ಕಲ್ಪ ಮೀಡಿಯಾ ಹೌಸ್ | ಆಗುಂಬೆ |
ಇಲ್ಲಿನ ನೇರಳಕುಡಿಗೆ ಬಳಿಯಲ್ಲಿ ಭಾರೀ ಪ್ರಮಾಣದಲ್ಲಿ ಧರೆ/ರಸ್ತೆ ಕುಸಿದಿದ್ದು, ಪರಿಣಾಮವಾಗಿ ಶೃಂಗೇರಿಯಿಂದ Shringeri ಆಗುಂಬೆ-ಉಡುಪಿ Agumbe-Udupi ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ.
ಮಳೆಯ ತೀವ್ರತೆಗೆ ನಿನ್ನೆ ರಾತ್ರಿ ಇಲ್ಲಿ ಧರೆ ಕುಸಿತಕ್ಕೆ ರಸ್ತೆ ಕೊಚ್ಚಿ ಹೋಗಿದೆ. ಅಲ್ಲದೇ ಈ ಭಾಗದಲ್ಲಿ ಬಹಳಷ್ಟು ಮರಗಳು ಧರೆಗೆ ಉರುಳಿದ್ದು, ಇನ್ನಷ್ಟು ಸಮಸ್ಯೆಯನ್ನು ಸೃಷ್ಠಿಸಿದೆ. ಪರಿಣಾಮವಾಗಿ ಆಗುಂಬೆ-ಶೃAಗೇರಿ ಸಂಪರ್ಕ ಸ್ಥಗಿತಗೊಂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ಶೃಂಗೇರಿಯಿAದ ಉಡುಪಿ ಕಡೆಗೆ ತೆರಳುವ ವಾಹನ ಸವಾರರು ಈಗ ಬದಲಿ ರಸ್ತೆಯನ್ನು ಹುಡುಕಿ ತೆರಳುತ್ತಿದ್ದಾರೆ.
Also read: ಪತ್ನಿಯನ್ನು ಕೊಂದು ಕಡಾಯಿಯಲ್ಲಿ ಬೇಯಿಸಿದ ಕ್ರೂರ ಪತಿ: ಘಟನೆ ನಡೆದಿದ್ದೆಲ್ಲಿ?
ಸ್ಥಳದಲ್ಲಿ ಪೊಲೀಸರು ಬ್ಯಾರಿಕೇಟ್ ಅಳವಡಿಸಿ, ಸ್ಥಳೀಯರಿಗಾಗಿ ತಾತ್ಕಾಲಿಕ ರಸ್ತೆ ಸಂಚಾರಕ್ಕೆ ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post