ಕಲ್ಪ ಮೀಡಿಯಾ ಹೌಸ್ | ಅನಂತಪಲ್ಲಿ |
ವಿಜಯವಾಡದಿಂದ ವಿಶಾಖಪಟ್ಟಣಂಗೆ ತೆರಳುತ್ತಿದ್ದ ವಾಹನವೊಂದು ಅಪಘಾತಕ್ಕೀಡಾಗಿ ಪಲ್ಟಿಯಾಗಿದ್ದು, ಅದರಲ್ಲಿ ಬರೋಬ್ಬರಿ 7 ಕೋಟಿ ರೂ. ಹಣ ಪತ್ತೆಯಾಗಿರುವ ಘಟನೆ ನಡೆದಿದೆ.
ವಿಶಾಖಪಟ್ಟಣಂಗೆ ತೆರಳುತ್ತಿದ್ದ ವಾಹನವೊಂದು ಅನಂತಪಲ್ಲಿಯ ಬಳಿಯಲ್ಲಿ ಅಪಘಾತಕ್ಕೀಡಾಗಿ, ಪಲ್ಟಿಯಾಗಿ ಬಿದ್ದಿದೆ.
Also read: ಅಣ್ಣಾಮಲೈ ಒಬ್ಬ ಅಯೋಗ್ಯ, ರಾಜ್ಯದ ಪೆನ್ಷನ್ ಪಡೆದು ರಾಜಕೀಯ ಮಾಡುತ್ತಾರೆ | ಮಧು ಬಂಗಾರಪ್ಪ ವಾಗ್ದಾಳಿ
ಅಪಘಾತ ನಡೆದಾಕ್ಷಣ ಎಚ್ಚೆತ್ತ ಸಾರ್ವಜನಿಕರು ರಕ್ಷಣೆಗೆ ಮುಂದಾಗಿದ್ದಾರೆ. ಈ ವೇಳೆ ವಾಹನದಲ್ಲಿ ಬರೋಬ್ಬರಿ 7 ಕೋಟಿ ಹಣವಿರುವುದು ಪತ್ತೆಯಾಗಿದೆ.
ಚುನಾವಣಾ ಕಣವಾಗಿರುವ ಆಂಧ್ರಪ್ರದೇಶದಲ್ಲಿ ದೊಡ್ಡ ಮೊತ್ತದ ಹಣ ಸಾಗಾಟ ಪ್ರಕರಣ ಬೆಳಕಿಗೆ ಬಂದಿದೆ.
ಈ ಘಟನೆ ಸಂಬಂಧ ಪೂರ್ವ ಗೋದಾವರಿ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಪೊಲೀಸರು 7 ಕೋಟಿ ವಶಕ್ಕೆ ಪಡೆದಿದ್ದು, ತನಿಖೆ ಆರಂಭಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post