ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕೆಎಸ್’ಆರ್’ಟಿಸಿ #KSRTC ಹಾಗೂ ಬಿಎಂಟಿಸಿ #BMTC ಪ್ರಯಾಣ ದರ ಏರಿಕೆಯ ಬಿಸಿಯ ಬೆನ್ನಲ್ಲೇ ಮೆಟ್ರೋ #Metro ದರ ಏರಿಕೆಯಾಗುವ ಸಾಧ್ಯತೆಯಿದ್ದು, ಇಂದು ಅಥವಾ ನಾಳೆಯೇ ನಿಗದಿಯಾಗುವ ಸಾಧ್ಯತೆಯಿದೆ.
ಈ ಕುರಿತಂತೆ ಮಾಹಿತಿ ತಿಳಿದುಬಂದಿದ್ದು, ಮೆಟ್ರೋ ಪ್ರಯಾಣದ ಪರಿಷ್ಕರಣೆ ಪ್ರಕ್ರಿಯೆ ಅಂತಿಮ ಘಟ್ಟಕ್ಕೆ ತಲುಪಿದ್ದು, ಈ ಸಂಬಂಧ ಬಿಎಂಆರ್’ಸಿಎಲ್ #BMRCL ಅಧಿಕಾರಿಗಳ ಮತ್ತು ಫೇರ್ ಹೈಕ್ ಕಮಿಟಿಯ ಹೈವೊಲ್ಟೇಜ್ ಸಭೆ ನಡೆಯಲಿದೆ. ಇದೇ ಸಭೆಯಲ್ಲಿ ದರ ಏರಿಕೆ ನಿಗದಿಯಾಗುವ ಸಾಧ್ಯತೆಯದಿದೆ ಎನ್ನಲಾಗಿದೆ.
Also Read>> ಹೆಚ್ಚುತ್ತಿರುವ ಅಪರಾಧ ಪ್ರಕರಣಗಳು | ಕರ್ನಾಟಕ ಜಂಗಲ್ ರಾಜ್ಯವಾಗಿದೆ | ಬಸವರಾಜ ಬೊಮ್ಮಾಯಿ ಆರೋಪ
ಕಳೆದ ಏಳು ವರ್ಷದಿಂದ ಮೆಟ್ರೋ ಪ್ರಯಾಣ ದರ ಏರಿಕೆ ಆಗಿರಲಿಲ್ಲ. ಈಗ ದರ ಏರಿಕೆಗೆ ಮುಂದಾಗಿರುವ ಬಿಎಂಆರ್’ಸಿಎಲ್ ದರ ಏರಿಕೆ ಫೈನಲ್ ಮಾಡುವ ನಿಟ್ಟಿನಲ್ಲಿ ಬೋರ್ಡ್ ಮೀಟಿಂಗ್ ಮಾಡಲಿದೆ. ಸದ್ಯ ಈಗಾಗಲೇ ದರ ಏರಿಕೆ ಸಂಬಂಧ ಕಮಿಟಿ 40% ರಿಂದ 45% ಏರಿಕೆಗೆ ಚಿಂತನೆ ನಡೆಸಿದೆ.ದರ ಏರಿಕೆಗೆ ವಿದೇಶಿ ಮಾದರಿ
ಇನ್ನು ದರ ಏರಿಕೆಗೂ ಮುನ್ನ ಫೇರ್ ಹೈಕ್ ಫಿಕ್ಸೇಷನ್ ಕಮಿಟಿಯು ಸಿಂಗಾಪುರ, ಹಾಂಕಾಂಗ್, ದೆಹಲಿಗೆ ತೆರಳಿ ಅಲ್ಲಿನ ಮೆಟ್ರೋ ದರ ಪರಿಷ್ಕರಣೆ ಕ್ರಮ, ದರ ಹೆಚ್ಚಳವನ್ನು ಅಧ್ಯಯನ ಮಾಡಿ ದರ ಪರಿಷ್ಕರಣೆ ವರದಿ ಸಿದ್ಧಪಡಿಸಿದೆ.
2017 ರಲ್ಲಿ ಶೇ.10% -15%ರಷ್ಟು ಮೆಟ್ರೋ ಪ್ರಯಾಣ ದರ ಏರಿಕೆ ಮಾಡಲಾಗಿತ್ತು. ಮುಂದಿನ ದಿನಗಳಲ್ಲಿ ನಮ್ಮ ಮೆಟ್ರೋ ರೈಲು #MetroTrain ಮುಂದಿನ ಐದು ವರ್ಷದಲ್ಲಿ 220 ಕಿಮೀನಷ್ಟು ವಿಸ್ತರಣೆಯಾಗಲಿದೆ. ಮೆಟ್ರೋ ಕಾಮಗಾರಿಗಾಗಿ ವಿವಿಧ ಬ್ಯಾಂಕ್, ಏಜೆನ್ಸಿಗಳಿಗೆ ಪಾವತಿಸಬೇಕಾದ ಸಾಲದ ಮೇಲಿನ ಬಡ್ಡಿ, ಪ್ರಸ್ತುತ ರೈಲುಗಳ ಕಾರ್ಯಾಚರಣೆ ವೆಚ್ಚ, ನಿರ್ವಹಣೆ ಮತ್ತು ಸಿಬ್ಬಂದಿ ವೇತನ ಮತ್ತಿತರ ವಿವಿಧ ವೆಚ್ಚ ಪ್ರತಿ ವರ್ಷ ಹೆಚ್ಚುತ್ತಿದ್ದು, ಈ ಹಿನ್ನೆಲೆಯಲ್ಲಿ 15%-20% ರಷ್ಟು ದರ ಏರಿಕೆ ಅನಿವಾರ್ಯ ಎಂಬುದಾಗಿ ಅಧಿಕಾರಿಗಳ ಮಾಹಿತಿ ನೀಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post