವೀಡಿಯೋ ಮೂಲಕ ಉತ್ತರ ಕೊಡುತ್ತಿನಿ. @divyaspandana pic.twitter.com/UmGlg10fOh— Chowkidar Bullett Prakasha (@BulletPrakash2) April 29, 2019
ಅದರಂತೆ ಇಂದು ವಿಡಿಯೋ ಕೂಡ ಬಿಡುಗಡೆ ಮಾಡಿರುವ ಬುಲೆಟ್ ಪ್ರಕಾಶ್, ’ರಮ್ಯಾ ಅವರು ರಾಷ್ಟ್ರೀಯ ಪಕ್ಷದಲ್ಲಿ ಒಂದು ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ಈ ರೀತಿ ಮಾತಾಡೋದು ಸರಿ ಅಲ್ಲ. ಒಬ್ಬ ನಾಯಕನ ಬಗ್ಗೆ ಹೀಯಾಳಿಸಿ ಮಾತಾಡೋದು ತಪ್ಪು ಅನಿಸಿತ್ತು. ಹೀಗಾಗಿ ನಿನ್ನೆ ನಾನು ಟ್ವೀಟ್ ಮಾಡಿದ್ದೆ. ರಮ್ಯಾ ಅವರ ಮನಸ್ಥಿತಿ ಹೇಗಿದೆ ಅಂದರೆ, ಪಾಕಿಸ್ತಾನ ಸ್ವರ್ಗ. ಇಂತಹವರಿಂದ ನಾವು ಏನು ನಿರೀಕ್ಷೆ ಮಾಡಲು ಸಾಧ್ಯ. ಏನೂ ಮಾಡೋದಕ್ಕೆ ಆಗಲ್ಲ. ಹೀಗಾಗಿ ಇನ್ನು ಮುಂದೆಯಾದರೂ ಮೇಡಂ ಅವರು ರಾಜಕಾರಣದಲ್ಲಿ ಪ್ರೌಢತೆಯನ್ನು ಬೆಳೆಸಿಕೊಳ್ಳಲಿ. ರಾಜಕೀಯ ತಜ್ಞರ ಬಳಿ ಹೋಗಿ ಟ್ಯೂಷನ್ ತೆಗೆದುಕೊಳ್ಳಲಿ. ಹೀಗೆ ಕಲಿತರೆ ತುಂಬಾ ಸಹಾಯವಾಗುತ್ತದೆ. ಸಮಾಜಕ್ಕೂ ಹೆಲ್ಪ್ ಆಗುತ್ತದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಇನ್ನು, ರಮ್ಯಾ ಅವರ ಟ್ವೀಟ್ ನೋಡಿದ ಹಲವರು, ಅವರಿಗೆ ಟ್ವೀಟ್’ಗಳ ಮೂಲಕ ತಿರುಗೇಟು ನೀಡುತ್ತಿದ್ದು, ಹಿಟ್ಲರ್ ಮಗುವಿನ ಜೊತೆ ಇರುವ ಅಸಲಿ ಫೋಟೋ ಟ್ವೀಟ್ ಮಾಡುವ ಮೂಲಕ ರಮ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ರಮ್ಯಾ ಅವರಿಗೆ ಅಸಲಿ ಫೋಟೋ ಇಲ್ಲಿದೆ ನೋಡಿ ಎಂದು ಟ್ವೀಟ್ ಮಾಡಿದ್ದಾರೆ. ಕೆಲವರು ರಾಜೀವ್ ಗಾಂಧಿ ಅವರು ತಮ್ಮ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಇರುವ ಫೋಟೋವನ್ನು ಹಿಟ್ಲರ್ಗೆ ಹೋಲಿಕೆ ಮಾಡಿದ್ದರೆ, ಮತ್ತೆ ಕೆಲವರು ನೆಹರೂ ಅವರು ಮಕ್ಕಳೊಂದಿಗೆ ಇರುವ ಫೋಟೋ ಟ್ವೀಟ್ ಮಾಡಿದ್ದಾರೆ. ಕೆಲವರು ಚಿಕ್ಕ ವಯಸ್ಸಿನಲ್ಲಿ ನಿಮಗೆ ಕಿವಿ ಹಿಂಡಿ ಬುದ್ಧಿ ಹೇಳಲಿಲ್ಲವೇ ? ಎಂದು ರಮ್ಯಾ ಅವರನ್ನು ಪ್ರಶ್ನಿಸಿದ್ದಾರೆ. ಸಾಲದೆಂಬಂತೆ ರಮ್ಯಾ ಅವರು ಓಟು ಹಾಕದಿರುವ ವಿಷಯವನ್ನು ಕೂಡಾ ಪ್ರಸ್ತಾಪ ಮಾಡಿ ಅವರ ಕಾಲೆಳೆದಿದ್ದಾರೆ.
ರಮ್ಯಾ ಅವರು ಟ್ವೀಟ್ ಮಾಡಿರುವ ಫೋಟೋದಲ್ಲಿ ಜರ್ಮನಿಯ ಸರ್ವಾಧಿಕಾರಿ ಹಿಟ್ಲರ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಮಕ್ಕಳೊಂದಿಗೆ ಇದ್ದಾರೆ. ಆದರೆ ಇಲ್ಲಿ ರಮ್ಯಾ ಅವರು ಮಾಡಿರುವ ಎಡವಟ್ಟಾದರೂ ಏನು? ಎಂದರೆ ಅವರು ಹಾಕಿರುವ ಈ ಫೋಟೋದಲ್ಲಿ ಹಿಟ್ಲರ್ ಅವರ ಫೋಟೋವನ್ನು ಫೋಟೋಶಾಪ್ ಮಾಡಲಾಗಿದೆ. ಒರಿಜಿನಲ್ ಫೋಟೋವಿನಲ್ಲಿ ಹಿಟ್ಲರ್ ಮಗುವಿನ ಹೆಗಲನ್ನು ಹಿಡಿದಿರುವ ಫೋಟೋವನ್ನು, ಮಗುವಿನ ಕಿವಿ ಹಿಂಡುವಂತೆ ಫೋಟೋಶಾಪ್ ಮಾಡಲಾಗಿದೆ. ಅದರ ಜೊತೆ ಇದೇ ರೀತಿ ಮೋದಿ ಅವರ ಪುಟ್ಟ ಬಾಲಕನೊಂದಿಗೆ ಇರುವ ಒಂದು ಫೋಟೋಗೆ ಹೋಲಿಕೆ ಮಾಡಿ ಇದರ ಬಗ್ಗೆ ನಿಮ್ಮ ಅಭಿಪ್ರಾಯ ಏನೆಂದು ರಮ್ಯಾ ಟ್ವೀಟ್ ಮಾಡಿದ್ದಾರೆ.
What are your thoughts? pic.twitter.com/b8GcgKL2ih
— Divya Spandana/Ramya (@divyaspandana) April 29, 2019
Discussion about this post