ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯ ತಾಪಮಾನ ಮೂರು ಡಿಗ್ರಿ ಸೆಲ್ಷೀಯಸ್ ದಾಖಲಾಗಿದ್ದು, ಪರಿಣಾಮ ವಿಪರೀತ ಶೀತಗಾಳಿ ಬೀಸಲು ಆರಂಭವಾಗಿದೆ.
ಈ ವರ್ಷದಲ್ಲಿ ದಾಖಲಾಗಿರುವ ಅತಿ ಕಡಿಮೆ ತಾಪಮಾನಕ್ಕೆ ನವದೆಹಲಿ ನಿನ್ನೆ ಅಂದರೆ ಶನಿವಾರ ಸಾಕ್ಷಿಯಾಗಿದ್ದು ಕನಿಷ್ಠ 2.6 ಡಿಗ್ರಿಸೆಲ್ಷೀಯಸ್ ಗರಿಷ್ಠ 20 ಡಿಗ್ರಿ ಸೆಲ್ಷೀಯಸ್ ಗಳು ದಾಖಲಾಗಿ ದಾಖಲೆ ಬರೆದಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಇನ್ನುಇಂದು ಗರಿಷ್ಠ ತಾಪಮಾನ 22.9 ಡಿಗ್ರಿ ಸೆಲ್ಷೀಯಸ್ ಗಳಾಗಿದ್ದು, ಈ ಎರಡೂ ಪ್ರಮಾಣಗಳು ಈ ಬಾರಿಯ ದಾಖಲೆಗಳಾಗಿವೆ. ಹವಾಮಾನ ಇಲಾಖೆಯ ವರದಿಯಂತೆ ಶೀತಗಾಳಿ ಇನ್ನೂ ಕೆಲವು ದಿನ ಮುಂದುವರೆಯಲಿದ್ದು, ಬಹುತೇಕ ಕನಿಷ್ಠ 4 ಡಿಗ್ರಿ ಹಾಗೂ ಗರಿಷ್ಠ 23 ಡಿಗ್ರಿಯಲ್ಲಿರಲಿದೆ ಎಂದು ಹೇಳಿದೆ.
Discussion about this post