ಕಲ್ಪ ಮೀಡಿಯಾ ಹೌಸ್ | ಕೋಲ್ಕತ್ತಾ |
ಆರ್’ಜಿಕರ್ ಮೆಡಿಕಲ್ ಕಾಲೇಜು ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಪ್ರಕರಣದಂತೆಯೇ ಮತ್ತೊಂದು ಪ್ರಕರಣ ಕೋಲ್ಕತ್ತಾದಲ್ಲಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಮತ್ತೊಂದು ಸಾಮೂಹಿಕ ಅತ್ಯಾಚಾರ #GangRape ನಡೆದಿದೆ.
ಪಶ್ಚಿಮ ಬಂಗಾಳದ #WestBengal ದುರ್ಗಾಪುರದಲ್ಲಿ ಖಾಸಗಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿಯ ಮೇಲೆ ದುರುಳರು ಸಾಮೂಹಿಕ ಅತ್ಯಾಚಾರ ನಡೆದಿದ್ದು, ದೇಶವೇ ಬೆಚ್ಚಿ ಬಿದ್ದಿದೆ.
ಒಡಿಶಾದ ಜಲೇಶ್ವರ ನಿವಾಸಿಯಾದ ಯುವತಿ, ದುರ್ಗಾಪುರದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಳು.
ಸಂತ್ರಸ್ಥೆಯ ಕುಟುಂಬಸ್ಥರು ದೂರು ದಾಖಲಿಸಿದ್ದು, ಇದರ ಆಧಾರದಲ್ಲಿ ತನಿಖೆ ಆರಂಭಗೊಂಡಿದೆ.
ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮಗಳ ಜೊತೆಯಲ್ಲಿ ಮಾತನಾಡಿರುವ ಆಕೆಯ ಪೋಷಕರು, ತಮ್ಮ ಮಗಳ ಸ್ನೇಹಿತರಿಂದ ಕರೆ ಬಂದ ನಂತರ ಇಂದು ಬೆಳಗ್ಗೆ ದುರ್ಗಾಪುರ ತಲುಪಿದ್ದೇವೆ. ನಮಗೆ ಅವಳ ಸ್ನೇಹಿತರಿಂದ ಕರೆ ಬಂತು ಮತ್ತು ಅವರು ಘಟನೆಯ ಬಗ್ಗೆ ಮಾಹಿತಿ ನೀಡಿದರು.
ಘಟನೆ ನಡೆದ ಸ್ಥಳದಿಂದ ಎಲ್ಲಾ ಸಾಕ್ಷಿಗಳನ್ನು ಸಂಗ್ರಹಿಸಿರುವ ಪೊಲೀಸರು, ಹಲವರಿಂದ ಹೇಳಿಕೆಗಳನ್ನೂ ಪಡೆದಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post