ಬೆಳಗಾವಿ: ಎಸ್‌ಎಸ್‌ಎಲ್’ಸಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಸಾಧನೆ ಮಾಡಿರುವ ಅಥಣಿ ತಾಲೂಕಿನ ಚಿಕ್ಕೋಡ ಗ್ರಾಮದ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಸತೀಶ್ ನಾಯಕ್’ನನ್ನು ಹೃನ್ಮನದಿಂದ ಅಭಿನಂದಿಸಲಾಯಿತು.
ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಯನ್ನು ಸನ್ಮಾನಿಸಿ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ. ನ್ಯಾಮಗೌಡ, ಸತೀಶ್ ನಾಯಕ್ ಹಾಗೂ ನಮ್ಮ ವಿದ್ಯಾರ್ಥಿಗಳೇ ಮುಂದಿನ ದಿನಮಾನಗಳಲ್ಲಿ ರಾಜ್ಯ ಮಾತ್ರವಲ್ಲ ದೇಶವೇ ಮೆಚ್ಚುವಂತೆ ಸಾಧನೆ ಮಾಡಬೇಕು. ಶೈಕ್ಷಣಿಕ ಮಾತ್ರವಲ್ಲ ಕ್ರೀಡೆಯಲ್ಲೂ ಸಹ ಸಾಧನೆ ಮಾಡಿ. ನಿಮ್ಮ ಸಾಧನೆಗಾಗಿ ಸರ್ಕಾರದಿಂದ ಅಗತ್ಯವಿರುವ ಸೌಲಭ್ಯ ತರುವುದು ನಮ್ಮ ಜವಾಬ್ದಾರಿ ಎಂದರು.
















