ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ತೀರ್ಥಹಳ್ಳಿ: ಕಾಮತ್ ಸ್ಟುಡಿಯೋಸ್ ಅಡಿಯಲ್ಲಿ ಹಿಂದೆ ಇನ್ವಸ್ಟಿಗೇಟರ್ ಎಂಬ ಕಿರುಚಿತ್ರ ನಿರ್ಮಿಸಿ ಯಶಸ್ವಿಗೊಂಡಿದ್ದ ತೀರ್ಥಹಳ್ಳಿಯ ಹುಡುಗರು ಈಗ ಅಂತಿಮ ರಾತ್ರಿ ಎಂಬ ಹಾರರ್ ಶಾರ್ಟ್ ಮೂವಿವೊಂದನ್ನು ನಿರ್ಮಿಸಿದ್ದು, ನಾಳೆ ಯೂಟ್ಯೂಬ್’ನಲ್ಲಿ ಬಿಡುಗಡೆಗೊಳ್ಳಲಿದೆ.ಕಾಮತ್ ಸ್ಟುಡಿಯೋಸ್ ಅಡಿಯಲ್ಲಿ ಸತೀಶ್ ಕಾಮತ್ ನಿರ್ಮಿಸಿರುವ ಈ ಕಿರುಚಿತ್ರವನ್ನು ಪ್ರಥಮ ಪಿಯುಸಿ ವಿದ್ಯಾರ್ಥಿ ಮಹೇಶ್ ಕಾಮತ್ ನಿರ್ದೇಶಿಸಿದ್ದು, ಇವರೇ ಕತೆಯನ್ನೂ ಸಹ ಬರೆದಿದ್ದಾರೆ. ಮಹೇಶ್ ಕಾಮತ್, ಶಿವಪ್ರಸಾದ್ ಹೆಬ್ಬಾರ್, ಪೃಥ್ವಿ ಸುವರ್ಣಾ, ಅಮೋಘ್ ಅವರುಗಳು ಕಿರುಚಿತ್ರದಲ್ಲಿ ನಟಿಸಿದ್ದು, ಪೃಥ್ವಿ ಸುವರ್ಣಾ ಕ್ಯಾಮೆರಾ ವರ್ಕ್ ಮಾಡಿದ್ದಾರೆ.ಅಂತಿಮ ರಾತ್ರಿ ಕಿರುಚಿತ್ರ ಹಾರರ್ ವಿಷಯವನ್ನು ಒಳಗೊಂಡಿದ್ದು, ತೀರ್ಥಹಳ್ಳಿಯ ಸುತ್ತಮುತ್ತಲೂ ಚಿತ್ರೀಕರಣಗೊಂಡಿದೆ.
ಇನ್ನು, ಈಗಾಗಲೇ ಬಿಡುಗಡೆಗೊಂಡಿರುವ ಟ್ರೈಲರ್ ಭಾರೀ ಕುತೂಹಲ ಕೆರಳಿಸಿದೆ.
ಅತಿ ಕಡಿಮೆ ವೆಚ್ಚೆದಲ್ಲಿ, ಕನಿಷ್ಠ ಸಂಪನ್ಮೂಲಗಳನ್ನು ಬಳಸಿಕೊಂಡು ಉತ್ತಮ ಕಿರುಚಿತ್ರಗಳನ್ನು ನಿರ್ಮಿಸುತ್ತಿರುವ ಮಲೆನಾಡಿನ ಈ ಯುವ ಪ್ರತಿಭೆಗಳ ಪ್ರಯತ್ನ ಯಶಸ್ವಿಗೊಂಡು, ಇವರಿಂದ ಮತ್ತಷ್ಟು ಕಲಾ ಸೇವೆಯಾಗಲಿ ಎಂದು ಕಲ್ಪ ಮೀಡಿಯಾ ಹೌಸ್ ಹಾರೈಸುತ್ತದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post