ಕಲ್ಪ ಮೀಡಿಯಾ ಹೌಸ್ | ಆನಂದಪುರ |
ಮಳೆ ವೇಳೆ ಕೆರೆಯಲ್ಲಿ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿಯನ್ನು #Electric Wire ಮೆಸ್ಕಾಂ ಸಿಬ್ಬಂದಿ #MESCOM Staff ಜೀವ ಒತ್ತೆಯಿಟ್ಟು ಸರಿಪಡಿಸಿರುವ ಘಟನೆ ಸಾಗರ ತಾಲೂಕಿನ ಆನಂದಪುರದ ಆಚಾಪುರದಲ್ಲಿ ನಡೆದಿದೆ.
ಆನಂದಪುರ ಸಮೀಪದ ಆಚಾಪುರ ಗ್ರಾಮದ ಕೆರೆಯಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿತ್ತು. ಮೂರರಿಂದ ನಾಲ್ಕು ಕಂಬಗಳಲ್ಲಿ ವಿದ್ಯುತ್ ತಂತಿ ಕಟ್ಟಾಗಿತ್ತು.
ಇದನ್ನು ಮನಗಂಡ ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳಾದ ರಮೇಶ್ ಹಾಗೂ ಜಯಪ್ಪ ಎನ್ನುವವರು ತಮ್ಮ ಪ್ರಾಣದ ಹಂಗನ್ನು ತೊರೆದು ಸುಮಾರು 8 ರಿಂದ 10 ಅಡಿ ಆಳದ ನೀರಿನಲ್ಲಿ ತೆಪ್ಪದಲ್ಲಿ ತೆರಳಿ ಸರಿ ಮಾಡಿದ್ದಾರೆ.
ತೆಪ್ಪದಲ್ಲಿ ವಿದ್ಯುತ್ ತಂತಿ ಸರಿಪಡಿಸುವ ದೃಶ್ಯ ಸ್ಥಳೀಯರ ಸೆರೆಯಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post