ಆಳದಂಗಡಿ: ಅತೀ ಪುರಾತನವಾದ ಈಗಲೂ ಸಂಪ್ರಾದಯಗಳನ್ನು ಉಳಿಸಿ ಬೆಳೆಸಿಕೊಂಡು ಬಂದಿರುವ ಅಜಿಲ ಸೀಮೆಯ ಊರು ಅಳದಂಗಡಿ. ಇಲ್ಲಿಯ ಅರಸರು ತಿಮ್ಮಣ್ಣರಸರಾದ ಡಾ ಪದ್ಮಪ್ರಸಾದ ಅಜಿಲರ ಶುಭಾಶೀರ್ವಾದಗಳೊಂದಿಗೆ ಆಗಸ್ಟ್ 5 ರಂದು ತುಳುಕೂಟ 2018 ಕಾರ್ಯಕ್ರಮ ಜರುಗಲಿದೆ.
ಇಡೀ ದಿನ ಸತ್ಯದೇವತಾ ಮೈದಾನದಲ್ಲಿ ನಡೆಯುವ ಕೂಟದಲ್ಲಿ ಸಾರ್ವಜನಿಕರಿಗೆ ತುಳುಗೊಬ್ಬು ಅಂದರೆ ಕೊತ್ತಲಾಯಿ ಕ್ರಿಕೆಟ್ ಲಗೋರಿ, ಕುಟ್ಟಿ ದೊಣ್ಣೆ ಇನ್ನಿತರ ತುಳು ಆಟಗಳು, ಮಹಿಳೆಯರಿಗಾಗಿ ಮದಿರೆಂಗಿ, ರಂಗವಲ್ಲಿ, ಹಾಡು ಮಕ್ಕಳಿಗೆ ಪಿಂಪಿರಿ ಊದೋದು, ಅಡಿಕೆ ಹಾಳೆ ಎಳೆಯುವುದು ಸೇರಿದಂತೆ ಬೇರೆ ಬೇರೆ ಕೂಟಗಳು ನಡೆಯಲಿದೆ.
ಇದೇ ವೇಳೆ ತುಳುನಾಡಿನ 100 ಕ್ಕೂ ಹೆಚ್ಚಿನ ಪ್ರತಿಭೆಗಳನ್ನು ಗೌರವಿಸಲಾಗುತ್ತಿದೆ.
ಕನ್ನಡ ತುಳು ಚಿತ್ರರಂಗದ ಕಲಾವಿದರು ತಂತ್ರಜ್ಞರು, ಹಲವಾರು ಟಿವಿ ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ ಪ್ರತಿಭೆಗಳು, ಟಿವಿ ಮಾಧ್ಯಮ, ಸಾಹಿತಿಗಳು ಭಾಗವಹಿಸಲಿದ್ದಾರೆ. ಬೆಳ್ತಂಗಡಿ ಶಾಸಕ ಹರೀಶ ಪೂಂಜಾ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಆಮಂತ್ರಣ ಪರಿವಾರದ ವತಿಯಿಂದ ಇದು ಎರಡನೆಯ ಬಾರಿಯ ಕೂಟವಾಗಿದ್ದು, ಅಳದಂಗಡಿ ಅರಮನೆಯ ಸಂಸ್ಕೃತಿಯ ಜತೆ ಜತೆಗೆ ಎಲ್ಲಾ ತುಳುವರನ್ನು ಮುಟ್ಟು ರೀತಿಯಲ್ಲಿ ಮನೆ ಮನದ ಮಾತುಗಳು ಒಂದು ದಿನಕ್ಕೇ ಸೀಮಿತವಾಗದೇ ಇಂತಹ ಕಾರ್ಯಕ್ರಮ ಜರುಗಬೇಕೆಂದು ಸಂಘಟಕರ ಅಪೇಕ್ಷೆ.
ಸಂಸ್ಥೆ ಅನೇಕ ಉತ್ತಮ ಕಾರ್ಯಕ್ರಮಗಳನ್ನು ಮಾಡುತ್ತಾ ಯಾವುದೇ ಫಲಾಪೇಕ್ಷೆ ಇಲ್ಲದೆ ಪ್ರತಿಭೆಗಳನ್ನು ಬೆಳೆಸುವ ಜತೆಗೆ ಅವರನ್ನೂ ಒಂದೇ ವೇದಿಕೆಯಲ್ಲಿ ಸೇರಿಸುವ ಗೌರವಿಸುವ ಒಂದು ಉತ್ತಮ ಕಾರ್ಯಕ್ರಮವಾಗಿದೆ.
ಇನ್ನು ಕಾರ್ಯಕ್ರಮಕ್ಕೆ ಮಂಗಳೂರಿನ ರುಧಿರ ಫಿಲಂ ಮತ್ತು ರೆಕಾರ್ಡಿಂಗ್ ಸ್ಟುಡಿಯೋ, ಆಳದಂಗಡಿ ಲಯನ್ಸ್ ಕ್ಲಬ್, ಜೇಸಿ ಬೆಳ್ತಂಗಡಿ ಮಂಜುಶ್ರೀ, ಬೆಳ್ತಂಗಡಿ ವಲಯ ಪೋಟೊ ಗ್ರಾಫರ್ ಅಸೋಸಿಯೇಷನ್, ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ, ಬೆಳ್ತಂಗಡಿ Beat Rockerz dance ಸಹಕಾರ ಹಾಗೂ ಪ್ರಾಯೋಜಕತ್ವ ಇದೆ.
ಅಳದಂಗಡಿ ಅರಮನೆ ತಿಮ್ಮಣ್ಣರಸರಾದ ಡಾ. ಪದ್ಮಪ್ರಸಾದ ಅಜಿಲರ ಮಾರ್ಗದರ್ಶನದಲ್ಲಿ ಹಾಗೂ ಅಳದಂಗಡಿ ಶ್ರೀ ಸತ್ಯದೇವತಾ ದೈವಸ್ಥಾನದ ಆಡಳ್ತೇದಾರ ಶಿವಪ್ರಸಾದ ಅಜಿಲರು ಹಾಗೂ ಆಮಂತ್ರಣ ಪರಿವಾರದ ಪ್ರಕಾಶ್ ಶೆಟ್ಟಿ ನೊಚ್ಚ ಸಹಕಾರದಲ್ಲಿ ಬೆಳ್ತಂಗಡಿ ಶಾಸಕರು ನಮ್ಮ ಆಮಂತ್ರಣ ಪರಿವಾರದ ಗೌರವ ಸಲಹೆಗಾರರನ್ನು ಗೌರವಿಸಲಾಗುತ್ತದೆ.
Discussion about this post