ಕಲ್ಪ ಮೀಡಿಯಾ ಹೌಸ್ | ಆಗ್ರಾ |
ಯಕಶ್ಚಿತ್ ಒಂದು ಕುರ್ಕುರೆ ಪ್ಯಾಕೇಟ್ #Devorce for Kurkure ತಂದುಕೊಟ್ಟಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕಾಗಿ ಪತಿಗೆ ಪತ್ನಿ ಡೈವೋರ್ಸ್ ನೀಡಿರುವ ವಿಚಿತ್ರ ಘಟನೆ ಉತ್ತರ ಪ್ರದೇಶ ಆಗ್ರಾದಲ್ಲಿ ನಡೆದಿದೆ.
ಕಳೆದ ವರ್ಷ ವಿವಾಹವಾಗಿದ್ದ ಈ ದಂಪತಿ ಅನ್ಯೋನ್ಯವಾಗಿಯೇ ಇದ್ದರು. ಪತ್ನಿಗೆ ಕರಿದ ತಿಂಡಿಗಳು, ಪ್ಯಾಕೇಟ್ ಆಹಾರಗಳು ಎಂದರೆ ಅಚ್ಚುಮೆಚ್ಚು. ಅದರಲ್ಲೂ ಕುರ್ಕುರೆ ಎಂದರೆ ಆಕೆಗೆ ಪ್ರಾಣ. ಹೀಗಾಗಿ ಆಕೆ ಪ್ರತಿದಿನವೂ 5 ರೂ. ಬೆಲೆಯ ಕುರ್ಕುರೆ ಪ್ಯಾಕೇಟ್ ತರುವಂತೆ ಪತಿಗೆ ಕೇಳುತ್ತಿದ್ದಳು.
ಮದುವೆ ಆದ ಮೊದಲ ದಿನದಿಂದಲೇ ಪತ್ನಿಯ ಆಸೆಯಂತೆ ನಿರಂತರವಾಗಿ ಕುರ್ಕುರೆಯನ್ನು ಪತಿ ತಂದುಕೊಡುತ್ತಿದ್ದ. ಆದರೆ, ಪತಿಯ ವೃತ್ತಿ ಜೀವನದ ಒತ್ತಡದಲ್ಲಿ ಹಲವು ಬಾರಿ ತಂದುಕೊಡುವುದನ್ನು ಮರೆತಿದ್ದಾನೆ.
Also read: ಶಿವಮೊಗ್ಗ | ನಾಳೆ ಡಿಸಿಎಂ ಡಿಕೆಶಿ ಹುಟ್ಟುಹಬ್ಬ | ನಗರದಲ್ಲಿ ವಿವಿಧ ಕಾರ್ಯಕ್ರಮ
ಪತಿ ಕುರ್ಕುರೆ ಸರಿಯಾಗಿ ತಂದುಕೊಡದ ಹಿನ್ನೆಲೆಯಲ್ಲಿ ಕೋಪಗೊಂಡ ಪತ್ನಿ ಬಹಳಷ್ಟು ಸಮಯ ಜಗಳವೂ ಸಹ ಆಡಿದ್ದಾಳೆ ಎಂದು ವರದಿಯಾಗಿದೆ. ಇದರಿಂದ ಸಿಟ್ಟಿಗೆದ್ದ ಆಕೆ ತವರು ಮನೆಗೆ ಹೋಗಿದ್ದಾಳೆ.
ಎರಡು ತಿಂಗಳ ಬಳಿಕ ತವರು ಮನೆಯಿಂದಲೇ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾಳೆ. ಆದರೆ ಡಿವೋರ್ಸ್ ನಲ್ಲಿ ಪತ್ನಿ ನನ್ನ ಪತಿ ನಾನು ಹೇಳಿದ 5 ರೂಪಾಯಿ ಕುರ್ಕುರೆ ತಂದು ಕೊಡಲಿಲ್ಲ. ನನ್ನನ್ನು ನಿರ್ಲಕ್ಷಿಸಿದ್ದಾರೆ ಎನ್ನುವ ಕಾರಣವನ್ನು ಕೊಟ್ಟಿದ್ದಾರೆ.
ಪತಿ ಹಾಗೂ ಪತ್ನಿ ಇಬ್ಬರನ್ನು ಕೌನ್ಸಿಲಿಂಗ್ ಮಾಡಲಾಗಿದೆ. 6 ತಿಂಗಳಿನಿಂದ ಪತ್ನಿಯ ವರ್ತನೆ ಬದಲಾಗಿದೆ. ಪ್ರತಿ ದಿನ 5 ರೂಪಾಯಿ ಕುರ್ಕುರೆ ತರಲು ಹೇಳಿದ್ದೆ. ಒಂದು ದಿನವೂ ತರದೆ ಅಸಡ್ಡೆ, ನಿರ್ಲಕ್ಷ್ಯ ಮಾಡಿದ್ದಾರೆ. ಇವರೊಂದಿಗೆ ಜೀವನ ನಡೆಸಲು ಸಾಧ್ಯವಿಲ್ಲ ಎಂದ ಪತ್ನಿ ದೂರಿದ್ದಾಳೆ. ಈ ವೇಳೆ ಪತಿ ತನಗೆ ಥಳಿಸಿದ ಕಾರಣ ತವರಿಗೆ ಹೋಗಿದ್ದೇನೆ ಎನ್ನುವ ಮಾತನ್ನೂ ಕೂಡ ಮಹಿಳೆ ಹೇಳಿದ್ದಾರೆ ಎಂದು ಹೇಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
























