ಕಲ್ಪ ಮೀಡಿಯಾ ಹೌಸ್ | ಆನೆಗೊಂದಿ(ಕೇರಳ) |
ಕ್ಷುಲ್ಲಕ ಕಾರಣಕ್ಕಾಗಿ ತಾನು ಜನ್ಮ ಕೊಟ್ಟ ಮಗಳನ್ನೇ ಪಾಪಿ ತಂದೆಯೊಬ್ಬ ಕೊಡಲಿಯಿಂದ ಕೊಚ್ಚಿಕೊಂದ ಘಟನೆ ಕೇರಳದ ಮಾವೇಲಿಕ್ಕರ್ ಪುನ್ನಮಡು ಆನೆಗೊಂದಿಯಲ್ಲಿ ನಡೆದಿದೆ.
ಮಹೇಶ್(38) ಎಂಬಾತ ತನ್ನ ಪುತ್ರಿ ನಕ್ಷತ್ರ(6) ಎಂಬಾಕೆಯನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದಾನೆ.

ಮೂರು ವರ್ಷಗಳ ಹಿಂದೆ ನಕ್ಷತ್ರಾಳ ತಾಯಿ ವಿದ್ಯಾ ಆತ್ಮಹತ್ಯೆಗೆ ಶರಣಾಗಿದ್ದಳು. ಆನಂತರ ತಂದೆ ಮಹೇಶ್ ಹಾಗೂ ನಕ್ಷತ್ರ ಮನೆಯಲ್ಲಿದ್ದರು.
Also read: ದೇಶವನ್ನು ಪ್ಲಾಸ್ಟಿಕ್ ಮುಕ್ತರನ್ನಾಗಿ ಮಾಡಬೇಕು: ಮಾಜಿ ಸೈನಿಕರ ಸಂಘ ಕರೆ
ತಾಯಿಯನ್ನು ಕಳೆದುಕೊಂಡು ನೋವಿನಲ್ಲಿದ್ದ ನಕ್ಷತ್ರಾ ತನ್ನ ಅಜ್ಜ ಅಜ್ಜಿ (ವಿದ್ಯಾಳ ತಂದೆ ತಾಯಿ)ಯ ಬಳಿಗೆ ತನ್ನನ್ನು ಕರೆದೊಯ್ಯುವಂತೆ ಮಹೇಶ್ ನನ್ನು ಒತ್ತಾಯಿಸುತ್ತಿದ್ದಳು. ಇದೇ ವಿಚಾರವಾಗಿ ಮಗಳ ಮೇಲೆ ಏಕಾಏಕಿ ರೊಚ್ಚಿಗೆದ್ದ ಮಹೇಶ್ ಬುಧವಾರ ಸಂಜೆ 7:30ರ ವೇಳೆಗೆ ನಕ್ಷತ್ರಳನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post