ಕಲ್ಪ ಮೀಡಿಯಾ ಹೌಸ್ | ಲಂಡನ್ |
ಇಸ್ಕಾನ್ ರೆಸ್ಟೋರೆಂಟ್’ಗೆ ವ್ಯಕ್ತಿಯೊಬ್ಬ ಚಿಕನ್ ತಂದು ತಿಂದಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಲಂಡನ್’ನ 10 ಸೊಹೊ ಸ್ಟ್ರೀಟ್’ನಲ್ಲಿರುವ ಇಸ್ಕಾನ್ ದೇಗುಲದ ಆವರಣದಲ್ಲಿರುವ ಗೋವಿಂದ ರೆಸ್ಟೊರಂಟ್’ನಲ್ಲಿ ಈ ಘಟನೆ ನಡೆದಿದೆ.
ಈ ಇಸ್ಕಾನ್ ಗೋವಿಂದ ರೆಸ್ಟೋರೆಂಟ್ ಸಂಪೂರ್ಣವಾಗಿ ಸಸ್ಯಾಹಾರಿಯಾಗಿದ್ದು, ಇಲ್ಲಿ ಈ ಕೃತ್ಯ ಎಸಗಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಗೋವಿಂದ ರೆಸ್ಟೋರೆಂಟ್ ಒಳಗೆ ಚಿಕನ್ ತಂದ ವ್ಯಕ್ತಿಯನ್ನು ಆಫ್ರಿಕನ್ ಮೂಲದ ಇಂಗ್ಲೆಂಡ್ ನಾಗರಿಕ ಸ್ಯಾಂಜೊ ಎಂದು ಗುರುತಿಸಲಾಗಿದ್ದು, ಈತ ಉದ್ದೇಶಪೂರ್ವಕವಾಗಿಯೇ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದೆ.
ಗೋವಿಂದ ರೆಸ್ಟೊರಂಟ್’ಗೆ ತೆರಳಿದ್ದ ಯುವಕ ಸ್ಯಾಂಜೋ, ಮೊದಲಿಗೆ ಅಲ್ಲಿನ ಸಿಬ್ಬಂದಿಗೆ, ಇಲ್ಲಿ ಮಾಂಸ ಸಿಗುತ್ತದಾ? ಮಾಂಸ ಬೇಕು ಎಂದು ಕೇಳಿದ್ದಾನೆ. ಇದಕ್ಕೆ ಸಿಬ್ಬಂದಿ ಇಲ್ಲ. ಇದು ದೇಗುಲದ ರೆಸ್ಟೋರೆಂಟ್ ಆಗಿದ್ದು, ಇಲ್ಲಿ ಸಸ್ಯಾಹಾರಿ ಖ್ಯಾದ್ಯಗಳು ಮಾತ್ರ ಸಿಗುತ್ತದೆ ಎಂದು ಹೇಳಿದ್ದಾರೆ.
ಆದರೆ ಆ ಯುವಕ ಕೂಡಲೇ ಖಂಡಿತಾ…ಖಂಡಿತಾ… ಎನ್ನುತ್ತಲೇ ತನ್ನ ಚೀಲದಲ್ಲಿನ ಚಿಕನ್ ಅನ್ನು ತೆರೆದು ಅಲ್ಲಿಯೇ ತಿನ್ನಲು ಶುರು ಮಾಡಿದ್ದಾನೆ. ಇದರಿಂದ ಸಿಬ್ಬಂದಿ ಆಘಾತಕ್ಕೊಳಗಾಗಿದ್ದಾರೆ.
ತನ್ನ ಕೃತ್ಯ ಮುಂದುವರೆಸಿದ ಆ ಯುವಕ ಗೋವಿಂದ ರೆಸ್ಟೊರೆಂಟ್’ನಲ್ಲಿ ಮತ್ತೆ ಹುಚ್ಚಾಟ ಪ್ರದರ್ಶಿಸಿದ್ದಾನೆ. ಅಲ್ಲಿದ್ದವರಿಗೆ ನಿಮಗೆ ಚಿಕನ್ ಬೇಕೆ? ಚಿಕನ್ ತಿನ್ನುತ್ತೀರಾ? ಎಂದು ಕೇಳಿದ್ದಾನೆ. ಅಲ್ಲಿದ್ದ ಬಹುತೇಕರು ಯುವಕನ ವರ್ತನೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ವೇಳೆ ಸ್ಥಳಕ್ಕಾಗಮಿಸಿದ ಗ್ರಾಹಕರೊಬ್ಬರು, ಕ್ಷಮಿಸಿ, ನೀವು ಮಾಡುತ್ತಿರುವುದು ಈ ಸ್ಥಳದ ನಿಯಮಗಳನ್ನು ಉಲ್ಲಂಘಿಸುತ್ತಿದೆ. ಇದು ನ್ಯಾಯಯುತವಲ್ಲ ಎಂದು ಹೇಳುತ್ತಾನೆ. ಆದಾಗ್ಯೂ, ಭದ್ರತಾ ಸಿಬ್ಬಂದಿಯನ್ನು ಕರೆಯುವವರೆಗೂ ಆ ವ್ಯಕ್ತಿ ಚಿಕನ್ ತಿನ್ನುವುದನ್ನು ಮುಂದುವರಿಸುತ್ತಾನೆ. ಕೊನೆಗೆ ಆತನನ್ನು ರೆಸ್ಟೋರೆಂಟ್’ನಿಂದ ಹೊರಗೆ ಹಾಕಲಾಗುತ್ತದೆ ಎಂದಿದ್ದಾರೆ.
ಬಳಿಕ ಸಿಬ್ಬಂದಿ ಆ ಯುವಕನನ್ನು ಅಲ್ಲಿಂದ ಹೊರದಬ್ಬಿ, ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post