ಕಲ್ಪ ಮೀಡಿಯಾ ಹೌಸ್ | ಮೈಸೂರು |
ದಸರಾ ನೋಡಲು ಈ ಬಾರಿ ನೀವು ಮೈಸೂರಿಗೆ ಹೋಗ್ತಿದ್ದರೆ ತಪ್ಪದೇ ರೈಲ್ವೆ ಇಲಾಖೆಯ ಸಂಗ್ರಹಾಲಯಕ್ಕೆ ತಪ್ಪದೇ ಭೇಟಿ ನೀಡಿ.
ಹೌದು… ಮೈಸೂರು ದಸರಾಗೆ ಮೆರುಗು ನೀಡಲು ರೈಲ್ವೆ ಇಲಾಖೆ ಸಿದ್ದವಾಗಿದ್ದು, ಹಬ್ಬದ ದಿನಗಳಾದ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 2ರವರೆಗೆ (ಎರಡೂ ದಿನಗಳನ್ನು ಒಳಗೊಂಡಂತೆ) ವಿಶೇಷ ಅಲಂಕಾರಿಕ ವಿದ್ಯುತ್ ದೀಪಾಲಂಕಾರ ಕಾರ್ಯಕ್ರಮವನ್ನು ಆಯೋಜಿಸಲಿದೆ.
ಈ ಹಿನ್ನೆಲೆಯಲ್ಲಿ ರೈಲು ಸಂಗ್ರಹಾಲಯದ ಕಾರ್ಯ ಸಮಯವನ್ನು ವಿಸ್ತರಿಸಲಾಗಿದ್ದು, ಮೇಲೆ ಸೂಚಿಸಿರುವ ಅವಧಿಯಲ್ಲಿ ಸಂಗ್ರಹಾಲಯವು ಪ್ರತಿದಿನ ರಾತ್ರಿ 8:00 ಗಂಟೆಯವರೆಗೆ ಸಾರ್ವಜನಿಕರಿಗೆ ತೆರೆಯಲಾಗುತ್ತದೆ.
ವಿಸ್ತರಿಸಲಾದ ಈ ಸಮಯದಲ್ಲಿ, ಪ್ರವಾಸಿಗರು ಹಳೆಯ ಆವಿಯ ಎಂಜಿನ್’ಗಳು, ಪರಿಶೀಲನಾ ಬೋಗಿಗಳು, ರೈಲು ಬಸ್, ಆವಿಯ ಅಗ್ನಿಶಾಮಕ ಪಂಪು, ಕೈಚಾಲಿತ ಕ್ರೇನ್ ಹಾಗೂ ಇತರೆ ಅನೇಕ ಹೊರಾಂಗಣ ಪ್ರದರ್ಶನ ವಸ್ತುಗಳನ್ನು ಅದ್ಭುತವಾದ ದೀಪಾಲಂಕಾರದಲ್ಲಿ ವೀಕ್ಷಿಸಬಹುದಾಗಿದೆ.
ಸಾಮಾನ್ಯವಾಗಿ ರಜಾದಿನವಾಗಿರುವ ಸೆ.23 ಹಾಗೂ ಸೆ.30ರಂದು ಸಹ ಸಂಗ್ರಹಾಲಯವನ್ನು ಸಾರ್ವಜನಿಕರಿಗೆ ತೆರೆಯಲಾಗುತ್ತದೆ. SLR/DSLR ಕ್ಯಾಮೆರಾಗಳ ಮೂಲಕ ಛಾಯಾಗ್ರಹಣವನ್ನು ನಿಗದಿತ ಶುಲ್ಕ ಪಾವತಿಸಿದ ನಂತರ ಮಾತ್ರ ಅನುಮತಿಸಲಾಗುತ್ತದೆ.
ಹೆಚ್ಚಿನ ವಿವರಗಳಿಗೆ, ಪ್ರವಾಸಿಗರು ಮೈಸೂರು ರೈಲು ಸಂಗ್ರಹಾಲಯ ಅಧಿಕಾರಿಗಳನ್ನು ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post