ಕಲ್ಪ ಮೀಡಿಯಾ ಹೌಸ್ | ಅಹಮದಾಬಾದ್ |
ವಿಶ್ವಕಪ್ World Cup 2023 ಅಂತಿಮ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯಾದ ವಿರುದ್ಧ ಸೋತರೂ ಭಾರತ ತಂಡವನ್ನು ಭೇಟಿಯಾಗಿರುವ ಪ್ರಧಾನಿ ನರೇಂದ್ರ ಮೋದಿ PM Narendra Modi ಅವರು ಆಟಗರರನ್ನು ಆತ್ಮೀಯವಾಗಿ ಅಪ್ಪಿಕೊಂಡು ಸಂತೈಸಿದ್ದಾರೆ.
ಪಂದ್ಯ ಮುಕ್ತಾಯದ ಬಳಿಕ ಆಟಗಾರರು ಸೋಲಿನಿಂದ ಕುಗ್ಗಿ ಹೋಗಿದ್ದರು. ಈ ವೇಳೆ ನೇರವಾಗಿ ಡ್ರಸ್ಸಿಂಗ್ ರೂಂಗೆ ತೆರಳಿದ ಪ್ರಧಾನಿ ನರೇಂದ್ರ ಮೋದಿಯವರು, ಆಟಗಾರರನ್ನು ಅಪ್ಪಿಕೊಂಡು ಸಂತೈಸಿ, ನಿಮ್ಮೊಂದಿಗೆ ಇಡಿಯ ದೇಶವಿದೆ, ಹೆದರುವ ಅಗತ್ಯವಿಲ್ಲ ಎಂದು ಧೈರ್ಯ ತುಂಬಿದ್ದಾರೆ.
ವಿಶ್ವದ ಗಮನ ಸೆಳೆದಿರುವ ಸ್ಟಾರ್ ಆಟಗಾರ ಶಮಿ Mohammad Shami ಅವರನ್ನು ಪ್ರಧಾನಿಯವರು ಅಪ್ಪಿಕೊಂಡು ಸಾಂತ್ವಾನ ಹೇಳಿದರು.
Unfortunately yesterday was not our day. I would like to thank all Indians for supporting our team and me throughout the tournament. Thankful to PM @narendramodi for specially coming to the dressing room and raising our spirits. We will bounce back! pic.twitter.com/Aev27mzni5
— 𝕸𝖔𝖍𝖆𝖒𝖒𝖆𝖉 𝖘𝖍𝖆𝖒𝖎 (@MdShami11) November 20, 2023
ಈ ಕುರಿತಂತೆ ಎಕ್ಸ್(ಟ್ವೀಟ್) ಮಾಡಿರುವ ಮೊಹಮದ್ ಶಮಿ, ದುರದೃಷ್ಟವಶಾತ್ ನಿನ್ನೆಯ ದಿನ ನಮ್ಮದಾಗಿರಲಿಲ್ಲ. ಪಂದ್ಯಾವಳಿಯುದ್ದಕ್ಕೂ ನಮ್ಮ ತಂಡ ಮತ್ತು ನನ್ನನ್ನು ಬೆಂಬಲಿಸಿದ್ದಕ್ಕಾಗಿ ನಾನು ಎಲ್ಲಾ ಭಾರತೀಯರಿಗೆ ಧನ್ಯವಾದ ಹೇಳಲು ಬಯಸುತ್ತೇನೆ. ವಿಶೇಷವಾಗಿ ಡ್ರೆಸ್ಸಿಂಗ್ ಕೋಣೆಗೆ ಬಂದು ನಮ್ಮ ಉತ್ಸಾಹವನ್ನು ಹೆಚ್ಚಿಸಿದ್ದಕ್ಕೆ ಪ್ರಧಾನಿ ಮೋದಿ ಅವರಿಗೆ ಧನ್ಯವಾದ ಹೇಳುತ್ತೇನೆ. ನಾವು ಮತ್ತೆ ಪುಟಿದೇಳುತ್ತೇವೆ ಎಂದು ಬರೆದುಕೊಂಡಿದ್ದಾರೆ.
Also read: ಶಿವಮೊಗ್ಗ | ಹೊಸಮನೆ ಕಾಂಕ್ರೀಟ್ ರಸ್ತೆ, ಕನ್ಸರ್ವೆನ್ಸಿ ಕಾಮಗಾರಿಗೆ ಚಾಲನೆ
We had a great tournament but we ended up short yesterday. We are all heartbroken but the support of our people is keeping us going. PM @narendramodi’s visit to the dressing room yesterday was special and very motivating. pic.twitter.com/q0la2X5wfU
— Ravindrasinh jadeja (@imjadeja) November 20, 2023
ಇದೇ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಜಡೇಜಾ, jadeja ಟೂರ್ನಿಯಲ್ಲಿ ನಾವು ಉತ್ತಮವಾಗಿ ಆಡಿದ್ದರೂ ನಿನ್ನೆ ನಾವು ಮುಗ್ಗರಿಸಿದ್ದೇವೆ. ಜನರು ಈಗಲೂ ನಮ್ಮನ್ನು ಬೆಂಬಲಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಿನ್ನೆ ನಮ್ಮ ಡ್ರೆಸ್ಸಿಂಗ್ ರೂಮ್’ಗೆ ಭೇಟಿ ನೀಡಿದ್ದು ವಿಶೇಷ ಮತ್ತು ಪ್ರೇರಕವಾಗಿತ್ತು ಎಂದು ಬರದುಕೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post