ಕಲ್ಪ ಮೀಡಿಯಾ ಹೌಸ್ | ಆಹಮದಾಬಾದ್ |
ಮದರಸಾದ ಸಮೀಕ್ಷೆಗೆ ತೆರಳಿದ್ದ ಶಿಕ್ಷಕನ ಮೇಲೆ ಗುಂಪೊಂದು ಹಲ್ಲೆ #Attack on the teacher in Ahmedabad ನಡೆಸಿರುವ ಘಟನೆ ಗುಜರಾತಿನ ಅಹಮದಾಬಾದ್ ನಗರದಲ್ಲಿ ನಡೆದಿದೆ.
ಶೃತಿ ಹೈರ್ಯ ಸೆಕೆಂಡರಿ ಶಾಲೆಯ ಪ್ರಾಂಶುಪಾಲ ಸಂದೀಪ್ ಪಟೇಲ್ ಹಲ್ಲೆಗೊಳಗಾದವರು. ಸಂದೀಪ್ ಪಾಟೀಲ್ ಸರ್ಕಾರಿ ಅಧಿಕಾರಿಯಾಗಿ ನಗರದ ದರಿಯಾಪುರ ಪ್ರದೇಶದಲ್ಲಿರುವ ಮದರಸಾದ ಪರಿಶೀಲನೆಗೆ ತೆರಳಿದ್ದರು. ಪರಿಶೀಲನೆ ವೇಳೆ ಮದರಸಾದಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆ ಮತ್ತು ಅಲ್ಲಿಯ ಮೂಲಭೂತ ಸೌಕರ್ಯಗಳ ಬಗ್ಗೆ ವಿವರಗಳನ್ನು ಸಂಗ್ರಹಿಸಲಾಗುತ್ತಿತ್ತು. ಸಂದೀಪ್ ಪಾಟೀಲ್ ಮದರಸಾದ ಫೋಟೋ ಕ್ಲಿಕ್ ಮಾಡುತ್ತಿರುವಾಗ ಐದರಿಂದ ಏಳು ಜನರ ಗುಂಪು ಹಲ್ಲೆ ನಡೆಸಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಬೆಳಕಿಗೆ ಬರುತ್ತಿದ್ದಂತೆ ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಇಬ್ಬರನ್ನು ಬಂಧಿಸಿ, ಇನ್ನುಳಿದವವರಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ. ಘಟನೆ ಸಂಬಂಧ ಇಬ್ಬರನ್ನು ಬಂಧಿಸಿದ್ದೇವೆ. ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ಈ ಕುರಿತು ಅಹಮದಾಬಾದ್ ಮುನ್ಸಿಪಲ್ ಕಾರ್ಪೊರೇಷನ್ (ಎಎಂಸಿ) ಶಿಕ್ಷಣ ಸಮಿತಿಯ ಅಧಿಕಾರಿ ಲಬ್ಧೀð ದೇಸಾಯಿ ಪ್ರತಿಕ್ರಿಯೆ ನೀಡಿದ್ದು, ಸರ್ಕಾರದ ಆದೇಶದಂತೆ ನಗರದಲ್ಲಿರುವ ಹಲವು ಮದರಸಾಗಳ ಸಮೀಕ್ಷೆ ನಡೆಸಲಾಗುತ್ತಿದೆ. ನಾವು 175 ಮದರಸಾಗಳಲ್ಲಿ ಸಮೀಕ್ಷೆ ನಡೆಸಿದ್ದೇವೆ. ಸಮೀಕ್ಷೆಯ ಪ್ರತಿ ತಂಡವು ಇಬ್ಬರು ಸದಸ್ಯರನ್ನು ಒಳಗೊಂಡಿದೆ ಎಂದು ಹೇಳಿದ್ದಾರೆ.
ಘಟನೆ ಹಿನ್ನೆಲೆ
ಸಂದೀಪ್ ಪಾಟೀಲ್ ದರಿಯಾಪುರ ಪ್ರದೇಶದ ಮದರಸಾಕ್ಕೆ ತೆರಳಿದ್ದರು. ಇನ್ನು ಮದರಸಾದೊಳಗೆ ಸಂದೀಪ್ ಪಾಟೀಲ್ ಹೋಗಿರಲಿಲ್ಲ. ಮೊದಲು ಫೋಟೋ ಕ್ಲಿಕ್ ಮಾಡಲು ಶುರು ಮಾಡಿದ್ದಾರೆ. ಸಂದೀಪ್ ಪಾಟೀಲ್ ಬಳಿ ಬಂದ ಐದರಿಂದ ಏಳು ಜನರ ಗುಂಪು, ಯಾರು ನೀನು? ಇಲ್ಲಿ ಏನು ಮಾಡುತ್ತಿದ್ದೀಯಾ ಎಂದು ಪ್ರಶ್ನೆ ಮಾಡಿದ್ದಾರೆ. ಈ ವೇಳೆ ತಾನೊಬ್ಬ ಶಾಲೆಯ ಪ್ರಾಂಶುಪಾಲರಾಗಿದ್ದು, ಸರ್ಕಾರಿ ಅಧಿಕಾರಿಯಾಗಿ ಮದರಸಾದ ಪರಿಶೀಲನೆಗೆ ಬಂದಿರೋದಾಗಿ ಸಂದೀಪ್ ಪಾಟೀಲ್ ಹೇಳಿದ್ದಾರೆ. ಸರ್ಕಾರದ ಆದೇಶದಂತೆ ಫೋಟೋಗಳನ್ನು ತೆಗೆದಕೊಳ್ಳುತ್ತಿದ್ದೇನೆ ಎಂದು ವಿವರಿಸಿದ್ದಾರೆ. ಆದರೂ ಜನರ ಗುಂಪು ಸಂದೀಪ್ ಪಾಟೀಲ್ ಮೇಲೆ ಹಲ್ಲೆ ನಡೆಸಿ, ಬಲವಂತವಾಗಿ ಮೊಬೈಲ್ ಕಿತ್ಕೊಂಡಿದ್ದಾರೆ. ಕೊನೆಗೆ ಸಂದೀಪ್ ಪಾಟೀಲ್ ಪ್ರಾಣ ಉಳಿಸಿಕೊಳ್ಳಲು ಅಲ್ಲಿಂದ ಓಡಿ ಬಂದಿದ್ದಾರೆ ಎಂದು ಸ್ಥಳೀಯ ಪೊಲೀಸರೊಬ್ಬರು ಹೇಳಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
























