ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಕೃಷಿ ಸಚಿವ ಬಿ.ಸಿ. ಪಾಟೀಲ್ ಇಂದು ಜಿಲ್ಲೆಯ ಜಡೆ ಸಂಸ್ಥಾನ ಮಠದ ಶಾಖಾ ಸೊರಬದ ಮುರುಘಾಮಠಕ್ಕೆ ಭೇಟಿ ನೀಡಿ ಡಾ.ಮಹಾಂತ ಶ್ರೀಗಳ ಆಶೀರ್ವಾದ ಪಡೆದರು.
ಕೃಷಿ ಸಚಿವರಾದ ಬಳಿಕ ಮೊದಲ ಬಾರಿಗೆ ಸೊರಬಕ್ಕೆ ಆಗಮಿಸಿದ ಬಿ.ಸಿ. ಪಾಟೀಲ್‌ರನ್ನು ತಾಲೂಕು ವೀರಶೈವ ಮಹಾಸಭಾ ಹಾಗೂ ಮಠದ ವತಿಯಿಂದ ಸನ್ಮಾನಿಸಲಾಯಿತು.
ಡಾ.ಮಹಾಂತ ಸ್ವಾಮೀಜಿ ಮಾತನಾಡಿ, ಜಡೆ ಮಠದ ಉದ್ಘಾಟನೆ ಸಂದರ್ಭದಲ್ಲಿ ಬಿ.ಸಿ. ಪಾಟೀಲರು ಜಡೆಮಠಕ್ಕೆ ಆಗಮಿಸಿದ್ದರು. ಪಕ್ಕದ ಯಲವಾಳ ಗ್ರಾಮದವರೇ ಆಗಿರುವ ಇವರು ದಕ್ಷ ಪೊಲೀಸ್ ಆಗಿ, ಚಿತ್ರನಟರಾಗಿ, ಶಾಸಕರಾಗಿ ಜನರಿಗೆ ಹತ್ತಿರವಾಗಿದ್ದರು. ಈಗ ಕೃಷಿ ಸಚಿವರಾಗಿ ರೈತರಿಗೆ ಆಶಾಕಿರಣವಾಗುತ್ತುರುವುದು ಬಹಳ ಹಮ್ಮೆಯ ಸಂಗತಿ. ಸಚಿವರಿಗೆ ಇನ್ನಷ್ಟು ಶ್ರೇಯಸು ದಕ್ಕಲಿ ಎಂದು ಹಾರೈಸಿದರು.
ಹಿರಿಯ ಪತ್ರಕರ್ತ ಯು.ಎನ್. ಲಕ್ಷ್ಮೀಕಾಂತ್ ಮಾತನಾಡಿ, ಸೊರಬದ ಮೂಲದವರೇ ಆದ ಬಿ.ಸಿ. ಪಾಟೀಲರು ಈಗ ಕೃಷಿಸಚಿವರಾಗಿರುವುದು ಹಮ್ಮೆಯ ವಿಷಯ. ಕೃಷಿ ಸಚಿವರಾಗಿ ಲಾಕ್ ಡೌನ್ ಸಂದರ್ಭದಲ್ಲಿ ರೈತರಿಗೆ ಸಾಕಷ್ಟು ಅನುಕೂಲ ಕಲ್ಪಿಸಿದ್ದಾರೆ. ಸತತ ಜಿಲ್ಲಾ ಪ್ರವಾಸ ಮಾಡಿ ರೈತರ ಕಷ್ಟನಷ್ಟಗಳನ್ನು ಅಲಿಸುತ್ತಿರುವುದು ಶ್ಲಾಘನೀಯ ಎಂದರು.
ವೀರಶೈವ ಸಮಾಜದ ಶಿವಯೋಗಿ ಮಾತನಾಡಿ, ಬಿ.ಸಿ. ಪಾಟೀಲರು ರೈತಪ್ರಿಯ ಸಚಿವರು. ಜನಾನುರಾಗಿಯಾಗಿರುವ ಇವರ ಸೇವೆ ಶ್ಲಾಘನೀಯ. ಮಠಕ್ಕೆ ಭೇಟಿ ನೀಡಿರುವುದು ಸಂತಸದ ಸಂಗತಿ. ರೈತಪರ ಕಾಳಜಿಗೆ ಸತತ ಶ್ರಮಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಇಂದೂಧರ ಒಡೆಯರ್, ನಾಗಪ್ಪ ವಕೀಲರು, ಬಸರಾಜಪ್ಪ ಬಾರಂಗಿ, ಚಂದ್ರಣ್ಣ ಸೊರಬ, ನಾಗರಾಜ ಗುತ್ತಿ, ರೇಣುಕಮ್ಮ ಗೌಳಿ ಸೇರಿದಂತೆ ಮತ್ತಿತರರಿದ್ದರು.
(ವರದಿ: ಕೃಷಿ ಸಚಿವರ ಮಾಧ್ಯಮ ಕಾರ್ಯದರ್ಶಿ)
Get in Touch With Us info@kalpa.news Whatsapp: 9481252093
Discussion about this post