ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬ್ರಾಹ್ಮಣರಲ್ಲಿ ವಟುವಿಗೆ ಉಪನಯನ ಅಥವಾ ಮುಂಜಿಯನ್ನು ಮಾಡುವಾಗ ಮುಹೂರ್ತವನ್ನು ನೋಡುವ ಅಗತ್ಯವಿಲ್ಲ, ಗರ್ಭಧಾರಣೆಯಾದ ಸಮಯದಿಂದ ಎಂಟು ವರ್ಷಗಳು ತುಂಬಿದ ಕೂಡಲೇ ಉಪನಯನ ಅಥವಾ ಮುಂಜಿಯನ್ನು ಮಾಡಬಹುದು/ಮಾಡಬೇಕು ಎಂದು ಸೂತ್ರಕಾರರು ಹೇಳಿರುತ್ತಾರೆ.
ಶಾಸ್ತ್ರ ರೀತಿಯಂತೆ, ನಾನಾ ರೀತಿಯಲ್ಲಿ ನಾನಾ ಸ್ಥಳಗಳಲ್ಲಿ, ಆಯಾ ಕ್ಷೇತ್ರದ ಸಂಪ್ರದಾಯದಂತೆ ಮುಂಜಿಯನ್ನು ಮಾಡಬಹುದು/ಮಾಡಬೇಕು, ಆದರೇ ಮುಹೂರ್ತವನ್ನು ನೋಡುವ ಅಗತ್ಯವಿಲ್ಲ ಎನ್ನುವ ಸೂತ್ರಕಾರರ ಸೂಚನೆಯನ್ನು ಗಮನಿಸೋಣ.
ಪದವನ್ನು ಉಪ = ಸಮೀಪ ನಯನ = ಕಣ್ಣು ಕಣ್ಣಿನ ಸಮೀಪ ಎಂದು ಅರ್ಥೈಸಬಹುದು. ಕಣ್ಣಿನ ಸಮೀಪ ಎಂದರೇನು? ಈ ಸಮಯದ ಅಥವಾ ಮುಹೂರ್ತದ ಸೂಚನೆಯನ್ನು ಸೂತ್ರಕಾರರು ವಟುವಿನಲ್ಲಾಗುವ ದೇಹದ ಬದಲಾವಣೆಯನ್ನು ಅನುಸರಿಸಿ ಮಾಡಿರುತ್ತಾರೆ.
ಗರ್ಭಧಾರಣೆಯಾದ ಸಮಯದಿಂದ ಎಂಟು ವರ್ಷಗಳು ತುಂಬಿದ ಕೂಡಲೇ ವಟುವಿನ ದೇಹದಲ್ಲಿ ಮೊದಲ ವೀರ್ಯವು (ರೇತಸ್)ಉತ್ಪತ್ತಿಯಾಗುತ್ತದೆ. ಈ ಮೊದಲ ವೀರ್ಯವು ಪ್ರಕೃತಿಯ ನಿಯಮದಂತೆ ಊರ್ಧ್ವಮುಖವಾಗಿ ಚಾಕ್ಷುಷ ನರದ(Optic Nerve) ಮೂಲಕ ಹರಿದು ಮೆದುಳನ್ನು ಸೇರಿ ಅಲ್ಲಿ ಮೇಧಾಜನನಕ್ಕೆ ಕಾರಣವಾಗುತ್ತದೆ.
ಸಾಮಾನ್ಯವಾಗಿ ಯಜ್ಞೋಪವೀತ ಧಾರಣೆಯನ್ನು ಮಾಡುವ ಸಮಯವನ್ನು ಉಪನಯನದ ಮುಹೂರ್ತವೆಂಬ ತಪ್ಪು ತಿಳುವಳಿಕೆಯಿರುತ್ತದೆ. ಈ ಮೊದಲ ವೀರ್ಯವು (ರೇತಸ್ಸು) ಚಾಕ್ಷುಷ ನರವನ್ನು ತಲುಪಲು ಸುಮಾರು 7(ಏಳು) ಅಥವಾ 36(ಮೂವತ್ತಾರು) ದಿನಗಳ ಅವಧಿಯು ಬೇಕಾಗುತ್ತದೆ. ಈ ಮೊದಲ ವೀರ್ಯವು (ರೇತಸ್ಸು) ಚಾಕ್ಷುಷ ನರವನ್ನು ತಲುಪಿ, ಆ ನರದಲ್ಲಿ ಸುಮಾರು 36(ಮೂವತ್ತಾರು) ದಿನಗಳ ಅವಧಿಯವರೆಗೂ ಇರುತ್ತದೆ.
ಚಾಕ್ಷುಷ ನರದಲ್ಲಿ ವೀರ್ಯದ(ರೇತಸ್ಸು) ಈ ರೀತಿಯ ಇರುವಿಕೆಯನ್ನು ಉಪನಯನ ಎಂದು ಸೂತ್ರಕಾರರು ಹೇಳಿರುತ್ತಾರೆ. (ಬೌಧಯನ ಕಲ್ಪ ಅಥವಾ ಬೃಹದ್ವಾಸಿಷ್ಠ)ಆ ವೀರ್ಯವು (ರೇತಸ್ಸು)ಮೆದುಳನ್ನು ತಲುಪಲು ಬೇಕಾದ ಶಕ್ತಿಯನ್ನು ಸೂರ್ಯನ ಕಿರಣದಿಂದ ಪಡೆದು ಅತಿವೇಗವಾಗಿ ಮೆದುಳನ್ನು ತಲಿಪಿದ ಕೂಡಲೆ ಮೇಧಾಜನವಾಗುತ್ತದೆ. ಸೂರ್ಯೋ ನಃ ಎಂಬ ಮಂತ್ರವನ್ನು ಪಠಣ ಮಾಡುತ್ತ ಸೂರ್ಯನ ವೀಕ್ಷಣೆಯನ್ನು ಮಾಡುವ ಈ ಸಮಯವೇ ಉಪನಯನದ ಮುಹೂರ್ತವು.
ಹಾಗಾಗಿ ವೀಕ್ಷಣೆಯ ನಂತರ ಮಾಡುವ ಮೇಧಾಜನನವೆಂಬ ಸಂಸ್ಕಾರವೂ ಕೂಡ ಉಪನಯನದ ಸಂಸ್ಕಾರದ ಅತ್ಯಂತ ಪ್ರಮುಖವಾದ ಒಂದು ಅಂಗವಾಗಿರುತ್ತದೆ. ಉಪನಯನ/ಮೇಧಾಜನನ ಆದಕೂಡಲೇ ವಟುವಿನ ಹಾವಭಾವ, ನಡವಳಿಕೆಯು ಬದಲಗುವುದು ಎಲ್ಲರಿಗೂ ಗಮನಕ್ಕೆ ಬಂದಿರುವ ವಿಷಯವೇ.
ನಾಳೆ: ಉಪನಯನ ವಿಚಾರ: ಕಾಲಾಕಾಲ ನಿರ್ಣಯ ಮತ್ತು ಸಾಧ್ಯಾಸಾಧ್ಯ ನಿರ್ಣಯ
Get in Touch With Us info@kalpa.news Whatsapp: 9481252093







Discussion about this post