ಕಲ್ಪ ಮೀಡಿಯಾ ಹೌಸ್ | ಮುಂಬೈ |
ಪ್ರಧಾನಿ ನರೇಂದ್ರ ಮೋದಿ #NarendraModi ಹಾಗೂ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ #YogiAdityanath ಅವರು ನಮ್ಮ ಟಾರ್ಗೆಟ್ ಆಗಿದ್ದು, 26×11 ಮಾದರಿಯಲ್ಲಿ ಬೃಹತ್ ದಾಳಿ #MumbaiTerrorAttack ನಡೆಸುತ್ತೇವೆ ಎಂಬ ಅನಾಮಧೇಯ ಬೆದರಿಕೆ ಕರೆಯೊಂದು ಮುಂಬೈ ಪೊಲೀಸರಿಗೆ ಬಂದಿದೆ ಎಂದು ವರದಿಯಾಗಿದೆ.
ಈ ಕುರಿತಂತೆ ಮುಂಬೈ #Mumbai ಪೊಲೀಸರಿಗೆ ಈ ಬೆದರಿಕೆ ಕರೆ ಬಂದಿದ್ದು, ಇಬ್ಬರು ಮಹಾನ್ ನಾಯಕರೇ ನಮ್ಮ ಟಾರ್ಗೆಟ್ ಆಗಿದ್ದು, ಮುಂಬೈನಲ್ಲಿ ನಡೆದ ದಾಳಿಯ ಮಾದರಿಯಲ್ಲೇ ಬೃಹತ್ ದಾಳಿ ಮಾಡಲಾಗುವುದು ಎಂದು ಬೆದರಿಕೆ ಹಾಕಲಾಗಿದೆ.

ಇತ್ತೀಚೆಗೆ ಸೀಮಾ ಹೈದರ್ ಎಂಬ ಪಾಕಿಸ್ಥಾನದ ಮಹಿಳೆ ಆನ್ಲೈನ್ ಗೇಮ್ ಮೂಲಕ ಪರಿಚಯವಾದ ತನ್ನ ಗೆಳೆಯನನ್ನು ಭೇಟಿ ಮಾಡಲು ಭಾರತಕ್ಕೆ ಬಂದಿದ್ದಾಳೆ. ತನ್ನ ನಾಲ್ವರು ಮಕ್ಕಳೊಂದಿಗೆ ಬಂದಿರುವ ಈಕೆ ಮತ್ತೆ ಪಾಕಿಸ್ಥಾನಕ್ಕೆ #Pakistan ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪಾಕಿಸ್ಥಾನದಿಂದ ಎಂದು ಹೇಳಲಾದ ಕರೆಯಲ್ಲಿ, ಸೀಮಾಳನ್ನು ಆಕೆಯ ತಾಯ್ನಾಡು ಪಾಕಿಸ್ಥಾನಕ್ಕೆ ವಾಪಸ್ ಕಳುಹಿಸಿ ಕೊಡದಿದ್ದರೆ ಮುಂಬೈನಲ್ಲಾದ ದಾಳಿಯಂತೆ ಮತ್ತೊಂದು ಭಯೋತ್ಪಾದನಾ ದಾಳಿಯನ್ನು ಎದುರಿಸಲು ಸಜ್ಜಾಗಿ ಎಂದು ತಿಳಿಸಲಾಗಿತ್ತು.
ಈ ಸಂಬಂಧ ತನಿಖೆ ನಡೆಸಿದ್ದ ಪೊಲೀಸರಿಗೆ ಇದೊಂದು ಹುಸಿ ಬಾಂಬ್ ಕರೆ ಎಂಬುದು ಬಯಲಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post