ಕಲ್ಪ ಮೀಡಿಯಾ ಹೌಸ್ | ಆನವಟ್ಟಿ |
ಇಂದು ಆನವಟ್ಟಿ ಹೋಬಳಿಯ ಎಲ್ಲಾ ಮಳೆ ಹಾನಿ ಮತ್ತು ವಿವಿಧ ಸಂತ್ರಸ್ಥರ ಪರವಾಗಿ ಶ್ರೀಧರ್ ಆಚಾರ್ ಮತ್ತು ಮುಖಂಡರುಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಳೆ ಹಾನಿ ಎಂದರೆ ಮಳೆಯಿಂದಾದ ಬೆಳೆಗಳ ಹಾನಿ, ಜಾನುವಾರುಗಳ ಹಾನಿ ಮತ್ತು ಮನೆಗಳು ಮುಳುಗಡೆ ಆಗಿರುವುದು, ಹಾಲಿ ಬಿದ್ದಿರುವ ಮತ್ತು ಮುಂದೆ ಬೀಳುವ ಮನೆಗಳ ಸಮೀಕ್ಷೆಯನ್ನು ಕುಲಂಕುಶವಾಗಿ ನಡೆಸಿ, ಎಲ್ಲಾ ಫಲಾನುಭವಿಗಳಿಗೆ ಸರಿಯಾದ ಪರಿಹಾರವನ್ನು ಸರ್ಕಾರದಿಂದ ಕೂಡಿಸಬೇಕು ಮತ್ತು ಸರಿಯಾದ ಸಮಯಕ್ಕೆ ಸ್ಥಳ ಪರಿಶೀಲನೆ ಮಾಡಿ ಸಂತ್ರಸ್ತರಿಗೆ ತೊಂದರೆ ಆಗದಂತೆ ಕೆಲಸಗಳನ್ನು ಕಂದಾಯ ಹಾಗೂ ನಗರ ಅಭಿವೃದ್ಧಿ ಇಲಾಖೆಯವರು ನಡೆಸಬೇಕು ಪರಿಹಾರವಾಗಿ ಈಗ ಆಗಿರುವ ಬೆಳೆ ಹಾನಿಯನ್ನು ನೋಡದೆ ಬರಬೇಕಾದ ಫಸಲಿನ ಆಧಾರದ ಮೇಲೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

Also read: ಹರಿಹರದ ಮುಸ್ಲಿಂ ಸಮುದಾಯದಿಂದ ಅನ್ನ ಸಂತರ್ಪಣೆ
ಈ ಸಮಯದಲ್ಲಿ. ಶ್ರೀಧರಾಚಾರ್ ಸೋಮಶೇಖರಯ್ಯ ಎಲಿವಾಳ ಬೆಲವಂತನಕೊಪ್ಪ ದೇವರಾಜ್ . ಚಿಕ್ಕ ಚೌಟಿ ಚಂದ್ರಣ್ಣ. ಹುರುಳಿ ಚಂದ್ರಣ್ಣ. ಹರೀಶ್ ಹೊಸಳ್ಳಿ. ಶಿವಪ್ಪ ಹುಣಸವಳ್ಳಿ. ಮತ್ತು ವಿಜಯೇಂದ್ರಪ್ಪ ಶಿವಾನಂದಪ್ಪ. ಕುಪಟೂರು ಮುರಳಿ ಮತ್ತು ವಿವಿಧ ರೈತ ಸಂಸ್ರಸ್ಥರುಗಳು ಹಾಗೂ ರೈತ ಮುಖಂಡರುಗಳು ಆಗಮಿಸಿದ್ದರು.










Discussion about this post