ಮುಂಬೈ: ವಾಣಿಜ್ಯ ನಗರಿ ಮುಂಬೈನಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆ ಮುಂದುವರೆದಿದ್ದು, ಇಂದು ಮುಂಜಾನೆ ಇಲ್ಲಿನ ಸಮುದ್ರದಲ್ಲಿ 4.97 ಮೀಟರ್ ಎತ್ತರದ ಭಾರೀ ಅಲೆಗಳಿಗೆ ಸಾಕ್ಷಿಯಾಗಿದೆ.
ವಾರದ ಆರಂಭ ಭಾರೀ ಮಳೆಯಿಂದ ಆರಂಭವಾಗಿದ್ದು, ಈ ವಾರ ಪೂರ್ತಿ ನಿರಂತರ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.
ಇನ್ನು, ಈಗಾಗಲೇ ಮುಂಬೈ ತೀವ್ರ ಮಳೆಗೆ ಸಾಕಷ್ಟು ಹಾನಿಯಾಗಿದ್ದು, ಸ್ಥಳೀಯ ನಿವಾಸಿಗಳಿಗೆ ದೈನಂದಿನ ಜೀವನ ನಡೆಸುವುದು ಕಷ್ಟಕರವಾಗಿ ಪರಿಣಮಿಸಿದೆ.
ಕಳೆದವಾರ ಮಳೆಯ ಹಿನ್ನಲೆಯಲ್ಲಿ ಮುಂಬೈ ಲೋಕಲ್ ರೈಲು ಸಂಚಾರ ಸ್ಥಗಿತಗೊಂಡಿತ್ತು. ಆದರೆ, ಪ್ರಸ್ತುತ ಯಾವುದೇ ರೈಲು ಸಂಚಾರದಲ್ಲಿ ವ್ಯತ್ಯಯ ಉಂಟಾದ ಕುರಿತಾಗಿ ವರದಿಯಾಗಿಲ್ಲ.
Discussion about this post