ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ನವದೆಹಲಿ: ಗಡಿಯಲ್ಲಿ ಚೀನಾ ಕಾಲು ಕೆರೆದುಕೊಂಡು ಕ್ಯಾತೆ ತೆಗೆದು ಪರಿಸ್ಥಿತಿ ಗಂಭೀರವಾಗಿರುವ ಹಿನ್ನೆಲೆಯಲ್ಲಿ ಚೀನಾಕ್ಕೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿರುವ ಭಾರತೀಯ ವಾಯು ಸೇನೆಯ ಏರ್ ಚೀಫ್ ಮಾರ್ಷಲ್, ಎಂತಹುದ್ದೇ ಪರಿಸ್ಥಿತಿಯನ್ನು ಎದುರಿಸಿ, ಶತ್ರುಗಳಿಗೆ ಮಣ್ಣು ಮುಕ್ಕಿಸಲು ಸಾವು ಸನ್ನದ್ಧರಾಗಿದ್ದೇವೆ ಎಂಬರ್ಥದಲ್ಲಿ ಮಾತನಾಡಿದ್ದಾರೆ.
ಈ ಕುರಿತಂತೆ ಹೈದರಾಬಾದ್’ನಲ್ಲಿ ಪ್ರತಿಕ್ರಿಯೆ ನೀಡಿರುವ ಭಾರತೀಯ ವಾಯು ಪಡೆಯ ಏರ್ ಚೀಫ್ ಮಾರ್ಷಲ್ ಆರ್’ಕೆಎಸ್ ಬದೌರಿಯಾ, ಲಡಾಖ್‌ನ ಗಾಲ್ವಾನ್‌ನಲ್ಲಿ ನಮ್ಮ ಕೆಚ್ಚೆದೆಯ ಸೈನಿಕರು ಮಾಡಿದ ಸರ್ವೋಚ್ಚ ತ್ಯಾಗವನ್ನು ವಾಯುಪಡೆಯು ಎಂದಿಗೂ ವ್ಯರ್ಥವಾಗಲು ಬಿಡುವುದಿಲ್ಲ ಎಂಬ ಸ್ಪಷ್ಟ ಮಾತುಗಳನ್ನಾಡಿದ್ದಾರೆ.
ಯಾವುದೇ ರೀತಿಯ ಅನಿರೀಕ್ಷಿತ ಹಾಗೂ ಆಘಾತಕಾರಿ ಸಂದರ್ಭವನ್ನು ಎದುರಿಸಲು ನಾವು ಸರ್ವ ಸನ್ನದ್ಧವಾಗಿದ್ದೇವೆ. ದೇಶಕ್ಕಾಗಿ ಗಾಲ್ವಾನ್’ನಲ್ಲಿ ಹುತಾತ್ಮರಾದ ನಮ್ಮ ವೀರ ಯೋಧರ ಸಾಹಸ, ತ್ಯಾಗ ಹಾಗೂ ಬಲಿದಾನ ವ್ಯರ್ಥವಾಗಲು ಬಿಡುವ ಚಿಂತನೆ ಸಹ ನಮ್ಮಲ್ಲಿಲ್ಲ ಎಂದಿದ್ದಾರೆ.
Get In Touch With Us info@kalpa.news Whatsapp: 9481252093















