ಶಿವಮೊಗ್ಗ: ಮೇ 11ರ ಶನಿವಾರದಂದು, ಅಂದರೆ ಅಮ್ಮಂದಿರ ದಿನದ ಮುನ್ನಾದಿನದಂದು ಪವಿತ್ರಾಂಗಣದಲ್ಲಿ ಸಂಜೆ 6 ಗಂಟೆಗೆ ವಿಶೇಷ ಕಾರ್ಯಕ್ರಮ ನಡೆಯಲಿದೆ.
ವಿಜಯಾ ಶ್ರೀಧರ್ ರವರ ಸಮಗ್ರ ಕಥಾಸಂಕಲನವನ್ನು ಖ್ಯಾತ ಕವಯಿತ್ರಿ ಸ.ಉಷಾ ಲೋಕಾರ್ಪಣೆ ಮಾಡಲಿದ್ದಾರೆ.
ಇದೇ ಸಂದರ್ಭದಲ್ಲಿ ಶ್ರೀಧರ್ ನರ್ಸಿಂಗ್ ಹೋಂನ ನೂತನ‘ತಾಯಿ-ಮಗು ಮಾನಸಿಕ ಆರೋಗ್ಯ ಘಟಕ’ದ ಸಾಂಕೇತಿಕ ಉದ್ಘಾಟನೆ ನಡೆಯಲಿದೆ.
ನಂತರ ಅಂದಿನ ವಿಶೇಷ ಕಾರ್ಯಕ್ರಮವಾಗಿ ತಾಯಿ-ಮಗಳು ಜೋಡಿ ಡಾ.ಕೆ.ಎಸ್ ಪವಿತ್ರ ಮತ್ತು ಭೂಮಿ, ‘ಕರುಳು ಬಳ್ಳಿ ‘ ಎಂಬ ತಾಯಿ-ಮಗುವಿನ ಭಾವನೆಗಳ ಕುರಿತ ನೃತ್ಯಪ್ರಸ್ತುತಿಯನ್ನು ಸಹೃದಯರ ಮುಂದಿಡಲಿದ್ದಾರೆ. ಖ್ಯಾತ ಮನೋವೈದ್ಯ ಡಾ.ಕೆ.ಆರ್.ಶ್ರೀಧರ್ ಅಧ್ಯಕ್ಷತೆ ವಹಿಸಲಿದ್ದಾರೆ.
Discussion about this post