ಸುದ್ಧಿ: ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕ್ರಿಸ್ಮಸ್ ಹಬ್ಬ ಸಮಿಪಿಸುತ್ತಿರುವ ಹಿನ್ನೆಲೆಯಲ್ಲಿ ವಿವಿಡಸ್ ಹೊಟೇಲ್ ನಲ್ಲಿ ಖ್ಯಾತ ನಟಿ ರಾಗಿಣಿ ದ್ವಿವೇದಿ ಕೇಕ್ ಮಿಕ್ಸಿಂಗ್ ಮಾಡುವ ಮೂಲಕ ಕ್ರಿಸ್ಮಸ್ ಹಬ್ಬಕ್ಕೆ ಶುಭ ಕೋರಿದರು.
ಈ ವೇಳೆ ಮಾತನಾಡಿದ ಅವರು, ಕ್ರಿಸ್ಮಸ್ ಹಬ್ಬ ಒಂದು ತಿಂಗಳು ಬಾಕಿ ಇರುವಾಗಲೇ ಕೇಕ್ ತಯಾರಿಯಲ್ಲಿ ಭಾಗವಹಿಸುತ್ತಿರುವುದು ನನಗೆ ಸಂತಸ ತಂದಿದೆ ಎಂದರು.
ಅವರೊಂದಿಗೆ ಮಿಸ್ಟರ್ ಇಂಡಿಯಾ ಕರ್ನಾಟಕ ಶುಭಾ ಶ್ರೀರಾಮ್, ತಮಿಳು ಕಲಾವಿದ ಡ್ಯಾನಿ, ಹೊಟೇಲ್’ನ ಶೆಫ್, ಸಿಬ್ಬಂದಿಗಳು ಮತ್ತು ಅತಿಥಿಗಳು ಒಟ್ಟಿಗೆ ಟೇಬಲ್’ನ ಎದುರು ಸಾಲಾಗಿ ನಿಂತು ಬಣ್ಣ ಬಣ್ಣದ ಚೆರ್ರಿಗಳು, ಖರ್ಜೂರ, ಪ್ಲಮ್ ಹಣ್ಣು, ಅಂಜೂರದ ಹಣ್ಣುಗಳು, ವಿವಿಧ ಬಗೆಯ ಒಣಹಣ್ಣುಗಳ ಮೇಲೆ ಜೇನುತುಪ್ಪ, ರಮ್ ಸುರಿದು ಹದವಾಗಿ ಕೇಕ್ ಮಿಕ್ಸಿಂಗ್ ಮಾಡುತ್ತಾ ಕ್ರಿಸ್ಮಸ್ ಹಬ್ಬದ ಸಡಗರವನ್ನು ಸಂಭ್ರಮಿಸಿದರು.
ಪ್ಲಮ್ ಕೇಕ್ ಕೇವಲ ಒಂದೆರೆಡು ದಿನದಲ್ಲಿ ತಯಾರಿಸಲು ಸಾಧ್ಯವಿಲ್ಲ. ಇದು ಒಂದು ತಿಂಗಳ ಪ್ರಕ್ರಿಯೆ. ಕ್ರಿಸ್ಮಸ್ ಹಬ್ಬ ಬರುವವರೆಗೆ ಇದನ್ನು ಹಾಗೆಯೇ ಇಟ್ಟು ಆಮೇಲೆ ಸೇವಿಸಲಾಗುತ್ತದೆ. ಫ್ಲಮ್ ಕೇಕ್’ಗೆ ರಮ್ ಮಾತ್ರ ಮಿಶ್ರಣ ಮಾಡುತ್ತಿದ್ದು, ಯಾವುದೇ ವೈನ್ ಅಥವಾ ಮದ್ಯವನ್ನು ಬೆರೆಸದೇ ಕೇಕ್ ತಯಾರಿಸುವುದು ವಿಶೇಷ ಎಂದು ಶೆಫ್ ಅಖಿಲ್ ವಿವರಿಸಿದರು.
Get In Touch With Us info@kalpa.news Whatsapp: 9481252093







Discussion about this post