ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಳ್ಳಕೆರೆ: ಹಲವಾರು ವರ್ಷಗಳಿಂದ ಕನಸಾಗಿದ್ದ ಶ್ರೀರಾಮಮಂದಿರ ನಿರ್ಮಾಣದ ಕಾರ್ಯ ನನಸಾಗುತ್ತಿದ್ದು ಇದಕ್ಕಾಗಿ ಎಲ್ಲರೂ ತನು ಮನ ಧನ ಸಹಾಯ ಮಾಡುವ ಕಾಲ ಸನ್ನಿದ್ದವಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಅಧ್ಯಕ್ಷ ಡಾ.ಎನ್. ಮಂಜುನಾಥ ಹೇಳಿದರು.
ವಿಶ್ವಹಿಂದೂ ಪರಿಷತ್ ನೂತನ ಕಚೇರಿಯಲ್ಲಿ ಶ್ರೀ ರಾಮ ಮಂದಿರ ನಿಧಿ ಸಮರ್ಪಣೆ ಅಂಗವಾಗಿ ಅವರು ಮಾತನಾಡಿದರು.
ಮಂದಿರ ನಿರ್ಮಾಣಕ್ಕಾಗಿ ವಿಹಿಂಪ ವತಿಯಿಂದ ಜ.15ರಿಂದ ಫೆ.5ರವರೆಗೂ ತಾಲೂಕಿನಾದ್ಯಂತ ಮನೆ ಮನೆಗೆ ತೆರಳಿ ನಿಧಿ ಸಂಗ್ರಹ ಮಾಡಲಾಗುವುದು. ಈಗಾಗಲೇ ತಾಲೂಕಿನ 40 ಗ್ರಾಪಂ ವ್ಯಾಪ್ತಿಯ 270 ಗ್ರಾಮಗಳಲ್ಲಿ ಹಾಗೂ ನಗರಭೆಯ 31 ವಾರ್ಡ್’ಗಳಲ್ಲಿ ಕಳೆದ 8 ದಿನಗಳಿಂದ ಪಕ್ಷ ಭೇದ ಮೆರೆದು ಹಿಂದು ಪರ ಸಂಘಟನೆಗಳ ಸದಸ್ಯರು ಮನೆ ಮನೆಗಳಿಗೆ ಹೋಗಿ ಕರಪತ್ರಗಳನ್ನು ವಿತರಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಪ್ರಮುಖರಾದ ವೆಂಕಟೇಶ್ ರೆಡ್ಡಿ, ಶಿವರಾಜ್, ಜ್ಯೋತಿಪ್ರಕಾಶ್, ಮಹಾಂತೇಶ್, ರಾಜೇಂದ್ರ, ಎನ್. ಉಮೇಶ್, ಇದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post