ಕಲ್ಪ ಮೀಡಿಯಾ ಹೌಸ್
ಆನಂದಪುರಂ: ಸಾಗರ ತಾಲೂಕಿನ ಆನಂದಪುರಂ ಹಾಗೂ ಯಡೇಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಒಂದು ವಾರಗಳ ಕಾಲ ಸಂಪೂರ್ಣ ಲಾಕ್ ಡೌನ್ ಮಾಡಲಾಗಿದ್ದು, ಯಾರೂ ಮನೆಯಿಂದ ಹೊರಬರದಂತೆ ಕಟ್ಟುನಿಟ್ಟಿನ ಜಾರಿಗೊಳಿಸಲಾಗಿದೆ.
ಈ ಭಾಗದಲ್ಲಿ ದಿನದಿಂದ ದಿನಕ್ಕೆ ಕೊರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿದ್ದ ಹಿನ್ನೆಲೆಯಲ್ಲಿ ಆನಂದಪುರ ಹಾಗೂ ಯಡೇಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದ್ದು, ಜೊತೆಗೆ ಸೆಕ್ಷನ್ 144 ನಿಷೇಧಾಜ್ಞೆ ಸಹ ಜಾರಿಗೊಳಿಸಲಾಗಿದೆ.
ಈ ಕುರಿತಂತೆ ತಹಶೀಲ್ದಾರ್ ಚಂದ್ರಶೇಖರ್ ನಾಯಕ್ ಅವರ ಆದೇಶದ ಹಿನ್ನೆಲೆಯಲ್ಲಿ ಎರಡೂ ಕಡೆಗಳಲ್ಲಿ ಸಂಪೂರ್ಣ ಸೀಲ್ ಡೌನ್ ಮಾಡಲಾಗಿದ್ದು, ಒಂದು ವಾರಗಳ ಕಾಲ ದಿನಬಳಕೆ ವಸ್ತುಗಳ ಖರೀದಿಗೂ ಇಲ್ಲ ಅವಕಾಶವಿಲ್ಲ. ಒಂದು ವಾರಕ್ಕೆ ಬೇಕಾಗುವಷ್ಟು ದಿನಸಿ ಹಾಗೂ ತರಕಾರಿ ಮೊದಲೇ ಕೊಂಡು ಇಟ್ಟುಕೊಳ್ಳುವಂತೆ ಜನರಿಗೆ ಸ್ಥಳೀಯ ಆಡಳಿತ ಸೂಚನೆ ನೀಡಿತ್ತು.
ಇನ್ನು, ಹಾಲು ಮಾರಾಟ, ಮೆಡಿಕಲ್ ಶಾಪ್ ಗಳು ಹಾಗೂ ಕೃಷಿ ಸಂಬಂಧಿತ ಮಳಿಗೆ ತೆರೆಯಲು ಮಾತ್ರ ಅವಕಾಶ ಕಲ್ಪಿಸಲಾಗಿದ್ದು, ರೈತರು ಸೂಕ್ತ ದಾಖಲೆಗಳನ್ನು ತಂದರೆ ಮಾತ್ರ ಆನಂದಪುರ ಪಟ್ಟಣದೊಳಗೆ ಅವಕಾಶ ನೀಡಲಾಗುತ್ತಿದೆ.
ಉಳಿದಂತೆ, ಯಾರೂ, ಯಾವುದೇ ಕಾರಣಕ್ಕೂ ಮನೆಗಳಿಂದ ಹೊರಕ್ಕೆ ಬಾರದಂತೆ ಸೂಚನೆ ನೀಡಲಾಗಿದ್ದು, ಬಹುತೇಕ ಕಡೆಗಳಲ್ಲಿ ರಸ್ತೆಗಳನ್ನು ಬಂದ್ ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news









Discussion about this post