No Result
View All Result
Hero Motocorp Glamour x Integrated ABS
English Articles

Hero Motocorp Launches Glamour x With Integrated-ABS

by kalpa News
September 12, 2026
0

Kalpa Media House  |  Bengaluru  | Hero MotoCorp, the world's largest manufacturer of motorcycles and scooters, today announced the launch...

Read moreDetails
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
  • Advertise With Us
  • Grievances
  • About Us
  • Contact Us
Monday, September 14, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಆದಿಶಕ್ತಿ ಅವತಾರ ಕನ್ನಿಕಾ ಪರಮೇಶ್ವರಿ ತಾಯಿಯ ಶಕ್ತಿ ಎಂತಹುದ್ದು ಗೊತ್ತಾ?

ಬೆಂಗಳೂರಿನ ಮಲ್ಲೇಶ್ವರಂ ವಾಸವಿ ದೇವಾಸ್ಥಾನದಲ್ಲಿ ವಾಸವಿ ಜಯಂತಿ ಪ್ರಯುಕ್ತ ಮೇ 10ರಿಂದ 18 ರವರೆಗೆ ಅನೇಕ ಧಾರ್ಮಿಕ ಕೈಂಕರ್ಯ

kalpa News by kalpa News
May 10, 2019
in Special Articles
0
ಆದಿಶಕ್ತಿ ಅವತಾರ ಕನ್ನಿಕಾ ಪರಮೇಶ್ವರಿ ತಾಯಿಯ ಶಕ್ತಿ ಎಂತಹುದ್ದು ಗೊತ್ತಾ?
Share on FacebookShare on TwitterShare on WhatsApp

ಕನ್ಯಕಾಪರಮೇಶ್ವರಿ ಆದಿಶಕ್ತಿ ಅವತಾರ
ಕೃತೇತು ರೇಣುಕಾದೇವಿಂ| ತ್ರೇತಾಯಾಂ ಜನಕಾತ್ಮಜಾಂ|
ದ್ವಾಪರೇ ದ್ರೌಪದೀ ದೇವಿಂ| ಕೃತೇ ವಾಸವ ಕನ್ಯಕಾಂ||
ನಿರಂತರ ಭಜಾಮ್ಯೇವ| ಸಾಕ್ಷಾತ್ರಿಪುರ ಸುಂದರಿಂ|
ಧರ್ಮಾರ್ಥ ಕಾಮ ಮೋಕ್ಷಾರ್ಥಂ| ತ್ರಿಲೋಕ ಜನನಿಂ ಶಿವಾಂ||
ಇತಿಹಾಸವೇ ಹಾಗೆ. ಹೆಣ್ಣಿನ ಔನ್ನತ್ಯವನ್ನು ಪ್ರಬಲವಾದ ನಿದರ್ಶನಗಳ ಮೂಲಕ ಸಾರಿ ಸಾರಿ ಹೇಳುತ್ತದೆ. ತ್ರೇತಾಯುಗದಲ್ಲಿ ಸೀತೇ ರಾವಣನನ್ನು ಧಿಕ್ಕರಿಸಿ, ಮೌನ ಪ್ರತಿಭಟನೆಯಿಂದ ಅಶೋಕ ವನದಲ್ಲಿ ಒಂಟಿಯಾಗಿ ಕಳೆದು, ರಾಮಾಯಣದ ಯುದ್ಧಕಾಂಡಕ್ಕೆ ಮುನ್ನುಡಿ ಹಾಡಿ, ಅಸುರ ಸಂಹಾರಕ್ಕೆ ಪ್ರೇರಣೆಯಾದಳು. ದ್ವಾಪರ ಯುಗದಲ್ಲಿ ದ್ರೌಪದಿ ಛಲ ಮತ್ತು ಹೋರಾಟ ವ್ಯಕ್ತಿತ್ವದಿಂದ ಕುರುಕ್ಷೇತ್ರ ಯುದ್ಧಕ್ಕೆ ನಾಂದಿ ಹಾಡಿ ದುಷ್ಟ ಸಂಹಾರಕ್ಕೆ ಕಾರಣಳಾದಳು.


ವ್ಯಾಪರೋದ್ಯಮವನ್ನೇ ಪ್ರಧಾನ ವೃತ್ತಿಯಾಗಿ ಹೊಂದಿರುವ ಆರ್ಯವೈಶ್ರರ ಕುಲದೇವತೆ ಕನ್ಯಕಾಪರಮೇಶ್ವರಿ. ‘ವಾಸವಿ’ ಲೋಕಮಾತೆಯಾಗಿ ಬೆಳಗಿದ ಅನುಪಮ ತ್ಯಾಗಶೀಲೆ, ಸತ್ಯ ಅಹಿಂಸೆಗಳ ಸಾಕಾರಮೂರ್ತಿ, ಸ್ಕಂದ ಪುರಾಣದಲ್ಲಿ ವಾಸವಿ ಚರಿತ್ರೆಯು ಉಲ್ಲೇಖಗೊಂಡಿದೆ. ನ್ಯಾಯ, ನೀತಿ ಧರ್ಮಗಳ ಅಡಿಗಲ್ಲುಗಳ ಮೇಲೆ ನಿಂತ ಹದಿನೆಂಟು ನಗರಗಳ ರಾಜ್ಯ ರಾಜಧಾನಿ ಪೆನುಗೊಂಡ (ಈಗಿನ ಆಂಧ್ರಪ್ರದೇಶಸ ಪಶ್ಚಿಮ ಗೋದಾವರಿ ಜಿಲ್ಲೆ) ಸಂಪದ್ಭರಿತ ಪದ್ಮಶಯನಪುರದ ರಾಜ ವಿಷ್ಣುವರ್ಧನನ ಸಾಮಂತನಾಗಿದ್ದ, ಕುಬೇರ ವಂಶದ ಕುಸುಮ ಶ್ರೇಷ್ಠ ಪ್ರಜೆಗಳನ್ನು ಮಕ್ಕಳಂತೆ ನೋಡಿಕೊಳ್ಳುತ್ತಿದ್ದ. ರಾಜನಿಗೆ ಮಕ್ಕಳಿಲ್ಲದ ಕೊರಗು, ವ್ರತ-ನಿಯಮ, ದಾನ-ಧರ್ಮ, ಹರಕೆ-ತೀರ್ಥಯಾತ್ರೆಗಳನ್ನು ಮಾಡಿದರೂ ಒಡಲು ಬರಿದು. ಕೊನೆಗೆ ಕುಲಗುರು ಭಾಸ್ಕರಾಚಾರ್ಯರ ನೇತೃತ್ವದಲ್ಲಿ ಪುತ್ರಕಾಮೇಷ್ಠಿಯಾಗದ ಫಲವಾಗಿ ಅವನ ಪತ್ನಿ ಕುಸುಮಾಂಬೆಯಲ್ಲಿ ವೈಶಾಖಮಾಸದ ಶುಕ್ಲಪಕ್ಷದ ದಶಮಿ ಶುಕ್ರವಾರ ಸಂಧ್ಯಾ ಕಾಲದಲ್ಲಿ ವಿಶಿಷ್ಟ ಲಕ್ಷಣದಿಂದ ಕೂಡಿದ ‘ವಾಸವಿ’ ‘ವಿರೂಪಾಕ್ಷ’ರೆಂಬ ಅವಳಿ ಮಕ್ಕಳ ಜನನ.


ವಾಸವಿಗೆ ಚಿಕ್ಕಂದಿನಿಂದಲೇ ಆಧ್ಯಾತ್ಮ ವಿದ್ಯೆಯಲ್ಲಿ ಅಭಿರುಚಿ ಹೆಚ್ಚು. ಲೌಕಿಕವಾದ ಭೋಗ ಭಾಗ್ಯಗಳಲ್ಲಿ ಅನಾಸಕ್ತಿ, ಯೌವ್ವನಕ್ಕೆ ಕಾಲಿರಿಸಿದರೂ ಯಾವುದೇ ರಾಜಕುಮಾರನ ಕೈಹಿಡಿದು ಸುಖ ಸಂಸಾರವನ್ನು ಸಾಗಿಸುವ ಕನಸು ಕಾಣದೆ ಏಕಾಂತ ವ್ಯಾಕುಲತೆ ಅಲೌಕಿಕ ಚಿಂತನೆಗಳಲ್ಲಿಯೇ ಮುಳುಗಿದಳು. ಹೀಗಿರಲು ಶಿವನು ಕನಸಿನಲ್ಲಿ ಕಂಡು ‘ನೀನು ಪಾರ್ವತಿಯ ಅಂಶ. ಮಾನವ ಕುಲಕೋಟಿಯನ್ನು ಧರ್ಮಮಾರ್ಗದಲ್ಲಿ ನಡೆಸಲು ಜನಿಸಿದ್ದೀಯೇ. ಅಗ್ನಿ ಮುಖದಿಂದ ಹುಟ್ಟಿದ ನೀನು ಅಗ್ನಿಮುಖದಲ್ಲಿಯೇ ನನ್ನನ್ನು ಸೇರುತ್ತಿಯೇ. ಮಾನವಳಾಗಿ ಜನಿಸಿದ ನಿನ್ನ ಅವತಾರ ಸಾರ್ಥಕವಾಗಬೇಕಾದರೆ ಸಂಶಯಗ್ರಸ್ತ ಜನರ ಮಂಜಿನ ಪೊರೆ ಕಳಚಿ ಸನ್ಮಾರ್ಗದಲ್ಲಿ ನಡೆಸುವ ಹೊಣೆ ನಿನ್ನದು’ ಎಂದು ಹೇಳಿ ಅಂತರ್ಧಾನನಾಗುತ್ತಾನೆ.


ಒಮ್ಮೆ ವಿಜಯ ಯಾತ್ರೆ ಕೈಗೊಂಡು ಪೆನುಗೊಂಡಕ್ಕೆ ಬರುವ ವಿಷ್ಣುವರ್ಧನ ಮಹಾರಾಜ, ಅಪರಿಮಿತ ಸೌಂದರ್ಯವತಿ ವಾಸವಿಯನ್ನು ಕಂಡು ಅವಳಲ್ಲಿ ಅನುರಕ್ತನಾಗುತ್ತಾನೆ. ವಾಸವಿಯಷ್ಟು ವಯೋಮಾನದ ಮಗನಿದ್ದರೂ ಅವಳನ್ನು ವಿವಾಹವಾಗಲು ಅಪೇಕ್ಷಿಸುತ್ತಾನೆ. ವರ್ಣಾಂತರ ಮತ್ತು ವಯಸ್ಸಿನ ಅಂತರವಿದ್ದುದರಿಂದ ಕುಸುಮ ಶ್ರೇಷ್ಠಿಯು ವಿಷ್ಣುವರ್ಧನನಿಗೆ ಮಗಳನ್ನು ಕೊಡಲು ನಯವಾಗಿ ನಿರಾಕರಿಸುತ್ತಾನೆ.


‘ವಾಸವಿ ಸಾಮಾನ್ಯ ಕನ್ಯೆಯಲ್ಲ. ಇಂದ್ರಿಯ ನಿಗ್ರಹದಿಂದ ಮನಸ್ಸು ಅಂತಃಕರಣಗಳೆಲ್ಲಾ ಪರಿಶುದ್ಧವಾಗಿದೆ. ತಪಸ್ಸಿನ ತಾಪದಿಂದ ದೇಹ ಪ್ರಜ್ವಲಿಸುತ್ತದೆ. ಅಹಂಭಾವ ಸಂಪೂರ್ಣವಾಗಿ ಅಸ್ತಮಿಸಿ ಸಾಧಕಳಾಗಿ ಸಿದ್ಧಿ ಹೊಂದಿದವಳನ್ನು ಬಯಸುವುದು ಮಹಾಪಾಪ ಎಂದು ಎಚ್ಚರಿಸುತ್ತಾರೆ. ಆದರೆ ಯಾರು ಎಷ್ಟು ಹೇಳಿದರೂ ಚಕ್ರವರ್ತಿ ಹಠ ಬಿಡಲಿಲ್ಲ.


ವಿಷ್ಣುವರ್ಧನನು ಯುದ್ಧ ಮಾಡಿ, ವಾಸವಿ ವಿವಾಹವಾಗಲು ಸಿದ್ಧತೆ ನಡೆಸಿದನು. ಆಗ ವಾಸವಿ ತೆಗೆದುಕೊಂಡ ನಿರ್ಧಾರ ಮಾತ್ರ ಅಪ್ರತಿಮ, ಯುದ್ಧಕ್ಕೆ ಅವಕಾಶ ಕೊಡಲಿಲ್ಲ. “ಕೇವಲ ತನ್ನೊಬ್ಬಳ ಹಿತಕ್ಕಾಗಿ ಮುಗ್ಧ ಜನರ ಪ್ರಾಣ ಹಾನಿಯಾಗುತ್ತದೆ ಮತ್ತೆ ಯುದ್ಧ ನಡೆದರೆ ಅಪಾರ ಹಾನಿಯಾಗುತ್ತದೆ” ಎಂದು ನಿರ್ಧರಿಸಿದಳು.

ಆರ್ಥಿಕವಾಗಿ, ಮಾನಸಿಕವಾಗಿ, ದೈಹಿಕವಾಗಿ ಮುಗ್ಧ ಪ್ರಜೆಗಳಿಗೆ ಅಪಾರ ಹಾನಿಯುಂಟು ಮಾಡುವ ಈ ಯುದ್ಧವನ್ನು ಹೇಗಾದರೂ ಮಾಡಿ ತಪ್ಪಿಸಬೇಕೆಂದು ಚಿಂತಿಸಿದ ವಾಸವಿ ಅಗ್ನಿ ಪ್ರವೇಶ ಮಾಡುವ ನಿರ್ಧಾರ ತೆಗೆದುಕೊಂಡಳು. ಅಸಂಖ್ಯಾತ ಜೀವಗಳಿಗೆ ಒಳಿತಾಗುವುದಾದರೆ ತನ್ನ ಆತ್ಮಾಹುತಿ ಯಾಕಾಗಬಾರದು ಎಂದು ಆ ಷೋಡಷಿ ಯೋಚಿಸಿದಳು.


ವಾಸವಿಯ ಆತ್ಮಸ್ಥೈರ್ಯ ಅನನ್ಯವಾದುದು. ಆತ್ಮ ಮಹಾತ್ಯಾಗಕ್ಕಾಗಿ ಅಗ್ನಿ ಪ್ರವೇಶ ಮಾಡಿದಳು. ಧರ್ಮವನ್ನು ಬಿಟ್ಟುಕೊಟ್ಟು ಐಹಿಕ ಸುಖಭೋಗಗಳನ್ನು ಅನುಭವಿಸುವುದಕ್ಕಿಂತ ಧರ್ಮ ಸಂರಕ್ಷಣೆಗಾಗಿ ನಸುನಗುತ್ತ ಅಗ್ನಿ ದಿವ್ಯದಲ್ಲಿ ಬಂದಾಗ ಆತ್ಮಜ್ಯೋತಿ ಬೆಳೆಸಿದ ಆದಿಶಕ್ತಿಯ ಆದರ್ಶ ಅವತಾರ ಶ್ರೀ ವಾಸವಿ ಕನ್ಯಕಾಪರಮೇಶ್ವರಿಯದು. ಯುದ್ಧ ಮತ್ತು ರಕ್ತಪಾತವನ್ನು ತಡೆಗಟ್ಟಿ ಮನುಕುಲಕ್ಕೆ ಶಾಂತಿ ಸಂದೇಶವನ್ನು ನೀಡುವ ಸಲುವಾಗಿ ಅಗ್ನಿ ಪ್ರವೇಶ ಮಾಡಿ ದೇವತಾ ಸ್ಥಾನಮಾನ ಪಡೆದ ಅವತಾರಿಣಿ. ಆಕೆ ಜನಿಸಿದ ವೈಶಾಖ ಶುಕ್ಲದಲ್ಲಿ ದಶಮಿ ‘ಈ ವಾಸವಿ ಕನ್ಯಕಾಪರಮೇಶ್ವರಿ ಜಯಂತಿ’ .

ಮೇ 10 ರಿಂದ ಮಲ್ಲೇಶ್ವರಂ ಆರ್ಯವೈಶ್ಯ ಸಂಘ ಶ್ರೀ ಕನ್ನಿಕಾ ಪರಮೇಶ್ವರಿ ದೇವಾಲಯದಲ್ಲಿ 85ನೇ ವಾಸವಿ ಪ್ರತಿಷ್ಠಾಪನಾ ವಾರ್ಷಿಕೋತ್ಸವ, ವಾಸವಿ ಜಯಂತಿ – ವಾಸವಿ ದರ್ಬಾರ್ ಉತ್ಸವ.


ನಗರದ ಮಲ್ಲೇಶ್ವರಂ 8ನೇ ಕ್ರಾಸಿನಲ್ಲಿರುವ ಶ್ರೀ ವಾಸವಿ ದೇವಾಸ್ಥಾನದಲ್ಲಿ ವಾಸವಿ ಜಯಂತಿ ಪ್ರಯುಕ್ತ ಮೇ 10ರಿಂದ 18 ರವರೆಗೆ ಅನೇಕ ಧಾರ್ಮಿಕ ಕೈಂಕರ್ಯ ವಿಶೇಷ ಅಲಂಕಾರಗಳು ಮತ್ತು ಆರ್ ಪಿ ರವಿಶಂಕರ್ ಸಭಾಂಗಣ , ನಿರಂತರ ಜ್ಞಾನ ಯಜ್ಞ ವೇದಿಕೆಯಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳು ಆಯೋಜಿಸಲಾಗಿದೆ. ಅದ್ದೂರಿಯಾಗಿ ಶ್ರೀ ವಾಸವಿ ಕನ್ಯಕಾ ಪರಮೇಶ್ವರಿ ಜಯಂತಿ ಆಚರಣೆಗೆ ಸಿದ್ಧತೆಗಳು ಭರದಿಂದ ಸಾಗಿದೆ.

ಬೆಂಗಳೂರಿನ ಅತ್ಯಂತ ಪುರಾತನ ಬಡಾವಣೆ ಮಲ್ಲೇಶ್ವರ 8ನೇ ಕ್ರಾಸನ ಈ ದೇಗುಲ ಸ್ಥಾಪನೆಯಾಗಿ ಅಷ್ಟದಶಮಾನಗಳು ಸಂದಿವೆ.


ಕೀರ್ತಿ ಶೇಷ ಸೂತ್ರಂ ಸುಬ್ರಹಣ್ಯ ಶಾಸ್ತ್ರೀ ವಂಶಸ್ಥ ಡಾ. ವೇ. ಮೂ. ಸೂತ್ರಂ ನಾಗರಾಜ ಶಾಸ್ತ್ರೀ ಮತ್ತು ಅಲಂಕಾರ ನಿಪುಣ ಡಾ ಕಿರಣ್ ಕುಮಾರ್ ರವರ ನೇತೃತ್ವದಲ್ಲಿ ವಿದ್ಯುಕ್ತ ಪೂಜಾಕೈಂಕರ್ಯಗಳು ನಡೆಸಿಕೊಂಡು ಬರಲಾಗುತ್ತಿದೆ.


ಕಾರ್ಯಕ್ರಮಗಳ ವಿವರ

  • ಮೇ 10ರಂದು ಅಮ್ಮನವರಿಗೆ ಶತರುದ್ರಾಭಿಷೇಕ, ಮಹಾಗಣಪತಿ ಹೋಮ, ಮಾಂಗಡ್ ಕಾಮಾಕ್ಷಿ ಅಲಂಕಾರ, ಉಯ್ಯಾಲೋತ್ಸವ, ವಿದುಷಿ ಪ್ರಭಾ ಎಸ್ ಜ್ಯೋಯ್ಸ್ ರವರಿಂದ ಭಕ್ತಿಗೀತೆಗಳು
  • ಮೇ 11ರಂದು ಚಂಡಿಕಾಹೋಮ, ಅನ್ನಪೂಣೇಶ್ವರಿ ಅಲಂಕಾರ, ವಿದ್ವಾನ್ ಕೇಶವದಾಸ ಮೂರ್ತಿ ರವರಿಂದ ನಾಮ ಸಂಕೀರ್ತನೆ
  • ಮೇ 12ರಂದು ನವಗ್ರಹ ಹೋಮ ಸಮಯಪುರಿ ಅಮ್ಮನವರ ಅಲಂಕಾರ, ವಿದುಷಿ ಮೈಥಿಲಿ ವರ್ಷಿಣಿ ರವರಿಂದ ಶಾಸ್ತ್ರೀಯ ಸಂಗೀತ
  • ಮೇ 13 ರಂದು ಬನಶಂಕರಿ ಅಮ್ಮನವರ ಅಲಂಕಾರ, ಕುಮಾರಿ ಐಶ್ವರ್ಯ ಮಹೇಶ್, ಕುಮಾರಿ ಸುಪ್ರಿಯ ರವರಿಂದ ಗಾಯನ
  • ಮೇ 14ರಂದು ವಾಸವಿ ಜಯಂತಿ ಪ್ರಯುಕ್ತ ಶ್ರೀವಾಸವಾಂಬ ಹೋಮ, ಅಮ್ಮನವರ ಜೊತೆ ಅಗ್ನಿ ಪ್ರವೇಶ ಮಾಡಿದ 102 ಗೋತ್ರದ ದಂಪತಿಗಳ ಮತ್ತು ಋಷಿವರಿಯರ ಹೆಸರಿನಲ್ಲಿ ದೇವಿಗೆ ಫಲೋದಕ ಸ್ನಾನ ದರ್ಬಾರ್ ರಾಜಕುಮಾರಿ ಅಲಂಕಾರ, ಕು. ಶ್ರೀಲಕ್ಷ್ಮೀ ಮತ್ತು ನಿತ್ಯಶ್ರೀ ರವರಿಂದ ಭರತನಾಟ್ಯ
  • ಮೇ 15 ರಂದು ಸತ್ಯನಾರಾಯಣಸ್ವಾಮಿ ವ್ರತ, ಮೀನಾಕ್ಷಿ ಅಮ್ಮನವರ ಅಲಂಕಾರ, ವಿದ್ವಾನ್ ಪ್ರಶಾಂತ್ ಕುಮಾರ್ ರಾಯ್‍ಬಾಗ್ ರವರಿಂದ ದಾಸರಪದಗಳು
  • ಮೇ 16 ನಕ್ಷತ್ರ ಹೋಮ ಬಾಲ ತ್ರಿಪುರ ಸುಂದರಿ ಅಲಂಕಾರ, ವಿದುಷಿ ಸ್ನೇಹಲತಾ ರವರಿಂದ ಭಕ್ತಿಗೀತೆಗಳು
  • ಮೇ 17 ಮೃತ್ಯುಂಜಯ ಹೋಮ ಚಾಮುಂಡೇಶ್ವರಿ ಅಲಂಕಾರ, ಕುಮಾರಿ ರಕ್ಷಾ ಮತ್ತು ಕು. ಪ್ರಜ್ಞಾ ರವರಿಂದ ಭರತನಾಟ್ಯ
  • ಮೇ 18 ಸತ್ಯನಾರಾಯಣಸ್ವಾಮಿ ಹೋಮ, ಮೂಕಾಂಬಿಕಾ ಅಲಂಕಾರ, ವಿದ್ವಾನ್ ಅನಂತರಾಜು ರವರಿಂದ ಅನ್ನಮಯ್ಯ ಕೀರ್ತನ ಗಾಯನ
    ಲೌಕಿಕ ಉನ್ನತ ಪದವಿಯನ್ನು ತೊರೆದು ತಾಯಿ ವಾಸವಿಯ ಸೇವೆ ಮಾಡಲೆಂದೇ ಕಂಕಣಬದ್ಧರಾಗಿ ನಿಂತ ಅರ್ಚಕರು ಇತರಿಗೆ ಮಾದರಿ , ಸೂಜಿಗಲ್ಲಿನಂತೆ ತನ್ನೆಡೆಗೆ ಸೆಳೆಯುತ್ತಿರುವ ಅಪೂರ್ವ ದೈವಸನ್ನಿಧಿಗೆ ಬರುವ ಭಕ್ತಕೋಟಿಯ ನೆಮ್ಮದಿಯ ತಾಣ ಇದಾಗಿದೆ.

ವರ್ಷದ 365 ದಿನವೂ ದೇವಿಗೆ ವೈವಿಧ್ಯಮಯ ಅಲಂಕಾರಗಳಿಂದ ಸೇವೆ ಸಲ್ಲಿಸುವ ಕಲಾ ನೈಪುಣ್ಯತೆಯು ಇತ್ತೀಚೆಗೆ ಗಿನ್ನೀಸ್ ಬುಕ್ ಆಫ್ ವಲ್ರ್ಡ ರೆರ್ಕಾಡ್ಸ್ ಗೆ ಸೇರ್ಪಡೆಯಾಗಿದೆ. ಕಿರಣ್ ಕುಮಾರ್ ರವರ ಅನನ್ಯ ಸಾಧನೆಯನ್ನು ಗುರುತಿಸಿ ಎರಡು ಗೌರವ ಡಾಕ್ಟರೇಟ್ ಅಲ್ಲದೇ ಅನೇಕ ಅಂತರಾಷ್ಷ್ರೀಯ ಗೌರವ ಪುರಸ್ಕಾರಗಳು ಇವರನ್ನು ಅರಸಿ ಬಂದಿವೆ.

ವಿವರಗಳಿಗೆ: 9845465646 ಗೆ ಸಂಪರ್ಕಿಸಬಹುದು.

Tags: BENGALURUKannada ArticleKannika ParameshwariLordLord Vasaviಆದಿಶಕ್ತಿಕನ್ನಿಕಾ ಪರಮೇಶ್ವರಿವಾಸವಿ ದರ್ಬಾರ್ ಉತ್ಸವ
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಶಿವಮೊಗ್ಗ: ಹದಿಹರೆಯದವರ ಜಾಗೃತಿಗೆ ಮಾನಸ ಟ್ರಸ್ಟ್‌’ನಿಂದ ಮೇ 17ರಂದು ಕಾರ್ಯಾಗಾರ

Next Post

ಅಮ್ಮಂದಿರ ದಿನ: ಮಗನಿಗೇ ಕಣ್ಣಾದ ಮಹಾನ್ ತಾಯಿಯ ಕಣ್ಣೀರಕೋಡಿಯ ಕತೆಯಿದು

kalpa News

kalpa News

Next Post
ಅಮ್ಮಂದಿರ ದಿನ: ಮಗನಿಗೇ ಕಣ್ಣಾದ ಮಹಾನ್ ತಾಯಿಯ ಕಣ್ಣೀರಕೋಡಿಯ ಕತೆಯಿದು

ಅಮ್ಮಂದಿರ ದಿನ: ಮಗನಿಗೇ ಕಣ್ಣಾದ ಮಹಾನ್ ತಾಯಿಯ ಕಣ್ಣೀರಕೋಡಿಯ ಕತೆಯಿದು

Leave a Reply Cancel reply

Your email address will not be published. Required fields are marked *

No Result
View All Result
Hero Motocorp Glamour x Integrated ABS
English Articles

Hero Motocorp Launches Glamour x With Integrated-ABS

by kalpa News
September 12, 2026
0

Kalpa Media House  |  Bengaluru  | Hero MotoCorp, the world's largest manufacturer of motorcycles and scooters, today announced the launch...

Read moreDetails
Bengaluru Banaswadi MEMU Shed GM Inspection

SWR : GM Reviews MEMU Operations and Infrastructure at Banaswadi

September 12, 2026
SWR hubballi-railway-fire-safety-training-emergency

Fire Safety Training Held for Railway Officials and Staff in Hubballi

September 11, 2026
Carnatic Music Intriguing Festival of Raga Tana Pallavi copy

RTP | An intriguing festival of Raga-Tana-Pallavi

September 9, 2026
Anak Krakatau Eeruption Disrupts Flights Indonesia-Singapore

Singapore Issues Travel Advisory as Mount Anak Krakatau Eruption Disrupts 2.3K Flights in Indonesia

September 8, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL