No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
  • Advertise With Us
  • Grievances
  • About Us
  • Contact Us
Tuesday, October 13, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಕ್ರೀಡೆ

ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪದಕ ಬೇಟೆ: ಮೀರಾಬಾಯಿ ಚಾನುಗೆ ಬೆಳ್ಳಿ, ಶೂಟಿಂಗ್‌ನಲ್ಲಿ ಕಂಚು

kalpa News by kalpa News
September 23, 2026
in ಕ್ರೀಡೆ
0
Asian Games 2026 Mirabai Chanu Silver India Shooting
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  |  ಐಚಿ-ನಾಗೋಯಾ (ಜಪಾನ್)  |

2026ರ ಏಷ್ಯನ್ ಗೇಮ್ಸ್‌ನಲ್ಲಿ (Asian Games 2026) ಭಾರತೀಯ ಕ್ರೀಡಾಪಟುಗಳ ಪದಕ ಬೇಟೆ ಮುಂದುವರೆದಿದ್ದು, ಬುಧವಾರ ಭಾರತದ ಪಾಲಿಗೆ ಹಲವು ಮಹತ್ವದ ಫಲಿತಾಂಶಗಳು ಬಂದಿದ್ದು, ಸ್ಟಾರ್ ವೇಟ್‌ಲಿಫ್ಟರ್ (Weightlifter) ಮೀರಾಬಾಯಿ ಚಾನು ಮಹಿಳೆಯರ 49 ಕೆಜಿ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದು ಏಷ್ಯನ್ ಗೇಮ್ಸ್‌ನಲ್ಲಿ ತಮ್ಮ ಮೊದಲ ಪದಕ ದಾಖಲಿಸಿದ್ದಾರೆ.

ಇದೇ ವೇಳೆ ಪುರುಷರ ಸ್ಕೀಟ್ ತಂಡವೂ ಕಂಚಿನ ಪದಕ ಗೆದ್ದಿದೆ. ಸಾಫ್ಟ್ ಟೆನಿಸ್‌ನಲ್ಲಿ ಜಯ್ ಮೀನಾ ಐತಿಹಾಸಿಕ ಪದಕ ಖಚಿತಪಡಿಸಿದ್ದಾರೆ.dk shivakumar led karnataka government 100 days celebration

ಮೀರಾಬಾಯಿ ಚಾನುಗೆ ಮೊದಲ ಏಷ್ಯನ್ ಗೇಮ್ಸ್ ಪದಕ

ಮಹಿಳೆಯರ 49 ಕೆಜಿ ವೇಟ್‌ಲಿಫ್ಟಿಂಗ್ ವಿಭಾಗದಲ್ಲಿ ಮೀರಾಬಾಯಿ ಚಾನು ಒಟ್ಟು 198 ಕೆಜಿ ಭಾರ ಎತ್ತಿ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು. ಸ್ನ್ಯಾಚ್‌ನಲ್ಲಿ 87 ಕೆಜಿ ಹಾಗೂ ಕ್ಲೀನ್ ಆ್ಯಂಡ್ ಜರ್ಕ್‌ನಲ್ಲಿ 111 ಕೆಜಿ ಎತ್ತಿದ ಅವರು ಎರಡನೇ ಸ್ಥಾನ ಪಡೆದರು. ಉತ್ತರ ಕೊರಿಯಾದ ರಿ ಸಾಂಗ್-ಗಮ್ ಚಿನ್ನದ ಪದಕ ಗೆದ್ದರು.

ಇದು ಮೀರಾಬಾಯಿ ಚಾನು ಅವರ ಏಷ್ಯನ್ ಗೇಮ್ಸ್ ವೃತ್ತಿಜೀವನದ ಮೊದಲ ಪದಕವಾಗಿದೆ. 2014ರ ಇಂಚಿಯಾನ್ ಏಷ್ಯನ್ ಗೇಮ್ಸ್‌ನಲ್ಲಿ ಅವರು 9ನೇ ಸ್ಥಾನ ಪಡೆದಿದ್ದರು. 2018ರ ಜಕಾರ್ತಾ ಏಷ್ಯನ್ ಗೇಮ್ಸ್‌ನಲ್ಲಿ ಗಾಯದ ಕಾರಣದಿಂದ ಸ್ಪರ್ಧಿಸಲು ಸಾಧ್ಯವಾಗಿರಲಿಲ್ಲ. 2023ರ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲಿ 49 ಕೆಜಿ ವಿಭಾಗದಲ್ಲಿ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದರು. ಇದೀಗ ಐಚಿ-ನಾಗೋಯಾದಲ್ಲಿ ಬೆಳ್ಳಿ ಗೆದ್ದು ಏಷ್ಯನ್ ಗೇಮ್ಸ್ ಪದಕದ ಕೊರತೆಯನ್ನು ನೀಗಿಸಿದ್ದಾರೆ.

ಮೀರಾಬಾಯಿ ಅವರ ಬೆಳ್ಳಿ ಪದಕದೊಂದಿಗೆ ಏಷ್ಯನ್ ಗೇಮ್ಸ್ ವೇಟ್‌ಲಿಫ್ಟಿಂಗ್‌ನಲ್ಲಿ ಭಾರತದ 28 ವರ್ಷಗಳ ಪದಕದ ಕಾಯುವಿಕೆಯೂ ಅಂತ್ಯಗೊಂಡಿದೆ. 1998ರ ಬ್ಯಾಂಕಾಕ್ ಏಷ್ಯನ್ ಗೇಮ್ಸ್‌ನಲ್ಲಿ ಕರ್ಣಂ ಮಲ್ಲೇಶ್ವರಿ ಬೆಳ್ಳಿ ಪದಕ ಗೆದ್ದ ಬಳಿಕ ಭಾರತಕ್ಕೆ ವೇಟ್‌ಲಿಫ್ಟಿಂಗ್‌ನಲ್ಲಿ ಮತ್ತೆ ಪದಕ ದೊರೆತಿದೆ.

Asian Games 2026 : ಶೂಟಿಂಗ್‌ನಲ್ಲಿ ಭಾರತಕ್ಕೆ ಕಂಚಿನ ಪದಕ

ಪುರುಷರ ಸ್ಕೀಟ್ ತಂಡ ಸ್ಪರ್ಧೆಯಲ್ಲಿ ಅನಂತ್‌ಜೀತ್ ಸಿಂಗ್ ನರುಕಾ, ಮೈರಾಜ್ ಅಹ್ಮದ್ ಖಾನ್ ಹಾಗೂ ಭವ್‌ತೇಗ್ ಸಿಂಗ್ ಗಿಲ್ ಅವರನ್ನೊಳಗೊಂಡ ಭಾರತ ತಂಡ ಕಂಚಿನ ಪದಕ ಗೆದ್ದಿದೆ.

ಭಾರತ ಮತ್ತು ಕಜಕಿಸ್ತಾನ ತಂಡಗಳು ತಲಾ 346 ಅಂಕ ಗಳಿಸಿದ ಬಳಿಕ ನಡೆದ ಶೂಟ್‌ಆಫ್‌ನಲ್ಲಿ ಭಾರತ ಮೇಲುಗೈ ಸಾಧಿಸಿ ಮೂರನೇ ಸ್ಥಾನ ಪಡೆದುಕೊಂಡಿತು. ಅನಂತ್‌ಜೀತ್ ಸಿಂಗ್ ನರುಕಾ ವೈಯಕ್ತಿಕ ಸ್ಕೀಟ್ ಫೈನಲ್‌ಗೂ ಅರ್ಹತೆ ಪಡೆದಿದ್ದಾರೆ.

ಇದೇ ದಿನ ಭಾರತದ ಮಹಿಳೆಯರ ಸ್ಕೀಟ್ ತಂಡವೂ ಕಂಚಿನ ಪದಕ ಗೆದ್ದಿದ್ದು, ರೈಜಾ ಧಿಲ್ಲೋನ್, ಮಹೇಶ್ವರಿ ಚೌಹಾಣ್ ಹಾಗೂ ಪರಿನಾಜ್ ಧಲಿವಾಲ್ ತಂಡ ಮೂರನೇ ಸ್ಥಾನ ಪಡೆದಿದೆ.Christ King

ಸಾಫ್ಟ್ ಟೆನಿಸ್‌ನಲ್ಲಿ ಜಯ್ ಮೀನಾ ಇತಿಹಾಸ

ಪುರುಷರ ಸಿಂಗಲ್ಸ್ ಸಾಫ್ಟ್ ಟೆನಿಸ್‌ನಲ್ಲಿ ಜಯ್ ಮೀನಾ ಸೆಮಿಫೈನಲ್ ಪ್ರವೇಶಿಸುವ ಮೂಲಕ ಏಷ್ಯನ್ ಗೇಮ್ಸ್‌ನಲ್ಲಿ ಭಾರತಕ್ಕೆ ಈ ಕ್ರೀಡೆಯ ಮೊದಲ ಪದಕವನ್ನು ಖಚಿತಪಡಿಸಿಕೊಂಡರು.

ಕ್ವಾರ್ಟರ್‌ಫೈನಲ್‌ನಲ್ಲಿ ಫಿಲಿಪೈನ್ಸ್‌ನ ಶೆರ್ವಿನ್ ನುಗಿಟ್ ಅವರನ್ನು 4-3ರಿಂದ ಮಣಿಸಿದ ಜಯ್ ಮೀನಾ ಸೆಮಿಫೈನಲ್‌ಗೆ ಪ್ರವೇಶಿಸಿದರು. ಸೆಮಿಫೈನಲ್‌ನಲ್ಲಿ ಜಪಾನ್‌ನ ಟಕುಯಾ ಕುರೊಸಾಕಾ ವಿರುದ್ಧ ಸೋತ ಬಳಿಕ ಅವರು ಕಂಚಿನ ಪದಕ ಪಡೆದರು. ಇದರಿಂದ ಏಷ್ಯನ್ ಗೇಮ್ಸ್ ಇತಿಹಾಸದಲ್ಲಿ ಸಾಫ್ಟ್ ಟೆನಿಸ್‌ನಲ್ಲಿ ಭಾರತಕ್ಕೆ ಮೊದಲ ಪದಕ ದೊರೆತಂತಾಗಿದೆ.

Also read>> ರೇಣುಕಾಸ್ವಾಮಿ ಕೊಲೆ ಪ್ರಕರಣ | ಹೈಕೋರ್ಟಲ್ಲಿ ದರ್ಶನ್’ಗೆ ಭಾರೀ ಹಿನ್ನಡೆ | ಏನಾಯ್ತು?

ಮನು ಭಾಕರ್‌ಗೆ ನಿರಾಸೆ

ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ವೈಯಕ್ತಿಕ ಫೈನಲ್‌ನಲ್ಲಿ ಭಾರತದ ಒಲಿಂಪಿಕ್ ಪದಕ ವಿಜೇತೆ ಮನು ಭಾಕರ್ ಐದನೇ ಸ್ಥಾನ ಪಡೆದರು. ಅರ್ಹತಾ ಸುತ್ತಿನಲ್ಲಿ 579-20x ಅಂಕಗಳೊಂದಿಗೆ ಮೂರನೇ ಸ್ಥಾನ ಪಡೆದು ಫೈನಲ್ ಪ್ರವೇಶಿಸಿದ್ದ ಮನು, ಅಂತಿಮ ಸುತ್ತಿನಲ್ಲಿ 181.1 ಅಂಕ ಗಳಿಸಿದರು. 18ನೇ ಶಾಟ್ ಬಳಿಕ ಅವರು ಪದಕದ ಸ್ಪರ್ಧೆಯಿಂದ ಹೊರಬಿದ್ದರು.

ಭಾರತದ ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ತಂಡವೂ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿತು. ಮನು ಭಾಕರ್ ಮುಂದಿನ ದಿನಗಳಲ್ಲಿ 25 ಮೀಟರ್ ಪಿಸ್ತೂಲ್ ಸ್ಪರ್ಧೆಯಲ್ಲೂ ಕಣಕ್ಕಿಳಿಯಲಿದ್ದಾರೆ.PES Shivamogga

ರೋಯಿಂಗ್‌ನಲ್ಲಿ ಫೈನಲ್‌ಗೆ ಭಾರತೀಯರು

ರೋಯಿಂಗ್‌ನಲ್ಲೂ ಭಾರತಕ್ಕೆ ಉತ್ತಮ ಫಲಿತಾಂಶ ಸಿಕ್ಕಿದೆ. ಬಲರಾಜ್ ಪನ್ವಾರ್ ಪುರುಷರ ಸಿಂಗಲ್ಸ್ ಸ್ಕಲ್ಸ್ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಅವರು ತಮ್ಮ ಹೀಟ್‌ನಲ್ಲಿ 6 ನಿಮಿಷ 52.84 ಸೆಕೆಂಡ್‌ಗಳಲ್ಲಿ ಮೂರನೇ ಸ್ಥಾನ ಪಡೆದಿದ್ದು, ಒಟ್ಟಾರೆ ನಾಲ್ಕನೇ ಸ್ಥಾನದಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

ಪುರುಷರ ಡಬಲ್ ಸ್ಕಲ್ಸ್‌ನಲ್ಲಿ ಸತ್ನಾಮ್ ಸಿಂಗ್ ಮತ್ತು ಸಲ್ಮಾನ್ ಖಾನ್ ಜೋಡಿ ಕೂಡ ಫೈನಲ್‌ಗೆ ಅರ್ಹತೆ ಪಡೆದಿದೆ. ಹೀಟ್‌ನಲ್ಲಿ ಎರಡನೇ ಸ್ಥಾನ ಪಡೆದು 6 ನಿಮಿಷ 15.63 ಸೆಕೆಂಡ್‌ಗಳ ಸಮಯ ದಾಖಲಿಸಿದೆ.

ಪದಕದತ್ತ ಭಾರತದ ಮುನ್ನಡೆ

ಒಟ್ಟಾರೆ ಬುಧವಾರ ಭಾರತೀಯ ಕ್ರೀಡಾಪಟುಗಳು ವೇಟ್‌ಲಿಫ್ಟಿಂಗ್, ಶೂಟಿಂಗ್ ಹಾಗೂ ಸಾಫ್ಟ್ ಟೆನಿಸ್‌ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದಾರೆ. ಮೀರಾಬಾಯಿ ಚಾನು ಅವರ ಬೆಳ್ಳಿ ಪದಕವು ಭಾರತೀಯ ವೇಟ್‌ಲಿಫ್ಟಿಂಗ್‌ಗೆ 28 ವರ್ಷಗಳ ಬಳಿಕ ಏಷ್ಯನ್ ಗೇಮ್ಸ್ ಪದಕವನ್ನು ತಂದರೆ, ಜಯ್ ಮೀನಾ ಸಾಫ್ಟ್ ಟೆನಿಸ್‌ನಲ್ಲಿ ದೇಶದ ಮೊದಲ ಪದಕದೊಂದಿಗೆ ಇತಿಹಾಸ ನಿರ್ಮಿಸಿದ್ದಾರೆ.

ಮುಂದಿನ ದಿನಗಳಲ್ಲೂ ರೋಯಿಂಗ್, ಶೂಟಿಂಗ್, ವೇಟ್‌ಲಿಫ್ಟಿಂಗ್ ಸೇರಿದಂತೆ ಹಲವು ಕ್ರೀಡೆಗಳಲ್ಲಿ ಭಾರತೀಯ ಕ್ರೀಡಾಪಟುಗಳು ಪದಕದ ನಿರೀಕ್ಷೆಯೊಂದಿಗೆ ಕಣಕ್ಕಿಳಿಯಲಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.newsKalpa News Advertising DisclaimerKalahamsa Infotech private limited

Tags: Asian GamesJapanMirabai ChanuWeightlifterಐಚಿ-ನಾಗೋಯಾ (ಜಪಾನ್)ಮೀರಾಬಾಯಿ ಚಾನು
Share198Tweet124Send
Aniruddha Vasishta S R

Aniruddha Vasishta S R

Editor-in-Chief

Previous Post

ರೇಣುಕಾಸ್ವಾಮಿ ಕೊಲೆ ಪ್ರಕರಣ | ಹೈಕೋರ್ಟಲ್ಲಿ ದರ್ಶನ್’ಗೆ ಭಾರೀ ಹಿನ್ನಡೆ | ಏನಾಯ್ತು?

Next Post

ಶಾರುಖ್ ಖಾನ್‌ ಮತ್ತೆ ಭಾರತದ ಶ್ರೀಮಂತ ನಟ | ಎಷ್ಟು ಅವರ ಒಟ್ಟು ಆಸ್ತಿ?

kalpa News

kalpa News

Next Post
Shah Rukh Khan Richest Indian Actor Total Net Worth

ಶಾರುಖ್ ಖಾನ್‌ ಮತ್ತೆ ಭಾರತದ ಶ್ರೀಮಂತ ನಟ | ಎಷ್ಟು ಅವರ ಒಟ್ಟು ಆಸ್ತಿ?

No Result
View All Result
Stiff fingers Your joints may be sending an early warning
English Articles

Stiff fingers every morning? Your joints may be sending an early warning

by kalpa News
October 12, 2026
0

Kalpa Media House  |  Special Article  | The alarm rings, and you reach out to switch it off. But your...

Read moreDetails
Gudinamana 2026 Classical Music Dance Guru Parampara

Gudi Namana 2026: A Year-Long Musical Tribute to Guru Parampara Across Sacred Spaces

September 29, 2026
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL