ಕಲ್ಪ ಮೀಡಿಯಾ ಹೌಸ್ | ಅಮೆರಿಕಾ |
ಸಾಮಾನ್ಯವಾಗಿ ನೀವು ಕೆಟ್ಟ ಮಕ್ಕಳನ್ನು ನೋಡಿರುತ್ತೀರಿ. ಆದರೆ, ಎಳೆಯ ಕಂದನ ವಿಚಾರದಲ್ಲಿ ಕೆಟ್ಟ ತಾಯಿಯನ್ನು ನೋಡಿರುವ ಸಾಧ್ಯತೆ ಕಡಿಮೆ. ಇಲ್ಲಿದ್ದಾಳೆ ನೋಡಿ ಅಂತಹ ನೀಚ ತಾಯಿ.
ಹೌದು… ಅಮೆರಿಕಾದಲ್ಲೊಬ್ಬ ತಾಯಿ ತನ್ನ ಸ್ವಾರ್ಥ ಎಂಜಾಯ್‌ಮೆಂಟ್’ಗಾಗಿ ತನ್ನ ಮಗುವನ್ನೇ ಬಲಿ ಕೊಟ್ಟಿದ್ದು, ಕ್ಷಮಿಸಲಾರದ ತಪ್ಪನ್ನು ಮಾಡಿದ್ದಾಳೆ.
ಏನಿದು ಘಟನೆ?
ಕ್ರಿಸ್ಟಲ್ ಎ. ಕ್ಯಾಂಡಲಾರಿಯೋ ಎಂಬ(31) ವರ್ಷದ ಪಾಪಿ ನಿವಾಸಿ ಮಹಿಳೆಯೊಬ್ಬಳು ತನ್ನ ಸಂತೋಷಕ್ಕಾಗಿ 10 ದಿನಗಳ ಟ್ರಿಪ್ ಪ್ಲಾನ್ ಮಾಡಿದ್ದಾಳೆ. ಈಕೆಗೆ 16 ತಿಂಗಳ ಜೈಲಿನ್ ಎಂಬ ಹೆಣ್ಣ ಮಗುವಿದೆ. ಟ್ರಿಪ್’ಗೆ ಹೋದಾಗ ಮಗುವಿನಿಂದ ಸಂತೋಷ ಹಾಳಾಗುತ್ತದೆ ಎಂದು ಯೋಚಿಸಿ, ಮಗುವನ್ನು ನೋಡಿಕೊಳ್ಳಲು ಪಕ್ಕದ ಮನೆಯವರಿಗೆ ಹೇಳಿದ್ದಾಳೆ.
Also read: ಗಮನಿಸಿ! ಶಿವಮೊಗ್ಗ-ಬೆಂಗಳೂರು-ಮೈಸೂರು ರೈಲಿನ ಸಮಯದಲ್ಲಿ ಬದಲಾವಣೆ: ಇಲ್ಲಿದೆ ವಿವರ
ಕ್ರಿಸ್ಟಲ್ ಟ್ರಿಪ್ ಹೊರಡುವಾಗಿ ಯಾರಿಗೂ ಯಾವುದೇ ರೀತಿಯಲ್ಲಿ ತಿಳಿಸಿರಲಿಲ್ಲ. ಹೀಗಾಗಿ, ಮಗುವನ್ನು ಆಕೆ ಕರೆದುಕೊಂಡು ಹೋಗಿರಬಹುದು ಎಂದು ಭಾವಿಸಿದ್ದರು. ಆದರೆ, ಕ್ರಿಸ್ಟಲ್ ಮಗುವನ್ನು ಮನೆಯಲ್ಲಿ ಬಿಟ್ಟು, ಬೀಗ ಹಾಕಿಕೊಂಡು ಹೊರಟಿದ್ದಾಳೆ.
10 ದಿನಗಳ ನಂತರ ಮನೆಗೆ ಬಂದ ಆಕೆ ಬಾಗಿಲು ತೆಗೆದು ನೋಡಿದಾಗ ಶಾಕ್ ಕಾದಿತ್ತು. ಹೊಟ್ಟೆಗೆ ಆಹಾರ ಹಾಗೂ ನೀರು ಇಲ್ಲದೇ, ಬಟ್ಟೆಯಲ್ಲೇ ಮಲ ಮೂತ್ರ ಮಾಡಿಕೊಂಡು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿತ್ತು. ಇದರಿಂದ ಆತಂಕಗೊಂಡ ಆಕೆ ತತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ನಂತರ ಮಗು ಮೃತಪಟ್ಟಿರುವ ಮಾಹಿತಿ ಬಯಲಾಗಿದೆ.
ಮಹಿಳೆಯ ವಿರುದ್ಧ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆಕೆಯನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post