ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
1. ವಿಲನ್ ಸಿನಿಮಾ ರಿಲೀಸ್ ದಿನ ಬಲಿಪಶುವೊಂದನ್ನು ಕಡಿದು ನಾಯಕ ನಟನ ಕಟೌಟ್ ಗೆ ರಕ್ತಾಭಿಷೇಕ ಮಾಡ್ತಾರೆ! ಇವರು ಅಭಿಮಾನಿ ದೇವರುಗಳು!?
2. ಇಬ್ಬರು ನಟರ (ದರ್ಶನ್ – ಸುದೀಪ್) ನಡುವೆ ಚೆನ್ನಾಗಿದ್ದ ಸಂಬಂಧ ಹಾಳು ಮಾಡಿ ಅಣ್ಣಂಗೆ ಜೈ ಅಣ್ಣಂಗೆ ಜೈ ಅಂದು ಅಂದು ಶಾಶ್ವತವಾಗಿ ಅವರನ್ನು ಶತ್ರುಗಳನ್ನಾಗಿ ಮಾಡಿಬಿಡುತ್ತಾರೆ! ಇವರು ಅಭಿಮಾನಿ ದೇವರುಗಳು!?
3. 40 ವರ್ಷ ಚಿತ್ರರಂಗದ ಸೇವೆ ಮಾಡಿದ ಹಿರಿಯ ನಟನೊಬ್ಬನಿಗೆ ಕ್ಷುಲ್ಲಕ ಕಾರಣಕ್ಕಾಗಿ ಘೇರಾವ್ ಹಾಕಿ ಹಲ್ಲೆ ಮಾಡಲು ಮುಂದಾಗಿ ಹೆದರಿಸಿ ಕ್ಷಮೆ ಕೇಳಿಸುತ್ತಾರೆ! ಇವರು ಅಭಿಮಾನಿ ದೇವರುಗಳು?!
4. ತೆರೆಯ ಮೇಲೆ ಇವರ ಸ್ಟಾರ್ ಗಳು ಏನೇ ಮಾಡಿದರೂ ಯಾರೂ ಕೇಳಬಾರದು! ಮಾತನಾಡಿದವರಿಗೆ ಗೂಸಾ ಬೀಳುತ್ತವೆ! ಇವರು ಅಭಿಮಾನಿ ದೇವರುಗಳು!
6. ಜಾತಿ ಗೌರವಕ್ಕೆ ಧಕ್ಕೆ ಮಾಡಿದ್ದರ ವಿಚಾರವಾಗಿ ಮಾತನಾಡಿದ ಪತ್ರಕರ್ತನೊಬ್ಬನಿಗೆ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಲಾಗುತ್ತದೆ. ಇವರು ಅಭಿಮಾನಿ ದೇವರುಗಳು!?
7. ಸದಾ ಕಾಲ ಕುಡ್ಕೊಂಡು ಸಿಗರೇಟು ಸೇದ್ಕೊಂಡು ಗಾಂಜಾ ಹೊಡ್ಕೊಂಡು ಸಿನಿಮಾ ರಿಲೀಸ್ ಆದಾಗ ಕಟೌಟ್ ಗೆ ಹಾರ ಹಾಕಿಕೊಂಡು ಮನೆಗೆ ಸಮಾಜಕ್ಕೆ ಭಾರ ಆಗಿ ಅವರಿವರನ್ನು ಹೆದರಿಸಿಕೊಂಡು ರೌಡಿ ಶೀಟ್ ಹಾಕಿಸಿಕೊಂಡು ಬದುಕುವ ಇವರು ಅಭಿಮಾನಿ ದೇವರುಗಳು!
8. ಈ ಥರ ಹೇಳ್ತಾ ಹೋದ್ರೆ ಈ ಪಟ್ಟಿ ಹನುಮಂತನ ಬಾಲದಂತೆ ಬೆಳೆಯುತ್ತಲೇ ಹೋಗುತ್ತದೆ!
ಇಂತಹವರ ನಡುವೆ…
1. ತಾವು ನಕಲಿ ಹೀರೋಗಳು ಅಂತ ಗೊತ್ತಿದ್ರೂ ಅಭಿಮಾನದ ಅತಿರೇಕದಲ್ಲಿ ತೂರಾಡುವ ಹಿಂಬಾಲಕರಿಗೆ ಕಡಿವಾಣ ಹಾಕಲು ತಾಕತ್ತಿಲ್ಲದ, ಅವರಿಗೆ ಸೂಕ್ತ ಮಾರ್ಗದರ್ಶನ ಮಾಡುವ ಯೋಗ್ಯತೆ ಇಲ್ಲದ, ಬರೀ ಬಿಲ್ಡಪ್ ತಗೋಳೋ ಬೇಜವಾಬ್ದಾರಿ (ನಕಲಿ) (ರೀಲ್) ಹೀರೋ(?) ಗಳು!
2. ಇಂತಹವರ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಲು, ಒದ್ದು ಬುದ್ಧಿ ಕಲಿಸಲು ಸಾಮರ್ಥ್ಯವಿಲ್ಲದ ಬೆನ್ನು ಮೂಳೆ ಗಟ್ಟಿ ಇಲ್ಲದ, ರಾಜಕಾರಣಿಗಳ ತಾಳಕ್ಕೆ ಕುಣಿಯುವ ಇಲಾಖೆ!
4. ಸಿಗರೇಟು ಹಚ್ಚಿ ಕುಡಿದು ತೂರಾಡುವುದನ್ನೇ ಸ್ಟಾರ್ ಗಿರಿ ಅಂತ ತೋರಿಸುವ ಇಂಥಾ ನಟರ ಸಿನಿಮಾಗಳ ಟ್ರೈಲರ್, ಟೀಸರ್ ರಿಲೀಸ್ ಗೆ ಹಗಲೂ ರಾತ್ರಿ ಕಾದು ಲೈಕ್ ಕೊಟ್ಟು ವರ್ಲ್ಡ್ ರೆಕಾರ್ಡ್ ಮಾಡಿಸುವ ಅವಿವೇಕಿ ಸೋಕಾಲ್ಡ್ ವಿದ್ಯಾವಂತ ಕಾಲೇಜು ತರುಣ ತರುಣಿಯರು! ಮಕ್ಕಳನ್ನೂ ಕರ್ಕೊಂಡು ಇಂಥಾ ಸಿನಿಮಾಗಳನ್ನ ನೋಡಿಕೊಂಡು ಬರೋ ಅಪ್ಪ ಅಮ್ಮಂದಿರು!
ಅಹಾ! ಎಂಥ ಮಕ್ಕಳಿಗೆ ಜನ್ಮ ಕೊಟ್ಟುಬಿಟ್ಟೆ ತಾಯಿ ಭುವನೇಶ್ವರಿ! ಪುಣ್ಯ ಮಾಡಿರಬೇಕು ಇಂಥಾ ಮಕ್ಕಳನ್ನ ಪಡಿಯೋಕೆ! ಅಣ್ಣಾವ್ರು ಬದುಕಿರಬೇಕಿತ್ತು! ಇದನ್ನೆಲ್ಲಾ ಕಣ್ಣಾರೆ ನೋಡೋಕೆ!
#ಅಭಿಮಾನಿದೇವರುಗಳು!
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post