ಕಲ್ಪ ಮೀಡಿಯಾ ಹೌಸ್ | ಆನಂದಪುರಂ |
ಹೊಸಗುಂದ ಶ್ರೀ ಕಂಚಿಕಾಳಮ್ಮ ದೇವಿಯ ಸನ್ನಿಧಿಯಲ್ಲಿ ಅ.15ರಿಂದ ಅ.24ರವರೆಗೂ ನವರಾತ್ರಿ Navarathri ಉತ್ಸವವನ್ನು ಆಯೋಜಿಸಲಾಗಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.
ಹೊಸಗುಂದ ಶ್ರೀ ಉಮಾಮಹೇಶ್ವರ ಸೇವಾ ಟ್ರಸ್ಟ್ ಹಾಗೂ ಕಲಾರಾಧನ ಕಲ್ಚರಲ್ ಟ್ರಸ್ಟ್ ವತಿಯಿಂದ ಉತ್ಸವವನ್ನು ಆಯೋಜಿಸಲಾಗಿದ್ದು, ಪ್ರತಿವರ್ಷದಂತೆ ಈ ವರ್ಷವೂ ಶರನ್ನವರಾತ್ರಿ ಉತ್ಸವ ಹಾಗೂ ವಿಶೇಷ ಪೂಜೆಗಳು ನಡೆಯಲಿವೆ.

ಅ.15ರಂದು ಬೆಂಗಳೂರಿನ ವಿದ್ವಾನ್ ಪ್ರದ್ಯುಮ್ನ ಆಚಾರ್ ಅವರಿಂದ ಭರಟನಾಟ್ಯ, ಅ.16ರಂದು ಅಪರ್ಣಾ, ಅ.17ರಂದು ಅಪೇಕ್ಷಾ, ಅ.18ರಂದು ಶ್ರವಣ, ಅ.19ರಂದು ರಾಯಚೂರಿನ ಶ್ರೀ ರಾಘವ ನಾಟ್ಯಾಮೃತ ಕಲಾನಿಕೇತನ, ಅ.20ರಂದು ಚಿಂತನ, ಅ.21ರಂದು ಪಾದ ಸೇವನಾ, ಅ.22ರಂದು ಬೆಂಗಳೂರಿನ ರಾಮ ಚಿಂತನ ಕಲಾರಾಧನ, ಅ.23ರಂದು ಕೀರ್ತನ ಹಾಗೂ ಅ.24ರಂದು ವಂದನ ತಂಡದಿಂದ ಪ್ರತಿದಿನ ಭರತನಾಟ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
Also read: ಈಶ್ವರಪ್ಪ ಯಾವಾಗ ಲ್ಯಾಬೊರೇಟರಿಯಲ್ಲಿ ಕೆಲಸ ಮಾಡಿದ್ದರು? ಆಯನೂರು ಮಂಜುನಾಥ್ ಕಟಕಿ
ಸೇವಾ ವಿವರ:
ಶ್ರೀ ಭದ್ರಕಾಳಿ ಸ್ವರೂಪಿಣಿ ಕಂಚಿಕಾಳಮ್ಮ ಸನ್ನಿಧಾನದಲ್ಲಿ ಸಂಕಲ್ಪ ಮಾಡಲು ಹೆಸರು ರಾಶಿ-ನಕ್ಷತ್ರ-ಗೋತ್ರವನ್ನು ಹಾಗೂ ಪ್ರಸಾದ ಕಳುಹಿಸಲು ತಮ್ಮ ವಿಳಾಸವನ್ನು ಈ ಮೊಬೈಲ್ ಸಂಖ್ಯೆಗೆ (9900039443) ವಾಟ್ಸಪ್ ಮಾಡಬಹುದಾಗಿದೆ.













Discussion about this post