ಕಲ್ಪ ಮೀಡಿಯಾ ಹೌಸ್
ಗಾಜಿಯಾಬಾದ್: ಕೊರೋನಾ ವೈರಸ್, ಬ್ಲಾಕ್, ವೈಟ್ ಫಂಗಸ್’ನಿಂದ ಕಂಗೆಟ್ಟು ಹೋಗಿರುವ ದೇಶವಾಸಿಗಳಿಗೆ ಈಗ ಹೊಸ ಫಂಗಸ್ ಹೊಸ ಆತಂಕ್ಕೆ ಕಾರಣವಾಗಿದೆ.
ಹೌದು… ಬ್ಲಾಕ್, ವೈಟ್ ವೈರಸ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಬೆನ್ನಲ್ಲೇ ದೇಶದಲ್ಲಿ ಯೆಲ್ಲೋ ಫಂಗಸ್ ಹೊಸದಾಗಿ ಪತ್ತೆಯಾಗಿದ್ದು, ಉತ್ತರ ಪ್ರದೇಶದ ಗಾಜಿಯಾಬಾದ್’ನಲ್ಲಿ ಮೊದಲ ಪ್ರಕರಣ ವರದಿಯಾಗಿದೆ.
ಬ್ಲಾಕ್ ಹಾಗೂ ವೈಟ್ ಫಂಗಸ್’ಗಿಂತಲೂ ವಿಭಿನ್ನ ಹಾಗೂ ಹೆಚ್ಚು ಅಪಾಯಕಾರಿಯಾಗಿರುವ ಈ ಎಲ್ಲೋ ಸೋಂಕು ದೇಹದ ವಿವಿಧ ಅಂಗಾಂಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೇಳಲಾಗಿದೆ. ಪ್ರಮುಖವಾಗಿ ಆಂತರಿಕವಾಗಿ ದೇಹದ ಮೇಲೆ ಗಾಯಗಳನ್ನು ಉಂಟು ಮಾಡಿ, ಕೀವು ತುಂಬಿಕೊಳ್ಳಲು ದಾರಿಯಾಗುತ್ತದೆ ಎಂದು ಹೇಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post