ಕಲ್ಪ ಮೀಡಿಯಾ ಹೌಸ್
ಕೋವಿಡ್-19 ಎನ್ನುವ ವೈರಸ್ ವರ್ಲ್ಡ್ ವಾರ್ ಸಾರಿದೆ, ಇದೊಂದು ಅತೀಸೂಕ್ಷ್ಮತೆಯ ಜೈವಿಕ ಯುದ್ದವೆಂದೇ ಬಣ್ಣಿಸಲಾಗುತ್ತಿದೆ, ಹೀಗಾಗಿ “ಕೊರೋನಾ ವಾರ್ ರೂಮ್” ವಾರಿಯರ್, ಅದರಲ್ಲೂ ಪ್ರಂಟ್ ಲೈನ್ ವಾರಿಯರ್ ಎಂದೇ ಕರೆದು ಆತಂಕದಲ್ಲಿಯೇ ಬದುಕುಗಳನ್ನು ದೂಡಬೇಕಿದೆ ಅಲ್ಲದೆ ಮನುಕುಲದ ರಕ್ಷಣೆಯ ಹೊಣೆಗಾರಿಕೆಯನ್ನು ಪ್ರತಿ ಮನುಷ್ಯನಲ್ಲಿರುವ ಮನುಷ್ಯತ್ವವೇ ಹೊತ್ತು ಯುದ್ದವನ್ನು ಗೆಲ್ಲಬೇಕಿದೆ.
ಮಾನವೀಯತೆ ಇಲ್ಲದೆ ಕೋವಿಡ್-19 ಯುದ್ದವನ್ನು ಗೆಲ್ಲಲು ಸಾಧ್ಯವಿಲ್ಲ ಎನ್ನುವ ಅರಿವು ಪ್ರತಿ ಮನುಷ್ಯನಿಗೂ ಇರಲೇಬೇಕು ಹಾಗೂ ತನ್ನಲ್ಲಿರುವ ಮನುಷ್ಯತ್ವವನ್ನು ಪ್ರಸ್ತುತ ಪಡಿಸಲು ಮುಂದಾಗುವ ಅತೀ ಜರೂರತ್ತಿದೆ.
ಇಂತಹದೊಂದು ಟಿಪ್ಪಣಿ ತಮ್ಮಗಳ ಮುಂದಡಿಯಿಟ್ಟು ಶಿವಮೊಗ್ಗದ ಪೊಲೀಸ್ ಪೇದೆಯೋರ್ವರ ಆತ್ಮಬಲದ ಗಟ್ಟಿತನ, ಸೇವಾಭೂಮಿಕೆಯ ಕರ್ತವ್ಯ, ತನ್ನ ಆರೋಗ್ಯವನ್ನು ಲೆಕ್ಕಿಸದೇ, ಖಾಕಿವರ್ಣಧಾರಿಯಾಗಿ ಜನಜೀವಗಳ ನೋವು ಸಂಕಟದ ಬವಣೆಯ ಕನ್ನಡಿಯಲ್ಲಿ ತಾನು ಪ್ರತಿಬಿಂಬಿಸಿಕೊಂಡು ಇಡೀ ಪೊಲೀಸ್ ವಲಯವನ್ನು ಪ್ರಶಂಸನೀಯವಾದ ಮೇರೆತ್ತರಕ್ಕೆ ಏರಿಸಿದ ಸೂಪರ್ ಕಾಪ್ ಪೇದೆ (ಹೆಡ್ ಕಾನ್ಸಟೇಬಲ್)ರವರೇ ಚೌಡಪ್ಪ.
ಹೌದು ಚೌಡಪ್ಪನವರು ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸ್ ಪೇದೆಯಾಗಿದ್ದು ಇದೇ ಸರಹದ್ದಿನ “ಮೆಗ್ಗಾನ್ ಹಾಸ್ಪಿಟಲ್” ನ ಮೆಗ್ಗಾನ್ ಔಟ್ ಪೋಸ್ಟ್ ಪೊಲೀಸ್ ಠಾಣೆಯ ಕರ್ತವ್ಯದ ಜವಾಬ್ದಾರಿಯನ್ನ ಕಳೆದ ಮೂರು ವರುಷಗಳಿಂದ ನಿರ್ವಹಿಸುತ್ತಿದ್ದಾರೆ, ಮೂಲತಃ ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲ್ಲೂಕಿನ “ಚಿಕ್ಕಕಬ್ಬಾರು” ಎಂಬುವ ಹಳ್ಳಿಯಿಂದ ಬಂದವರು, ಆರು ವರ್ಷದ ಕೆಳಗೆ ಪೊಲೀಸ್ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.
ಹೀಗೆ ನಿಯೋಜನೆಗೊಂಡ ಚೌಡಪ್ಪನವರಿಗೆ ಕೋವಿಡ್-19 ಎನ್ನುವ ಮಹಾಮಾರಿಯ ಪೀಡಿತ ಜನಜೀವನಗಳ ಮಧ್ಯೆ ಕರ್ತವ್ಯವನ್ನು ನಿರ್ವಹಿಸಬೇಕಾದ ಪ್ರಸಂಗ ಎದುರಾಯಿತು, ಮೊದಲನೆ ಅಲೆಯಲ್ಲಿ ಭಾರತದಲ್ಲಿ ಸಾವು-ನೋವಿನ ಸಂಕಟಗಳು ಇಳಿಮುಖವಾಗಿದೆ ಎಂದು “ಆರೋಗ್ಯ ವರದಿ” ತಿಳಿಸಿತ್ತಾದರು ಶಿವಮೊಗ್ಗದಲ್ಲಿ 200 ಕೋವಿಡ್ ಪೀಡಿತ ಶವಗಳ ಕಾವಲುಪಡೆಯ ವಾರಿಯರ್ ಆಗಿದ್ದರು ಪೊಲೀಸ್ ಪೇದೆ ಚೌಡಪ್ಪ.
2021 ಪ್ರಸ್ತುತ ಸಾಲು ಬೀಕರತೆಯನ್ನು ತಂದೊಡ್ಡಿದೆ, ಅತೀ ಸೂಕ್ಷ್ಮತೆಯ ಆತಂಕ ಪ್ರತಿ ಎದೆಮಾನಸಗಳಲ್ಲಿ ಮಡುಗಟ್ಟಿದೆ, ಸಾಕಷ್ಟು ವ್ಯವಸ್ಥೆಗಳು ಪೂರಕವಾಗಿದ್ದರು ಜೀವಭಯದ ಕಾವು ನೆತ್ತಿಗೇರಿದೆ, ಇಂತಹ ಭಯಬೀತದ ನಡುವೆ “ಮೆಗ್ಗಾನ್ ಔಟ್ ಪೋಸ್ಟ್ ಪೊಲೀಸ್ ಠಾಣೆ” ಯಲ್ಲಿ ಯಾವುದೇ ಭಯಗಳಿಲ್ಲದೆ ಕೋರೊನಾ ವೈರಸ್ ಆಕ್ರಮಣಕಾರಿಯ ವಿರುದ್ದ ಎದೆಗೊಟ್ಟಿ ಚೌಡಪ್ಪನವರು ನಿಂದಿದ್ದಾರೆ ಎಂದರೆ ತಪ್ಪಾಗಲಾರದು, ಇಲ್ಲಿಗೆ 650 ಕೋರೊನಾ ಪೀಡಿತ ಶವಗಳ ಪರಿಚಯದ ವರದಿ, ಅದರ ಸುತ್ತವೇ ಇರಬೇಕಾದ ಕರ್ತವ್ಯ, ಮೂರು ಲೇಹರ್ ಪಿಪಿಇ. ಪ್ಯಾಕಿಂಗ್ ಆದ ತರುವಾಯ ಆ ಶವದ ಸಂಬಂಧಿಕರಿಗೆ ಒಪ್ಪಿಸುವ ತನಕ ಚೌಡಪ್ಪನವರು ಎಲ್ಲಿಯೂ ಅಲುಗಾಡದೇ ಇರುವ ಆಗಿಲ್ಲ.
ಮೆಗ್ಗಾನ್ ಮಾರ್ಚರಿಯ ಬಾಗಿಲ ಮುಂದಡಿಯೇ ನಿಂದು ಶವಗಳ ಲೆಕ್ಕಚಾರ ಹಾಕಿಕೊಂಡೇ ದೂರದಲ್ಲಿ ಅಳು-ಆಕ್ರಂದನಗಳ ಆಲಿಸಬೇಕಾದ ಕರ್ತವ್ಯ ನಿಜಕ್ಕೂ ಮೆಚ್ಚುವಂತಹದ್ದೆ ಆಗಿದೆ, ಕೆಲ ಸಂಬಂಧಿಕರಂತೂ ತಮ್ಮವರ ಶವಗಳನ್ನು ನೋಡುವುದಕ್ಕೂ ಹಿಂಜರಿದು ಬಿಡುವ ಭಯ ಬೀಕರತೆಯಲ್ಲಿ ಸಾವಧಾನಿಸಿ ಅವರ ನೋವು-ಬಿಸಿಗಂಬನಿಗಳ ನಡುವೆ ಕೊನೆ ಭಾರಿ ನಿಮ್ಮವರ ಮುಖ ದರ್ಶಿಸಿ ಶವದ ಅಂತ್ಯಕ್ರಿಯೇಗೆ ಅಣತಿ ನೀಡಿರೆಂದು ಅವಲತ್ತುಕೊಳ್ಳುವ ಸಾಮಾನ್ಯಪೇದೆ ಚೌಡಪ್ಪನವರಿಗೂ ಕುಟುಂಬವಿದೆ, ಅಂತಕರುಣೆಗಳಿವೆ, ಅಲ್ಲೊಂದು ತನ್ನದೇ ಆರುತಿಂಗಳ ಹಸುಗೂಸು ಮನೆಯಲ್ಲಿ ಕಿಲ-ಕಿಲನೇ ಕಲರವವಿಟ್ಟಿದೆ ಬಾಚಿ ತಬ್ಬಿ ಮುತ್ತು ನೀಡುವ ಪಿತೃ ವಾತ್ಸಲ್ಯಕ್ಕೂ ಈ ಕರ್ತವ್ಯ ಕಡಿವಾಣವಾಕಿದೆ.
ಪ್ರತಿ ಶವಗಳ ಪರೀಶಿಲನೆ, ವರದಿ, ಮಾಹಿತಿಗಳನ್ನು ಬರೆದು ದೊಡ್ಡಪೇಟೆ ಪೊಲೀಸ್ ಠಾಣೆಗೆ ದಿನನಿತ್ಯ ಕಳುಹಿಸಬೇಕು ದಿನದ ನೇಸರ ಮುಗಿಲಲ್ಲಿ ಮೂಡುವ ಹೊತ್ತಿನಿಂದ ಹಿಡಿದು ರಾತ್ರಿ 10.30 ರವರೆಗೂ ಒಮ್ಮೊಮ್ಮೆ ಮೆಗ್ಗಾನ್ ಮಾರ್ಚರಿಯಲ್ಲಿ ಕಾವಲುಪಡೆಯ ವಾರಿಯಾರ್ ಆಗಿ ನಿಲ್ಲಬೇಕಾದ ಪ್ರಸಂಗಗಳು ಇದ್ದೇ ಇರುತ್ತದೆ ಎನ್ನುತ್ತಾರೆ ಚೌಡಪ್ಪನವರು, ಇನ್ನೂ ಕರ್ತವ್ಯ ಮುಗಿಸಿ ಮನೆಗೆ ಹೋದರೂ ದೂರದಿ ತನ್ನವರನ್ನ ಮಾತಾಡಿಸಿ ನಿದುರೆಗೆ ಜಾರುವ ಮುನ್ನದಿ ಭಾವನೆಗಳಿಗೆ ಗಂಟು ಕಟ್ಟಿ ಕರ್ತವ್ಯದ ಕಡೆ ಚಿತ್ತವಿಡುವ ಪೊಲೀಸ್ ವಲಯಕ್ಕೆ ಕೃತಜ್ಞತೆಗಳನ್ನು ನಾಗರೀಕ ವಲಯ ಸಲ್ಲಿಸಬೇಕಾಗುತ್ತದೆ, ಎಲ್ಲೋ ಒಂದೆರೆಡು ಕಡೆ ನಡೆವ ಘಟಿತ ಘಟನೆಗಳನ್ನು ವೈರಲ್ ಮಾಡುವುವನ್ನು ನಂಬಿ ಪೊಲೀಸರ ಭಾವನಾತ್ಮಕತೆಗೂ ಮಸಿ ಬಳಿವ ಮಾನಸೀಕತೆಗಳು ಎಂದಿಗೂ ಇರಬಾರದು.
ಪೊಲೀಸ್ ಪೇದೆ ಚೌಡಪ್ಪನವರಿಗೆ ಪತ್ರಿಕೆ ಪ್ರಶ್ನಿಸುವಾಗ ಅವರಲ್ಲಿ ಸ್ವಲ್ಪವೂ ಧೃತಿಗೆಟ್ಟ ಮಾತುಗಳಿರಲಿಲ್ಲ, 2020ರಲ್ಲಿ 200 ಕೋವಿಡ್ ಪೀಡಿತ ಶವಗಳು, 2021ರ ಈ ಹೊತ್ತಿನಲ್ಲೂ 650 ಶವಗಳ ವರದಿ ಬರೆದು ಅದರೊಂದಿಗೆ ಭಯಮುಕ್ತ ಕರ್ತವ್ಯ ನಿಭಾಯಿಸಿದ ಚೌಡಪ್ಪನವರು “ಪೊಲೀಸ್ ಸಾಹಸಿ” ಯಾಗಿದ್ದಾರೆ.
ಇಂತಿವ ಮೆಗ್ಗಾನ್ ಮಾರ್ಚರಿನಲ್ಲಿ ತಮ್ಮವರ ಶವಗಳೇ ಬೇಡವೆಂದ ಒಂದಿಷ್ಟು ಮಂದಿಗಳಿಗೆ ಬುದ್ದಿ ಹೇಳಿ ಕರೆಯಿಸಿ ಶವಗಳನ್ನು ಒಪ್ಪಿಸಿರುವ ಇವರು ಸರಿಸುಮಾರು 12 ಕೋವಿಡ್ ಪೀಡಿತ ಶವಗಳನ್ನು ಮಾರ್ಚರಿ ಸಿಬ್ಬಂದಿಯೊಂದಿಗೆ ಸೇರಿ ತಮ್ಮದೇ ವೆಚ್ಚದಲ್ಲಿ ಅಂತ್ಯಕ್ರಿಯೇಗೆ ಕಳುಹಿಸಿ ಮಾನವೀಯತೆ ಮೆರೆದಿದ್ದಾರೆ.
ಪಾಸಿಟಿವ್ ಆಗಿದೆ ಎಂದು ಚಿಕಿತ್ಸಗೆ ದಾಖಲಿಸುವ ಅದೆಷ್ಟೋ ಸಂಬಂಧಿಕರು ತಮ್ಮ ಪ್ರಾಣವನ್ನಷ್ಟೆ ಉಳಿಸಿಕೊಳ್ಳೋಣ ಎನ್ನುವ ಜಿಜ್ಞಾಸೆ, ಭಾವನಾತ್ಮಕತೆಗೆ ಗೋರಿ ಕಟ್ಟಿಕೊಳ್ಳುವ ಅಮಾನವೀಯ ಆತಂಕಗಳ ನಡುವೆ ಇಂತಹ ಸಾಮಾನ್ಯ ಪೊಲೀಸ್ ಪೇದೆ ಚೌಡಪ್ಪನಂತಹವರು ಮಾನವೀಯತೆ ಬಿತ್ತಲು ಇದ್ದೇ ಇರುತ್ತಾರೆ ಎನ್ನುವುದನ್ನು ಇಲ್ಲಿ ಸಾಕ್ಷೀಕರಿಸಬಹುದಾಗಿದೆ.
ಇಲ್ಲೊಂದು ಗಟ್ಟಿತನ, ಆತ್ಮದೃಡತೆಗಳ ಹೊತ್ತು ನೂರಾರು ಜನಜೀವನಗಳ ಸಂಕಟಗಳ ನಡುವೆ ಕರ್ತವ್ಯದ ಜೊತೆ ಸಾಂಗತ್ಯ ಬೆಳೆಸಿಕೊಂಡ ಪೊಲೀಸ್ ಪೇದೆ ಚೌಡಪ್ಪನವರು ಇಲ್ಲಿಯವರೆಗೂ ಎಂದಿಗೂ ದುರ್ಬಲಗೊಳ್ಳಲಿಲ್ಲ, ಹುಷಾರಿಲ್ಲದೆ ಬಳಲಲಿಲ್ಲ, ಸೊರಗಿ ನಿಂದವರಲ್ಲ, ಸದಾ ಉತ್ಸಾಹಿಯಾಗಿ ಶಿವಮೊಗ್ಗದ ಪೊಲೀಸ್ ವಲಯಕ್ಕೆ ಹೆಮ್ಮೆಯ ಗರಿ ಮುಡಿಸಿದ್ದಾರೆ, ಇಂತಿವರಿಗೆ ಉನ್ನತಮಟ್ಟದ ಪೊಲೀಸ್ ಅಧಿಕಾರಿಗಳು ಆಗಾಗ್ಗೆ ವಿಚಾರಿಸುತ್ತಿದ್ದಾರೆ, ಜಾಗೃತೆಯಿಂದಿರಲು ತಿಳಿಸುತ್ತಿದ್ದಾರೆ, ಎನ್ನುವ ಮಾತು ಕೂಡ ಹೇಳುವುದಕ್ಕೆ ಚೌಡಪ್ಪನವರು ಮರೆಯುವುದಿಲ್ಲ.
ಮಾರ್ಚರಿಯಲ್ಲಿ, ಕೋವಿಡ್ 19 ಆಸ್ಪತ್ರೆ ಹಾಗೂ ಸ್ಮಶಾನದ ಸ್ಥಳಗಳಲ್ಲಿ ಕರ್ತವ್ಯ ನಿರ್ವಹಿಸುವ ಪೊಲೀಸ್ ಸಿಬ್ಬಂದಿಗೆ ಮಾಸ್ಕ್ ಹೆಡ್ ಗ್ಲೇರ್, ಗ್ಲೌಸ್ ಹಾಗೂ ಪಿಪಿಇ * ಕಿಟ್ ನಿಡಿದ್ದರು ಕೂಡ ಅನಾಹುತಗಳನ್ನೇ ಸೃಷ್ಠಿಸುತ್ತಿರುವ ಕೋವಿಡ್ ಹರಡುವಿಕೆಗೆ ಎದೆಯೊಡ್ಡಿ ನಿಲ್ಲಲು ಎದೆಬಡಿತಗಳು ತಲ್ಲಣಗೊಳ್ಳದಂತೆ ಗಟ್ಟಿತನ ಬೆಸೆದುಕೊಳ್ಳಬೇಕಲ್ಲವೇ..? ಅದು ಪೊಲೀಸ್ ಪೇದೆ ಚೌಡಪ್ಪನವರಿಗಿದೆ ಎನ್ನುವುದನ್ನು ಅವರ ಕರ್ತವ್ಯವೇ ಸಾಬೀತುಪಡಿಸುತ್ತದೆ.
ಇನ್ನೂ ಪೊಲೀಸ್ ಠಾಣೆಗಳು ಹಾಗೂ ಆಸ್ಪತ್ರೆಗಳು ಕೊರೊನಾ ವೈರಸ್ ಹರಡುವಿಕೆಯ ಕೇಂದ್ರಬಿಂದುವಾಗುತ್ತಿರುವ ಹಿನ್ನಲೆಯಲ್ಲಿ ಅದನ್ನು ತಡೆಗಟ್ಟಲು. ಔಷಧಗಳನ್ನು ಸಿಂಪಡಿಸಿ ಕರ್ತವ್ಯ ನಿರ್ವಹಿಸುವ ಅಧಿಕಾರಿ ಮತ್ತು ಸಿಬ್ಬಂದಿಗಳು ಮುಂಜಾಗ್ರತೆಯನ್ನು ವಹಿಸಲು ಎಲ್ಲಾ ರೀತಿಯ ಕ್ರಮಕೈಗೊಂಡಿದ್ದರು ಇಂದು ರಾಜ್ಯದಲ್ಲಿ ಕರ್ತವ್ಯ ನಿರತ ಪೊಲೀಸರು ಹಾಗೂ ಅವರ ಕುಟುಂಬದ ವಲಯದಲ್ಲೂ ಸಾವಿನ ಲೆಕ್ಕಾಚಾರಗಳು ತಪ್ಪಿಲ್ಲ, ಒಂದೆಡೆ ಕತ್ಯವ್ಯ ಇನ್ನೊಂದೆಡೆ ಒತ್ತಡ. ಸತ್ತು ಹೋಗುತ್ತಿರುವ ಭಾವಗಳು ಚಿಮುಣಿ ಬುಡ್ಡಿಯ ಬುಡದ ಕತ್ತಲಂತಾಗಿದೆ.
ರಕ್ಷಣೆಗೆ ನಿಂದ ಖಾಕಿಪಡೆಗಳೇ..
ಆರೋಗ್ಯದ ಕಡೆ ಚಿತ್ತವಿರಲಿ,
ಭಾವಗಳ ಬುತ್ತಿ ಸವಿವ ಕಾಲ ಸಾಮಿಪ್ಯಸುತ್ತಿದೆ,
ತಮ್ಮವರ ಎದೆಗಪ್ಪುವ ಸಾಂಗತ್ಯವಿರಲಿ,
ಕೋರೊನಾ ಗೆದ್ದ ದಿನಮಾನದಿ
ದಿಟ್ಟ ಸದ್ದಿನ ಖಾಕಿ ಹೆಜ್ಜೆಗಳಿಗೆ
ನಾಗರೀಕ ಎದೆ-ನಮನವಿರುತ್ತದೆ,
ಚಿತ್ತವಿರಲಿ, ಚಿತೆಗಳು ಸುಡು ಕಾವಿಡುತ್ತಿದೆ
ಮನುಕುಲವು ಉಳಿವಿಗಾಗಿ ತಲ್ಲಣಿಸುತ್ತಿದೆ,
ಕೋರೊನಾ ಬೀಕರತೆಗಳ ಮೆಟ್ಟಿ ನಿಲ್ಲೋಣ,
ನವ್ಯ ಸಮಾಜದ ಮೈಲಿಗಲ್ಲಿಗೆ……
ಮಾನವೀಯತೆಯ ಬರೆಯೋಣ,
ರಕ್ಷಣೆಗೆ ನಿಂದ ಖಾಕಿಪಡೆಗೆ ಕೃತಜ್ಞತೆ ಸಲ್ಲಿಸೋಣ.
ಎಂದು ತುಸು ಸಾಲುಗಳಲ್ಲಿ ಸಮಸ್ತ ವಲಯಕ್ಕೆ ಕೃತಜ್ಞತೆಯನ್ನು ವಿನಮ್ರತೆಯಿಂದ ಲಗತ್ತಿಸಿ
ಚೌಡಪ್ಪನವರ ಪೊಲೀಸ್ ಕರ್ತವ್ಯ ಬಲಿದಾನಕ್ಕೆ ಸಾಮಿಪ್ಯಸುವಂತಿದ್ದರೂ ಎಂದಿಗೂ ಧೃತಿಗೆಡದೆ, ಆತ್ಮಬಲದಿ ನಿಂದ ಗಟ್ಟಿತನ ಕೂಡ ಪ್ರಶಂಸನೀಯವಾಗಿದೆ, ಇಂತಹ ಮನಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯದ ಪೊಲೀಸ್ ಸಿಬ್ಬಂದಿಗಳಿಗೂ ನಾಗರೀಕ ನಮನಗಳು ಸಲ್ಲಿಸುವುದು ಪ್ರತಿ ವಾಸಿಗಳ ಆಧ್ಯ ಕರ್ತವ್ಯ ಎಂದು ಹೇಳಬಯಸುವೆ.
ಒಟ್ಟಿನಲ್ಲಿ ಮೊದಲನೆ ಅಲೆಯಲ್ಲಿ ಶಿವಮೊಗ್ಗ ಸೇರಿದಂತೆ ಹೊರಜಿಲ್ಲೆಯವರು ಸ್ಥಳೀಯ ಮೆಗ್ಗಾನ್ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ವರದಿಯನುಸಾರದಂತೆ 200 ಕೋವಿಡ್ ಪಾಸಿಟಿವ್ ನಿಂದ ಮೃತಪಟ್ಟ ಶವಗಳ ವರದಿಗೆ ನಿಂದು, ಪ್ರಸ್ತುತ ಸಾಲಿನಲ್ಲಿ ಎರಡನೇ ಅಲೆಗೆ ಸಿಲುಕಿ ಮೃತಪಟ್ಟ 650 ಶವಗಳ ವರದಿ,ಪರೀಶೀಲನೆ,ಮೃತದೇಹಗಳ ಅವರುಗಳ ಸಂಬಂಧಿಕರಿಗೆ ಒಪ್ಪಿಸುವಿಕೆಯ ಸುತ್ತವೇ ಕರ್ತವ್ಯಕ್ಕೆ ಅಣಿಯಾದ ಚೌಡಪ್ಪನವರಿಗೆ ಎಂದಿಗೂ ಈ ಕರ್ತವ್ಯವೇ ಬೇಡವೆನಿಸಲಿಲ್ಲ, ದೃತಿಗೆಡಲಿಲ್ಲ, ಬೇಸರದತ್ತ ಚಿತ್ತವರಿಸಲಿಲ್ಲ, ಕತ್ಯರ್ವದಿಂದ ಸಕಾರಣಗಳೊಡ್ಡಿ ನುಣುಚಿಕೊಳ್ಳಲಿಲ್ಲ.
ಸೊರಗಿ ಬಿಸಿಗಂಬಿನಿಗಳಿಲ್ಲದೆ ಬತ್ತಿ ಹೋದ ಕೋವಿಡ್ ಪಾಸಿಟಿವ್ ನಿಂದ ಮೃತಪಟ್ಟ ನಾಗರೀಕ ಕುಟುಂಬಗಳೊಂದಿಗೆ ಕೊಂಡಿಯಂತೆ ಬೆಸೆದುಕೊಂಡ ಪೊಲೀಸ್ ಪೇದೆ ಚೌಡಪ್ಪನವರ ಮನಸ್ಥಿತಿ ಬೆರಳಣಿಕಯಷ್ಟೆ ಮಂದಿಗಳಿಗಿರುತ್ತದೆ ಎಂದು ಉವಾಚಿಸುತ್ತಾ ಪೊಲೀಸ್ ಪೇದೆ ಚೌಡಪ್ಪನವರಿಗೆ ಅಭಿನಂದಿಸುತ್ತೇನೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post