ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (AICC) ಒಬಿಸಿ ಕಾಂಗ್ರೆಸ್ ಮಹಿಳಾ ವಿಭಾಗದ ಕರ್ನಾಟಕ ರಾಜ್ಯ ಸಂಚಾಲಕರನ್ನಾಗಿ ಶಿವಮೊಗ್ಗದ (Shivamogga) ಕವಿತಾ ತೋರತ್ ಎಂ.ಬಿ. ಅವರನ್ನು ನೇಮಕ ಮಾಡಲಾಗಿದೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಒಬಿಸಿ ವಿಭಾಗದ ಅಧ್ಯಕ್ಷ ಡಾ. ಅನಿಲ್ ಜೈಹಿಂದ್ ಅವರು ವಿವಿಧ ರಾಜ್ಯಗಳಿಗೆ ಸಂಚಾಲಕರು ಹಾಗೂ ಸಹ ಸಂಚಾಲಕರನ್ನು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. ಕರ್ನಾಟಕದ ರಾಜ್ಯ ಸಂಚಾಲಕರಾಗಿ ಕವಿತಾ ತೋರತ್ ಎಂ.ಬಿ. ಹಾಗೂ ಸಹ ಸಂಚಾಲಕರಾಗಿ ಸುಧಾ ಇತ್ತಿಗುಡಿ ಅವರನ್ನು ನೇಮಕ ಮಾಡಲಾಗಿದೆ.
ವಿವಿಧ ರಾಜ್ಯಗಳಿಗೆ ಪದಾಧಿಕಾರಿಗಳ ನೇಮಕ
ರಾಜಸ್ಥಾನದ ರಾಜ್ಯ ಸಂಚಾಲಕರಾಗಿ ಸಾಮಾ ಬಾನೋ ಹಾಗೂ ಸಹ ಸಂಚಾಲಕರಾಗಿ ಉಮಾ ಕರಾಲ್ ಅವರನ್ನು ನೇಮಿಸಲಾಗಿದೆ. ಗುಜರಾತ್ ರಾಜ್ಯ ಸಂಚಾಲಕರಾಗಿ ಹೇತಲ್ ಪಂಚಾಲ್ ಹಾಗೂ ಸಹ ಸಂಚಾಲಕರಾಗಿ ಲಕ್ಷ್ಮೀಬೆನ್ ಕರೇನ್ ಚೌಧರಿ ಅವರನ್ನು ಆಯ್ಕೆ ಮಾಡಲಾಗಿದೆ.
ಮಹಾರಾಷ್ಟ್ರದ ರಾಜ್ಯ ಸಂಚಾಲಕರಾಗಿ ವಿಮಲ್ ಬಾಬು ಕಾತ್ರೆ ಹಾಗೂ ಸಹ ಸಂಚಾಲಕರಾಗಿ ಲಲಿತಾ ಭಗವಾನ್ ಕುಂಭಾರ್ ಅವರನ್ನು ನೇಮಕ ಮಾಡಲಾಗಿದೆ.

AICC: ಸಂಘಟನೆ ಬಲಪಡಿಸಲು ಸೂಚನೆ
ಹೊಸದಾಗಿ ನೇಮಕಗೊಂಡ ಎಲ್ಲ ಪದಾಧಿಕಾರಿಗಳು ಸಂಘಟನೆಯನ್ನು ಮತ್ತಷ್ಟು ಬಲಪಡಿಸಲು ಸಮರ್ಪಣೆ ಮತ್ತು ಬದ್ಧತೆಯಿಂದ ಕಾರ್ಯನಿರ್ವಹಿಸಬೇಕು. ಆಯಾ ರಾಜ್ಯ ಘಟಕಗಳೊಂದಿಗೆ ಸಮನ್ವಯ ಸಾಧಿಸಿ ಪಕ್ಷದ ಸಂಘಟನಾ ಚಟುವಟಿಕೆಗಳನ್ನು ಪರಿಣಾಮಕಾರಿಯಾಗಿ ಮುನ್ನಡೆಸಬೇಕು ಎಂದು ಸೂಚಿಸಲಾಗಿದೆ.
Also Read>> ಕೊಲ್ಕತ್ತಾದಲ್ಲಿ ಭೀಕರ ಕಾಲ್ತುಳಿತ | ಮೃತರ ಸಂಖ್ಯೆ 19ಕ್ಕೆ ಏರಿಕೆ? ಹೇಗಾಯ್ತು ಘಟನೆ?
ಇದರೊಂದಿಗೆ ಒಬಿಸಿ ಸಮುದಾಯಗಳನ್ನು ಸಂಘಟಿಸುವುದು, ವಿಶೇಷವಾಗಿ ಒಬಿಸಿ ಮಹಿಳೆಯರ ಕಲ್ಯಾಣ ಹಾಗೂ ಹಕ್ಕುಗಳಿಗಾಗಿ ಸಕ್ರಿಯವಾಗಿ ಶ್ರಮಿಸುವ ಜವಾಬ್ದಾರಿಯನ್ನು ನೂತನ ಪದಾಧಿಕಾರಿಗಳಿಗೆ ನೀಡಲಾಗಿದೆ ಎಂದು ಎಐಸಿಸಿ ಒಬಿಸಿ ವಿಭಾಗದ ಅಧ್ಯಕ್ಷ ಡಾ. ಅನಿಲ್ ಜೈಹಿಂದ್ ನೇಮಕಾತಿ ಆದೇಶದಲ್ಲಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news













