ಕಲ್ಪ ಮೀಡಿಯಾ ಹೌಸ್ | ಅಂಕೋಲಾ |
ಮಲೆನಾಡು #Malenadu ಹಾಗೂ ಕರಾವಳಿ ಭಾಗದಲ್ಲಿ #Coastal area ನಿರಂತರವಾಗಿ ಅಪಾರ ಪ್ರಮಾಣದ ಮಳೆ ಸುರಿಯುತ್ತಿದ್ದು, ಅಂಕೋಲಾ-ಕುಮಟಾ ಮಾರ್ಗದ ಮಧ್ಯದಲ್ಲಿ ಭಾರೀ ಪ್ರಮಾಣದ ಗುಡ್ಡ ಕುಸಿತ ಉಂಟಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರ #National Highway 66 ಶಿರೂರು ಬೊಮ್ಮಯ್ಯ ದೇವಾಲಯದ ಬಳಿಯಲ್ಲಿ ಇಂದು ದೊಡ್ಡ ಪ್ರಮಾಣದಲ್ಲಿ ಗುಡ್ಡ ಕುಸಿತ ಉಂಟಾಗಿದೆ. ಪರಿಣಾಮವಾಗಿ ಹೆದ್ದಾರಿ ಅಂಚಿನ ಟೀ ಸ್ಟಾಲ್ ಮತ್ತಿತರ ಸಣ್ಣಪುಟ್ಟ ಅಂಗಡಿಗಳು ಸಂಪೂರ್ಣ ಸಂಪೂರ್ಣ ಹಾನಿಯಾಗಿದೆ.
ಗುಡ್ಡ ಕುಸಿತದ ರಭಸಕ್ಕೆ ಹೆದ್ದಾರಿ ಅಂಚಿಗೆ ನಿಲ್ಲಿಸಿಟ್ಟ ಗ್ಯಾಸ್ ಟ್ಯಾಂಕರ್ ವಾಹನ, ಗಂಗಾವಳಿ ನದಿ ನೀರಿನಲ್ಲಿ ಕೊಚ್ಚಿ ಹೋಗಿದೆ. ಲಾರಿ ಮತ್ತಿತರ ವಾಹನಗಳು ಮಣ್ಣಿನಡಿ ಸಿಲುಕಿಕೊಂಡಿವೆ.
Also read: ಶಿವಮೊಗ್ಗ | ಸಕ್ರೆಬೈಲು ಬಳಿ ಬಸ್-ಕಾರು ನಡುವೆ ಅಪಘಾತ | ಹಲವರಿಗೆ ಗಾಯ
ಒಮ್ಮೆಲೆ ಗುಡ್ಡ ಕುಸಿದು ಮಣ್ಣು ನದಿಯಲ್ಲಿ ಜೋರಾಗಿ ಜರಿದ ಪರಿಣಾಮ ಗಂಗಾವಳಿ ನದಿ ಪಾತ್ರದ ಆಚೆ ದಡದ ಮನೆಯೂ ಕೊಚ್ಚಿಹೋಗಿದೆ ಎನ್ನಲಾಗಿದೆ. ಹೆದ್ದಾರಿ ಅಂಚಿಗಿರುವ ಟೀ ಸ್ಟಾಲ್, ವಾಹನಗಳಲ್ಲಿ ಎಷ್ಟು ಜನರಿದ್ದರು? ಎಲ್ಲರೂ ಪ್ರಾಣಪಾಯದಿಂದ ಪಾರಾಗಿದ್ದಾರೆಯೇ ಎಂಬುದು ಇನ್ನೂ ತಿಳಿದುಬರಬೇಕಿದೆ.
ಪೊಲೀಸ್ ಅಗ್ನಿ ಶಾಮಕ, ಎನ್’ಎಚ್ ಎಐ ಸುರಕ್ಷತಾ ಅಂಬುಲೆನ್ಸ್ ಮತ್ತಿತರ ಸ್ಥಳದಲ್ಲಿ ಬಿಡು ಬಿಟ್ಟಿದೆ. ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದಾಗಿದ್ದು, ಎರಡು ಕಡೆ ವಾಹನಗಳು ಸಾಲುಗಟ್ಟಿ ನಿಂತಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post