ಕಲ್ಪ ಮೀಡಿಯಾ ಹೌಸ್
ಮಕ್ಕಳು ಸಮಾಜದಲ್ಲಿ ತನಗಿಂತ ಉನ್ನತ ಸ್ಥಾನ, ಹೆಚ್ಚಿನ ಗೌರವ ಗಳಿಸಿದಾಗಲೇ ತಂದೆಗೆ ಸಮಾಧಾನ. ಭುಜದೆತ್ತರಕ್ಕೆ ಬೆಳೆದ ಮಕ್ಕಳು ಸಾಧನೆ ಮಾಡಿದಾಗ ತಂದೆಯ ಎದೆ ಹೆಮ್ಮೆಯಿಂದ ಉಬ್ಬುತ್ತದೆ. ಸಮಾಜದಲ್ಲಿ ಅವರ ಗೌರವ ಇನ್ನಷ್ಟು ಹೆಚ್ಚುತ್ತದೆ. ಅಂತಹದೇ ಒಂದು ಚಿತ್ರಣವನ್ನು ಬಿಂಬಿಸುವ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
अजब ग़ज़ब सेल्फ़ी
पिता रेलवे में गार्ड है और बेटा टीटी है । जब दोनो की ट्रेन अगल-बग़ल से गुजरी तो एक सेल्फ़ी का लम्हा बन गया ❤️ pic.twitter.com/Zd2lGHn7z3
— Suresh Kumar (@Suresh__dhaka29) June 15, 2022
ಹೌದು… ಮಗ ಭಾರತೀಯ ರೈಲ್ವೆ ಇಲಾಖೆಯಲ್ಲಿ ಪ್ರಯಾಣಿಕರ ಟಿಕೆಟ್ ಪರೀಕ್ಷಕ. ಅಪ್ಪ ಅದೇ ಇಲಾಖೆಯಲ್ಲಿ ಓರ್ವ ಸಾಮಾನ್ಯ ಗಾರ್ಡ್. ಎರಡು ಬೇರೆ ಬೇರೆ ರೈಲುಗಳಲ್ಲಿ ಕಾರ್ಯನಿರ್ವಹಿಸುವ ಇವರು ರೈಲು ಪಾಸಾಗುವ ಸಮಯದಲ್ಲಿ ಕ್ಲಿಕ್ಕಿಸಿದ ಸೆಲ್ಫಿಯೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ, ಜನರ ಪ್ರಶಂಸೆಗೆ ಪಾತ್ರವಾಗಿದೆ.
ಸುರೇಶ್ ಕುಮಾರ್ ಎಂಬುವವರು ಈ ಫೋಟೋವನ್ನು ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದ್ದು, ಅದ್ಭುತ ಸೆಲ್ಫಿ ತಂದೆ ರೈಲ್ವೆಯಲ್ಲಿ ಗಾರ್ಡ್ ಮತ್ತು ಮಗ ಟಿಟಿ ಇಬ್ಬರ ರೈಲು ಅಕ್ಕಪಕ್ಕ ಹಾದು ಹೋಗುವಾಗ ಸೆಲ್ಫಿ ತೆಗೆಯಲು ಉತ್ತಮ ಕ್ಷಣವಾಯಿತು ಎಂದು ಬರೆದುಕೊಂಡಿದ್ದಾರೆ.
50 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋವನ್ನು ವೀಕ್ಷಿದ್ದು, ಈ ಫೋಟೋವನ್ನು ಈ ಅಪ್ಪ ಮಗ ಸದಾಕಾಲ ನೆನಪು ಮಾಡಿಕೊಳ್ಳಲಿದ್ದಾರೆ ಎಂದು ಒಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.
Also read: ಗಂಟಲಲ್ಲಿ ಎದೆಹಾಲು ಸಿಲುಕಿ ಸಾವನ್ನಪ್ಪಿದ ಹಸುಗೂಸು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post