ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಮಹಾನಗರದ 10 ಗೋಡೆಗಳ ಮೇಲೆ ಪ್ರಸಿದ್ಧ ಕಲಾವಿದರಿಂದ ಚಿತ್ತಾರ ಮೂಡಿಸುವ ಕೆಲಸ ಪೂರ್ಣಗೊಂಡಿದೆ.
ಬಿಎಂಆರ್’ಸಿಎಲ್ #BMRCL ಹಾಗೂ ಅನ್ಬಾಕ್ಸಿಂಗ್ ಬಿಎಲ್‌ಆರ್ ಸಹಯೋಗದೊಂದಿಗೆ ನಗರದ ಪ್ರಮುಖ 10 ಗೋಡೆಗಳ ಮೇಲೆ ಚಿತ್ರ ಬಿಡಿಸುವ ಗೋಡೆ ಬೆಂಗಳೂರು #Bengaluru ಉಪಕ್ರಮವನ್ನು ಈ ಹಿಂದೆ ಘೋಷಿಸಲಾಗಿತ್ತು. ಇದೀಗ ಚಿತ್ರಬಿಡುಸವ ಕೆಲಸ ಪೂರ್ಣಗೊಂಡಿದ್ದು, ಬೆಂಗಳೂರಿನ ಈ 10 ಗೋಡೆಗಳು ಸುಂದರವಾಗಿ ಮೂಡಿ ಬಂದಿವೆ.
ಎಲ್ಲೆಲ್ಲಿ ಯಾವ್ಯಾವ ಚಿತ್ರ?
ವಿಶ್ವೇಶ್ವರಯ್ಯ ಸೆಂಟ್ರಲ್ ಕಾಲೇಜ್ ಮೆಟ್ರೋ ಸ್ಟೇಷನ್ #MetroStation ಗೋಡೆಯ ಮೇಲೆ, ಸ್ವಲ್ಪ ಅಡ್ಜೆಸ್ಟ್ ಮಾಡ್ಕೊಳಿ ಎಂಬ ಶೀರ್ಷಿಕೆಯಡಿ ಬೆಂಗಳೂರಿನ ಜನದಟ್ಟಣೆಯ ಬಗ್ಗೆ ಕಲಾವಿದರಾದ ಅನಿಲ್ ಕುಮಾರ್ ಸುಂದರವಾಗಿ ಚಿತ್ರ ಬಿಡಿಸಿದ್ದಾರೆ.
ಚರ್ಚ್ ಸ್ಟ್ರೀಟ್’ನಲ್ಲಿರುವ ಗೋಡೆ ಒಂದರ ಮೇಲೆ, ಬಿಡುವಿನ ಸಮಯದಲ್ಲಿ ನಿಮ್ಮೊಂದಿಗೆ ಕಳೆಯಿರಿ ಎಂಬ ಸಂದೇಶ ಸಾರುವ ಚಿತ್ರವನ್ನು ಮನಸೋರೆಗೊಳ್ಳುವಂತೆ ಕಲಾವಿದರಾದ ಅನ್ಪು ವರ್ಕಿ ಅವರು ತಮ್ಮ ಕೈಚಳಕ ತೋರಿಸಿದ್ದಾರೆ.
ಬೆಂಗಳೂರಿನ ವಲಸೆ ಬರುವ ಸಾವಿರಾರು ಜನ ಇಲ್ಲಿ ಬದುಕಲು ನಡೆಸುವ ಜಿದ್ದಾಜಿದ್ದಿನ ಕಷ್ಟವನ್ನು ವಿವರಿಸುವಂತೆ ಒಬ್ಬ ವ್ಯಕ್ತಿ ಸಿಲೆಂಡರ್ ಮೇಲೆ ಮಲಗಿರುವ ಚಿತ್ರದ ಮೂಲಕ ಹೇಳಲಾಗಿದೆ.
ಜೆಪಿ ನಗರದ #JPNagar ಮೆಟ್ರೋ ನಿಲ್ದಾಣದಲ್ಲಿ ವಿಂಡೋಸ್ ಟು ದಿ ಸೋಲ್ ಶೀರ್ಷಿಕೆಯಲ್ಲಿ ಚಿತ್ರ ಬಿಡಿಸಲಾಗಿದ್ದು, ಮಹಿಳೆಯೊಬ್ಬರ ಕಣ್ಣುಗಳ ಚಿತ್ರ ಇದಾಗಿದೆ.
ಜಯನಗರ ಮೆಟ್ರೋ ನಿಲ್ದಾಣದ ಗೋಡೆ ಮೇಲೆ ಈ ಹಿಂದೆ ಇದ್ದ ಬೆಂಗಳೂರಿನ ನೈಜತೆಯ ಬಗ್ಗೆ ಚಿತ್ರಿಸಲಾಗಿದೆ. ಸ್ಯಾಂಡಲ್ ಸೋಪ್ ಫ್ಯಾಕ್ಟರಿ ಮೆಟ್ರೋ ನಿಲ್ದಾಣದಲ್ಲಿ ಹಳೆಯ ವಿಂಟೇಜ್ ಪೋಸ್ಟರ್’ಗಳು ಮತ್ತು ಮ್ಯಾಚ್ ಬಾಕ್ಸ್ ಚಿತ್ರಗಳಿಂದ ಪ್ರೇರಿತವಾದ ಕಲಾಕೃತಿಯನ್ನು ಬಿಡಿಸಲಾಗಿದೆ.
ಸೈನ್ಸ್ ಗ್ಯಾಲರಿ ರಸ್ತೆಯ ಗೋಡೆಗಳ ಮೇಲೆ ರಂಗೋಲಿ ಚಿತ್ತಾರ, ಯಶವಂತಪುರ ಮೆಟ್ರೋಸ್ಟೇಷನ್’ನಲ್ಲಿ ದೇಹದ ಭಾಗಗಳ ಕುರಿತು ವಿವರಿಸುವ ಚಿತ್ರ ಬಿಡಿಸಲಾಗಿದೆ. ಹಲಸೂರು ಮೆಟ್ರೋ ನಿಲ್ದಾಣದಲ್ಲಿ ಮಹಿಳೆಯೊಬ್ಬರು ತಳ್ಳೋಗಾಡಿ ತಳ್ಳುವ ಸಾಗುವ ಚಿತ್ರವನ್ನು ಬಿಡಿಸಲಾಗಿದೆ.
ಒಟ್ಟಾರೆ 10 ಗೋಡೆಗಳ ಮೇಲೆ ವಿವಿಧ ವಿಷಯಗಳನ್ನಾಧರಿಸಿ, ಬೃಹತ್ ಗಾತ್ರದಲ್ಲಿ ಚಿತ್ರ ಬಿಡಿಸಿದ್ದು, ಈ ಚಿತ್ರಗಳು ನಗರದ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿವೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post