ಕಲ್ಪ ಮೀಡಿಯಾ ಹೌಸ್ | ಅಫಜಲಪುರ |
ನಮಗೆ ಶೌಚಾಲಯದ ಅಗತ್ಯವಿದ್ದು, ಅದನ್ನು ಕಟ್ಟಿಸಿಕೊಡಿ ಸರ್ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ Former CM H D Kumaraswamy ಅವರಿಗೆ ವಿದ್ಯಾರ್ಥಿನಿಯರು ಮನವಿ ಮಾಡಿದ್ದಾರೆ.
ಅಫಜಲಪುರದಲ್ಲಿ ಪಂಚರತ್ನ ಯಾತ್ರೆ ನಡೆಸಿದ ವೇಳೆ ಕುಮಾರಸ್ವಾಮಿ ಅವರನ್ನು ಭೇಟಿಯಾದ ಅಲ್ಲಿನ ವಿದ್ಯಾರ್ಥಿನಿಯರು, ನಮಗೆ ಶೌಚಾಲಯ ಇಲ್ಲದೇ ಸಮಸ್ಯೆ ಉಂಟಾಗಿದೆ. ಬಯಲಿಗೆ ಹೋಗುವುದು ಮುಜುಗರವಾಗುತ್ತದೆ. ನಮಗೆ ಒಂದು ಶೌಚಾಲಯ ಕಟ್ಟಿಸಿಕೊಡಿ ಎಂದು ಮನವಿ ಮಾಡಿದರು.
Also read: ಕಸಾಯಿ ಖಾನೆ ಮೇಲೆ ದಾಳಿ: 7 ಹಸುಗಳ ದಾರುಣ ಹತ್ಯೆ, 8 ಗೋವು ರಕ್ಷಣೆ
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಅವರು, ಇದಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.












Discussion about this post