Guts ಬೇಕು ಕಣ್ರೀ ಉನ್ನತ ಜವಾಬ್ದಾರಿ ಇರುವವರಿಗೆ. ಒಬ್ಬ ಮುಖ್ಯಮಂತ್ರಿಯಾಗಿ ಕುಳಿತ ಮೇಲೆ ರಾಜ್ಯಾಡಳಿತದ ಜವಾಬ್ದಾರಿ ಇರಬೇಕು.
ಪ್ರಜೆಗಳ ಹಿತಕ್ಕಾಗಿ, ಅವರ ಪಕ್ಷದ ಏಳಿಗೆಗಾಗಿ ಮುಖ್ಯಮಂತ್ರಿ ಕಾರ್ಯ ನಿರ್ವಹಿಸಬೇಕಾದುದು ಅವರ ಧರ್ಮ. ಅದು ಬಿಟ್ಟು ನಾನು ಸಂತೋಷವಾಗಿಲ್ಲ ಎಂದು ಅತ್ತರೆ ಅದು ಹೇಡಿತನವಾದೀತು.
ಬೆಂಬಲ ನೀಡಿದ ಪಕ್ಷಕ್ಕೆ ನೇರವಾಗಿ ಖಾರವಾಗಿ ಯಾಕೆ ಉತ್ತರ ನೀಡಬಾರದು?’ ನೋಡೀ, ನನ್ನ ಪಕ್ಷವು ಅಲ್ಪ ಸಂಖ್ಯೆಯದ್ದಾದರೂ ನೀವು ಬೆಂಬಲಿಸಿ ಮುಖ್ಯಮಂತ್ರಿಯನ್ನಾಗಿಸಿದ್ದು ಹೌದೋ ಅಲ್ಲವೋ ಎಂದು ಪ್ರಶ್ನಿಸುವ ಗಟ್‌ಸ್ ಇಲ್ಲವೇ?
ಒಮ್ಮೆ ನಾನು ಈ ಪೀಠ ಏರಿದ ಮೇಲೆ ನಾನು ನಿಮ್ಮ ಬೆಂಬಲಕ್ಕೆ ಸೀಮಿತವಲ್ಲ. ಇಡೀ ಕರ್ನಾಟಕದ ಪ್ರಜೆಗಳೇ ನನಗೆ ಬೆಂಬಲಿಗರಾಗುತ್ತಾರೆ. ಪ್ರಜೆಗಳಿಗೋಸ್ಕರ ಮಾಡುವ ಸತ್ಕಾರ್ಯಕ್ಕೆ ಅಡ್ಡಿ ಮಾಡುವುದಾದರೆ ಅದನ್ನು ನೇರವಾಗಿ ತಿಳಿಸಿ. ನಾನು ಅದನ್ನೇ ಪ್ರಜೆಗಳ ಗಮನಕ್ಕೆ ತರುತ್ತೇನೆ. ಮನಸ್ಸಿಲ್ಲದಿದ್ದರೆ ನೀವು ಬೆಂಬಲ ಹಿಂತೆಗೆದುಕೊಳ್ಳಿ. ಅದನ್ನೂ ಪ್ರಜೆಗಳ ಗಮನಕ್ಕೆ ತಂದು ಪೀಠದಿಂದ ಇಳಿಯುತ್ತೇನೆ. ನನಗೆ ಅಧಿಕಾರದ ಆಸೆ ಇಲ್ಲ. ಕರ್ನಾಟಕದ ಹಿತ ದೃಷ್ಟಿಯೇ ಮುಖ್ಯ.’ ಎಂದು ಘಂಟಾಘೋಷವಾಗಿ ಹೇಳಬೇಕು. ಆಗ ಬೆಂಬಲಿಗರ ಬಣ್ಣ ಬಯಲಾಗುತ್ತದೆ. ಇದರಿಂದ ಮುಖ್ಯಮಂತ್ರಿಗಳ ವರ್ಚಸ್ಸೂ ಹೆಚ್ಚಾಗಿ, ಅವರ ಪಕ್ಷಕ್ಕೂ ಇನ್ನೂ ಬಲ ಬರುತ್ತದೆ. ಆದರೇನು ಮಾಡುವುದು. ಮನದೊಳಗೆ ಅಧಿಕಾರ ಹೋಗಿಬಿಟ್ಟರೆ? ಎಂಬ ಭಯವಿದ್ದಲ್ಲಿ ಹೀಗೆಯೇ ‘ನಾನು ಸಂತೋಷವಾಗಿಲ್ಲ. ಊಊಊ…’ ಎಂದು ಅಳುವುದೊಂದೇ ದಾರಿ.

















