ಕಲ್ಪ ಮೀಡಿಯಾ ಹೌಸ್ | ಅಗರ್ತಲಾ |
ತ್ರಿಪುರಾ ರಾಜ್ಯದ ಖೋವಾಯ್ ಜಿಲ್ಲೆಯಲ್ಲಿ 6 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ Sexual assault ನಡೆದಿರುವ ಘಟನೆ ಬೆಳಕಿಗೆ ಬಂದಿದೆ.
ಶನಿವಾರ ಬಾಲಕಿ ತನ್ನ ಅಕ್ಕನೊಂದಿಗೆ ಮನೆಯಲ್ಲಿದ್ದ ವೇಳೆ, ಪೋಷಕರು ಹೊರಗೆ ಹೋಗಿದ್ದ ಸಮಯದಲ್ಲಿ ನೆರೆಮನೆಯ 9ನೇ ತರಗತಿ ವಿದ್ಯಾರ್ಥಿ ಬಾಲಕ ಹೂವುಗಳನ್ನು ತೋರಿಸುವ ನೆಪದಲ್ಲಿ ಬಾಲಕಿಯನ್ನು ತನ್ನ ಮನೆಗೆ ಕರೆದೊಯ್ದು ದೌರ್ಜನ್ಯ ಎಸಗಿದ್ದಾನೆ ಎಂದು ತಿಳಿದುಬಂದಿದೆ.
ಪೋಷಕರು ಮನೆಗೆ ಹಿಂದಿರುಗಿದ ನಂತರ ಬಾಲಕಿ ಖಾಸಗಿ ಅಂಗದಲ್ಲಿ ನೋವು ಎಂದು ಹೇಳಿದ್ದಾಳೆ. ಈ ಹಿನ್ನೆಲೆ ತಾಯಿ ಪರಿಶೀಲನೆ ನಡೆಸಿದಾಗ ಘಟನೆ ಬೆಳಕಿಗೆ ಬಂದಿದೆ. ಬಳಿಕ ಬಾಲಕಿಯನ್ನು ವಿಚಾರಿಸಿದಾಗ ನಡೆದ ಸಂಗತಿಯನ್ನು ಆಕೆ ತಾಯಿಗೆ ವಿವರಿಸಿದ್ದಾಳೆ.
Also read: ಶಿವಮೊಗ್ಗ | ಜಾನುವಾರುಗಳಿಗೆ ಸಿಟಿ ಬಸ್ ಡಿಕ್ಕಿ | ಕರು ಸಾವು | ಹಲವು ಕರುಗಳಿಗೆ ಗಾಯ
ಈ ವಿಷಯವನ್ನು ಪತ್ನಿ ತನ್ನ ಪತಿಗೆ ತಿಳಿಸಿದ ನಂತರ, ಮರುದಿನ ಆರೋಪಿ ಬಾಲಕನ ಕುಟುಂಬದವರು ಕ್ಷಮೆಯಾಚನೆಗಾಗಿ ಸಂತ್ರಸ್ತೆಯ ಪೋಷಕರನ್ನು ಸಂಪರ್ಕಿಸಿದ್ದಾರೆಯೆಂದು ತಿಳಿದುಬಂದಿದೆ.
ಘಟನೆ ತಿಳಿದ ಸ್ಥಳೀಯರು ಆರೋಪಿ ಬಾಲಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಪ್ರಕರಣ ಸಂಬಂಧ ಪೋಕ್ಸೋ ಕಾಯ್ದೆ (POCSO Act) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 

















