ಮೈಸೂರು: ಮುಖ್ಯಮಂತ್ರಿ ಎಚ್’ಡಿಕೆ ಪುತ್ರ ನಿಖಿಲ್ ವಿರುದ್ಧ ಇಡಿಯ ರಾಜ್ಯ ಸರ್ಕಾರವನ್ನು ಎದುರು ಹಾಕಿಕೊಂಡು ಮಂಡ್ಯದಿಂದ ಲೋಕಸಭಾ ಚುನಾವಣಾ ಅಖಾಡಕ್ಕೆ ಇಳಿದಿರುವ ಸುಮಲತಾ ಅಂಬರೀಶ್ ಅವರಿಗೆ ಈಗ ಆನೆ ಬಲ ಬಂದಿದೆ.
ಅಂಬರೀಶ್ ಅವರು ಕನ್ನಡ ಹಾಗೂ ನಾಡಿಗಾಗಿ ಮಾಡಿರುವ ಕೆಲಸಗಳನ್ನು ನೋಡಿ, ಅವರ ಪತ್ನಿ ಸುಮಲತಾ ಅವರನ್ನು ಗೆಲ್ಲಿಸಿ ಎಂದು ಇಂದು ಮೈಸೂರಿನಲ್ಲಿ ನಡೆದ ಭಾರೀ ಬಹಿರಂಗ ಸಭೆಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರೇ ಹೇಳಿರುವುದು ಸುಮಲತಾ ಹಾಗೂ ಬಿಜೆಪಿ ವಲಯದಲ್ಲಿ ಹುಮ್ಮಸ್ಸು ಇಮ್ಮಡಿಗೊಂಡಿದೆ.
ಅತ್ಯಂತ ಪ್ರಮುಖವಾಗಿ ಮೋದಿ ತಮ್ಮ ಮಾತಿನಲ್ಲಿ ಅಂಬರೀಶ್ ಹಾಗೂ ಸುಮಲತಾ ಅವರ ಹೆಸರನ್ನು ಹೇಳುತ್ತಿದ್ದಂತೆ ನೆರೆದಿದ್ದ ಸಾವಿರಾರು ಅಭಿಮಾನಿಗಳು ಹರ್ಷೋದ್ಗಾರ ಮೊಳಗಿತು.
Come to Mysuru and see the strong support for BJP! https://t.co/TIPJuQjbor
— Chowkidar Narendra Modi (@narendramodi) April 9, 2019
ಕರ್ನಾಟಕ ಹಾಗೂ ದೇಶಕ್ಕೆ ಬಹುದೊಡ್ಡ ನಾಯಕತ್ವ ನೀಡಿದ ಶ್ರೇಯಸ್ಸು ರಾಜ್ಯದ ಜನರಿಗೆ ಸಲ್ಲುತ್ತದೆ. ಅಂತಹ ಸಾಲಿನಲ್ಲಿ ಅಂಬರೀಶ್ ಮತ್ತು ಸುಮಲತಾ ಅವರು ಸಹ ಸೇರುತ್ತಾರೆ ಎಂದರು.
ಕನ್ನಡಿಗರ ಹೃದಯದಲ್ಲಿ ಸದಾ ನೆಲೆಸಿರುವ ಅಂಬರೀಶ್ ಅವರು ನೀಡಿದ್ದ ಕೊಡುಗೆಯನ್ನು ನೆನೆಯಿತಿ. ಸುಮಲತಾ ಅವರ ಜೊತೆ ಸೇರಿ ಕನ್ನಡ ಭಾಷೆ, ಸಂಸ್ಕೃತಿಗೆ ಅಪಾರ ಸೇವೆ ಸಲ್ಲಿಸಿದ್ದಾರೆ. ಕರ್ನಾಟಕದಲ್ಲಿ ಇಂತಹ ಮಹನೀಯರ ಪ್ರಯತ್ನವನ್ನು ಶಸಕ್ತಗೊಳಿಸಬೇಕಾಗಿದೆ. ನಿಮ್ಮ ಮತ ನಮ್ಮ ಸಾಥಿಗಳಿಗೆ ಬಲ ಹೀಗಾಗಿ ಅವರಿಗೆ ಆಶಿರ್ವಾದ ಮಾಡುವಂತೆ ಕರೆ ನೀಡಿದರು.
Discussion about this post