ನವದೆಹಲಿ: ದೇಶದಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ ಮಾತಿನ ಎಮರ್ಜೆನ್ಸಿ ಹೇರಿ, ಪ್ರಜಾಪ್ರಭುತ್ವವನ್ನು ಸಂವಿಧಾನಾತ್ಮಕವಾಗಿ ಸರ್ವಾಧಿಕಾರವನ್ನಾಗಿಸಿದ್ದರು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಕಿಡಿ ಕಾರಿದ್ದಾರೆ.
ದೇಶದಲ್ಲಿ ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿ ಇಂದಿಗೆ 43 ವರ್ಷಗಳಾದ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಅವರು, 60 ಹಾಗೂ 70ನೆಯ ದಶಕದಲ್ಲಿ ಜಿಡಿಪಿ ಬೆಳವಣಿಗೆ ಸಾಮಾನ್ಯವಾಗಿ 3.5ರಷ್ಟಿತ್ತು. 1974ರಲ್ಲಿ ಹಣದುಬ್ಬರ ದೇಶವನ್ನು ಕಾಡಿ, ಶೇ.20.2 ತಲುಪಲು ಪ್ರಯಾಸಪಟ್ಟು, 1975ರಲ್ಲಿ ಶೇ.25.2ರಷ್ಟು ತಲುಪಿತ್ತು ಎಂದಿದ್ದಾರೆ.
The Emergency Revisited – Part-I (3-Part Series) – The Circumstances Leading to the Imposition of Emergency https://t.co/AzG3EgS9RQ
— Arun Jaitley (@arunjaitley) June 24, 2018
ಅಂದಿನ ಸರ್ವಾಧಿಕಾರಿ ನಿರ್ಧಾರದಿಂದಾಗಿ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಕಾಡಿದ್ದು ಮಾತ್ರವಲ್ಲದೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿತ್ತು. ಆರ್ಥಿಕ ಕ್ಷೇತ್ರದಲ್ಲಿ ಹೂಡಿಕೆಗೆ ಬಾರೀ ಹಿನ್ನಡೆಯಾಗಿತ್ತು ಎಂದಿದ್ದಾರೆ.
Also Read: ಸ್ವತಂತ್ರ್ಯ ಭಾರತದಲ್ಲಿ ಜನರ ಸ್ವಾತಂತ್ರ್ಯ ಕಸಿದಿದ್ದ ಸರ್ವಾಧಿಕಾರಿ ಮನಃಸ್ಥಿತಿ
https://kalpa.news/independence-india-is-a-dictators-mood-of-freedom-of-people/
ಸಂವಿಧಾನಾತ್ಮಕವಾಗಿ ದೇಶವಾಸಿಗಲಿಗೆ ನೀಡಲಾಗಿರುವ ಕಲಂ 14,19,21 ಹಾಗೂ 22ರ ಅಡಿಯಲ್ಲಿ ಬರುವ ಮೂಲಭೂತ ಹಕ್ಕುಗಳ ಜೂನ್ 25-26ರಂದು ಅಮಾನತುಗೊಳಿಸಿ, ದೇಶದ ಜನರ ಮೇಲೆ ದಬ್ಬಾಳಿಕೆ ಮಾಡಲಾಗಿತ್ತು ಎಂದಿದ್ದಾರೆ.
The June 25-26 emergency proclamation suspended the fundamental rights under Articles 14, 19, 21 and 22 of the Constitution. Every Indian was now devoid of this fundamental right.
— Arun Jaitley (@arunjaitley) June 24, 2018
ಇನ್ನು ಈ ಕುರಿತಂತೆ ಅರುಣ್ ಜೇಟ್ಲಿ ಬರೆದಿರುವ ಲೇಖನವನ್ನು ಇಂಗ್ಲಿಷ್‌ನಲ್ಲಿ ಓದಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
Discussion about this post