ನವದೆಹಲಿ: ದೇಶ ಕಂಡ ಅಪ್ರತಿಮ, ಸರಳ ಸಜ್ಜನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನಿಧನ ಇಡಿಯ ದೇಶವನ್ನು ಶೋಕಸಾಗರದಲ್ಲಿ ಮುಳುಗಿಸಿದ್ದು, ಎಲ್ಲೆಲ್ಲೂ ಸೂತಕದ ಛಾಯೆ ಆವರಿಸಿದೆ.
ವಾಜಪೇಯಿ ಅವರ ಆರೋಗ್ಯ ಗಂಭೀರಗೊಂಡಿದ್ದ ಹಿನ್ನೆಲೆಯಲ್ಲಿ ಇಡಿಯ ದೇಶದಲ್ಲಿ ಜಾತಿ, ಧರ್ಮ, ಭಾಷೆಗಳ ಬೇಧವಿಲ್ಲದೇ ಎಲ್ಲ ಧರ್ಮದವರೂ ಪ್ರಾರ್ಥನೆ ಸಲ್ಲಿಸಿ, ಅಟಲ್ ಜೀ ಗುಣಮುಖರಾಗಲಿ ಎಂದು ಕೋರಿದ್ದರು. ಆದರೆ, ಭಾರತೀಯ ಪ್ರಾರ್ಥನೆ ದೇವರಿಗೆ ತಲುಪಲಿಲ್ಲ ಎನಿಸುತ್ತದೆ. ತಾಯಿ ಭಾರತ ತನ್ನ ಹೆಮ್ಮೆಯ ಪುತ್ರನನ್ನು ತನ್ನ ಮಡಿಲಿಗೆ ಸೇರಿಸಿಕೊಂಡಿದ್ದಾಳೆ.
ದೇಶದಲ್ಲಿ ಗಣ್ಯಾತಿಗಣ್ಯರು ಮಾತ್ರವಲ್ಲದೇ ಸಾಮಾನ್ಯ ಪ್ರಜೆಗಳು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ದುಃಖವನ್ನು ವ್ಯಕ್ತಪಡಿಸುತ್ತಿದ್ದು, ಎಲ್ಲೆಡೆ ವಾಜಪೇಯಿ ಅವರ ಗುಣಗಾನ ಮಾಡಲಾಗುತ್ತಿದೆ.
Discussion about this post