No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
  • Advertise With Us
  • Grievances
  • About Us
  • Contact Us
Saturday, October 3, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home Special Articles

ಕೋಕ್ ಬ್ರೇಕ್ ಇನ್ಮುಂದೆ ಮತ್ತಷ್ಟು ಮಜಾ | ಗೂಗಲ್ ಜೆಮಿನಿ ಜೊತೆ ಕೈಜೋಡಿಸಿದ ಕೊಕಾ-ಕೋಲಾ

ಕೋಕಾ ಕೋಲಾ ಹಾಫ್‌ ಟೈಮ್ ಸರ್ಪ್ರೈಸ್" ಮೂಲಕ ಎಐ, ಕಥೆ ಹಾಗೂ ಸಂಗೀತದ ಜುಗಲ್‌ ಬಂದಿ

kalpa News by kalpa News
June 1, 2026
in Special Articles
1
ಕೋಕ್ ಬ್ರೇಕ್ ಇನ್ಮುಂದೆ ಮತ್ತಷ್ಟು ಮಜಾ | ಗೂಗಲ್ ಜೆಮಿನಿ ಜೊತೆ ಕೈಜೋಡಿಸಿದ ಕೊಕಾ-ಕೋಲಾ
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್  | ಬೆಂಗಳೂರು |

ದೈನಂದಿನ ಬಿಡುವಿನ ಅಥವಾ ವಿರಾಮದ ಸಮಯವನ್ನು ಇನ್ಮುಂದೆ ಮತ್ತಷ್ಟು ರೋಮಾಂಚನಕಾರಿಯಾಗಿಸಲು ಮತ್ತು ಮೋಜುಭರಿತವಾಗಿಸಲು ಜಾಗತಿಕ ದೈತ್ಯ ಕಂಪನಿಗಳಾದ ಕೋಕಾ-ಕೋಲಾ ಮತ್ತು ಗೂಗಲ್ ಕೈಜೋಡಿಸಿವೆ. ಗೂಗಲ್‌ ನ ಸುಧಾರಿತ ಎಐ ತಂತ್ರಜ್ಞಾನವಾದ ಜೆಮಿನಿ ಆಧಾರದಲ್ಲಿ ಕೋಕಾ-ಕೋಲಾ ಇಂಡಿಯಾ ಸಂಸ್ಥೆಯು “ಕೊಕಾ ಕೋಲಾ ಹಾಫ್‌ ಟೈಮ್ ಸರ್ಪ್ರೈಸ್” Coca-Cola Half Time Surprise ಎಂಬ ವಿನೂತನ ಡಿಜಿಟಲ್ ಅನುಭವವನ್ನು ದೇಶಾದ್ಯಂತ ಇಂದಿನಿಂದ ಪರಿಚಯಿಸಿದೆ.

ವಿಶ್ವದ ಇವೆರಡು ಪ್ರತಿಷ್ಠಿತ ಬ್ರ್ಯಾಂಡ್‌ ಗಳು ಒಟ್ಟಾಗಿ ರೂಪಿಸಿರುವ ಈ ತಂತ್ರಜ್ಞಾನವು, ಗ್ರಾಹಕರ ಸಾಮಾನ್ಯ ಕೋಕ್ ಬ್ರೇಕ್ ಕ್ಷಣಗಳನ್ನು ಅಚ್ಚರಿದಾಯಕ, ಸೃಜನಶೀಲ ಮತ್ತು ಸ್ವ ಅಭಿವ್ಯಕ್ತಿಯ ವಿಶಿಷ್ಟ ಕ್ಷಣಗಳಾಗಿ ಪರಿವರ್ತಿಸಲಿದೆ. ಕೋಕಾ-ಕೋಲಾದ ಜಾಗತಿಕ “ಹಾಫ್‌ ಟೈಮ್” ಪರಿಕಲ್ಪನೆಯಿಂದ ಪ್ರೇರಿತವಾಗಿ ಈ ಮೂರು ವಿಭಿನ್ನ ಎಐ-ಆಧಾರಿತ ಜರ್ನಿಗಳನ್ನು ವಿನ್ಯಾಸಗೊಳಿಸಲಾಗಿದೆ. ಗ್ರಾಹಕರು ಮಾರುಕಟ್ಟೆಯಲ್ಲಿ ಲಭ್ಯವಿರುವ ಯಾವುದೇ ವಿಶೇಷ ಕೋಕಾ-ಕೋಲಾ ಪ್ಯಾಕ್ ಮೇಲಿರುವ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಈ ಕಾಲ್ಪನಿಕ ಜಗತ್ತನ್ನು ಪ್ರವೇಶಿಸಬಹುದಾಗಿದೆ. ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿದ ತಕ್ಷಣ ತೆರೆದುಕೊಳ್ಳುವ ಮೂರು ವಿಶಿಷ್ಟ ಲೇಬಲ್‌ ಗಳಲ್ಲಿ ಒಂದನ್ನು ಆಯ್ದುಕೊಂಡು, ಬಳಕೆದಾರರು ಗೂಗಲ್ ಜೆಮಿನಿಯ ವಿಶೇಷ ಗೇಮಿಫೈಡ್ ಇಂಟರ್‌ ಫೇಸ್ ತಲುಪಲಿದ್ದಾರೆ.
ಇಲ್ಲಿ ಗ್ರಾಹಕರು ಕೇವಲ ಮೊಬೈಲ್ ಪರದೆಯನ್ನು ಟ್ಯಾಪ್ ಮಾಡುವ, ಸ್ವೈಪ್ ಮಾಡುವ ಅಥವಾ ತಮ್ಮ ವ್ಯಕ್ತಿತ್ವಕ್ಕೆ ಸೂಕ್ತವಾದ ಕೆಲವೇ ಕೆಲವು ಆಯ್ಕೆಗಳನ್ನು ನೀಡುವ ಮೂಲಕ, ತಮಗಿಷ್ಟವಾದ ರೀತಿಯಲ್ಲಿ ಕಥೆ, ಸಂಗೀತ ಹಾಗೂ ಕಲ್ಪನೆಯ ಹೊಸ ಲೋಕವನ್ನು ಸೃಷ್ಟಿಸಿಕೊಳ್ಳಬಹುದು. ಇದು ಕೇವಲ ಮನರಂಜನೆಯಷ್ಟೇ ಅಲ್ಲದೆ, ಪ್ರತಿಯೊಬ್ಬರ ವೈಯಕ್ತಿಕ ಸೃಜನಶೀಲತೆಯನ್ನು ಹೊರಹಾಕಲು ಉತ್ತಮ ವೇದಿಕೆಯಾಗಲಿದೆ.

Also read: ಶಿವಮೊಗ್ಗ | 7 ಲಕ್ಷ ರೂ. ನಗದು ದೋಚಿದ್ದ ಇಬ್ಬರು ಕಳ್ಳರ ಬಂಧನ

ಗೂಗಲ್ ಜೆಮಿನಿಯ Google Gemini ಕ್ಯಾನ್ವಾಸ್ ಫೀಚರ್ ಬಳಸಿಕೊಂಡು ರೂಪಿಸಲಾದ ಈ ತಂತ್ರಜ್ಞಾನದಲ್ಲಿ, ಗ್ರಾಹಕರು ನಡೆಸುವ ಪ್ರತಿಯೊಂದು ಸಂವಹನವೂ ಹೊಸ ಸೃಜನಶೀಲ ಅನುಭವಗಳನ್ನು ತೆರೆದಿಡುತ್ತದೆ. ಇದು ಸಿನಿಮಾ ಶೈಲಿಯ ಕಾಮಿಕ್-ಸ್ಟ್ರಿಪ್ ಜಗತ್ತು, ಕಾಲ್ಪನಿಕ ಕಾಲಘಟ್ಟಗಳು ಮತ್ತು ಸಂಗೀತದಿಂದ ಪ್ರೇರಿತವಾದ ಆಲ್ಟರ್- ಇಗೋಗಳನ್ನು ಒಳಗೊಂಡಿರಲಿದೆ. ಒಂದು ಕ್ಷಣದಲ್ಲಿ ಗ್ರಾಹಕರು ನಿರಂತರವಾಗಿ ಬದಲಾಗುವ ಪಾತ್ರಗಳು ಮತ್ತು ಆಕರ್ಷಕ ದೃಶ್ಯಾವಳಿಗಳನ್ನು ಹೊಂದಿರುವ ಸಿನಿಮಾ ಮಾದರಿಯ ಕಥಾಹಂದರದಲ್ಲಿ ಮುಳುಗಬಹುದು. ಇನ್ನೊಂದು ಕ್ಷಣದಲ್ಲಿ ಕೃತಕ ಬುದ್ಧಿಮತ್ತೆಯ ಸೃಜನಶೀಲತೆಯ ಮೂಲಕ ಸೃಷ್ಟಿಸಲಾದ ಡೈನೋಸಾರ್‌ ಗಳಿರುವ ಇತಿಹಾಸ ಪೂರ್ವ ಯುಗ, ಮಧ್ಯಕಾಲೀನ ಕೋಟೆಗಳು ಅಥವಾ ಭವಿಷ್ಯದ ಅದ್ಭುತ ಜಗತ್ತಿಗೆ ಪ್ರಯಾಣಿಸಬಹುದು. ಈ ರೀತಿ ವಿಶಿಷ್ಟವಾಗಿ ಸೃಷ್ಟಿಯಾಗುವ ಡಿಜಿಟಲ್ ಕಲಾಕೃತಿಗಳ ಜೊತೆಗೆ, ಗ್ರಾಹಕರು ಆಕರ್ಷಕ ಬಹುಮಾನಗಳನ್ನು ಪಡೆಯುವ ಮತ್ತು ವೋಚರ್‌ ಗಳನ್ನು ಗೆಲ್ಲುವ ಅವಕಾಶವನ್ನು ಸಹ ಪಡೆಯಲಿದ್ದಾರೆ.

ಈ ಕಾಲ್ಪನಿಕ ಲೋಕಕ್ಕೆ ಕಾಲಿಡಲು, ಗ್ರಾಹಕರು ಕೋಕಾ-ಕೋಲಾ ಪ್ಯಾಕ್ ಅನ್ನು ಸ್ಕ್ಯಾನ್ ಮಾಡಿ, ಕೆಳಗಿನ ಮೂರು ವಿಭಿನ್ನ ಅಡ್ವಂಚರ್ ಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಬಹುದು:

  • ಬೀ ಎ ರಾಕ್‌ಸ್ಟಾರ್: ಬಳಕೆದಾರರು ಹಳೆಯ ನೆನಪುಗಳಿಗೆ ಸಾಗುವ ಜೂಕ್‌ ಬಾಕ್ಸ್ ಇಂಟರ್‌ ಫೇಸ್ ಮೂಲಕ ತಮ್ಮ ಸೆಲ್ಫಿಯನ್ನು ವೈಯಕ್ತಿಕಗೊಳಿಸಿದ ಆಲ್ಬಮ್ ಕವರ್ ಆಗಿ ಬದಲಾಯಿಸಿಕೊಳ್ಳಬಹುದು. ಇದರೊಂದಿಗೆ ಕಸ್ಟಮ್ ಟ್ರ್ಯಾಕ್‌ ಗಳನ್ನು ಸಹ ರಚಿಸಿಕೊಳ್ಳಬಹುದು ಹಾಗೂ ಕನ್ಸರ್ಟ್ ಟಿಕೆಟ್‌ ಗಳನ್ನು ಗೆಲ್ಲುವ ಸುವರ್ಣ ಅವಕಾಶವನ್ನು ಪಡೆಯಬಹುದು.
  • ಬೀ ಎ ಮೂವಿ ಸ್ಟಾರ್: ಬಳಕೆದಾರರು ಸಿನಿಮಾ ವೆಂಡಿಂಗ್ ಮೆಷಿನ್ ಇಂಟರ್‌ ಫೇಸ್ ಮೂಲಕ ಸ್ವೈಪ್ ಮಾಡುವ ಮೂಲಕ, ಆರು ಪ್ಯಾನಲ್‌ ಗಳ ಕಸ್ಟಮ್ ಕಾಮಿಕ್ ಸ್ಟ್ರಿಪ್‌ ನಲ್ಲಿ ತಾವೇ ಮುಖ್ಯ ಪಾತ್ರಧಾರಿಯಾಗಿ ಮಿಂಚಬಹುದು. ಇದರೊಂದಿಗೆ ಸಿನಿಮಾ ವೋಚರ್‌ ಗಳನ್ನು ಗೆಲ್ಲುವ ಅವಕಾಶವನ್ನು ಪಡೆಯಬಹುದು.
  • ಟ್ರಾವೆಲ್ ಥ್ರೂ ಟೈಮ್: ಬಳಕೆದಾರರು ಡಿಜಿಟಲ್ ಟೈಮ್ ಮೆಷಿನ್ ಅನ್ನು ನಿಯಂತ್ರಿಸುವ ಮೂಲಕ, ತಮ್ಮ ಸೆಲ್ಫಿ ಸುತ್ತಲೂ ಅತ್ಯಾಕರ್ಷಕ ವಿಷನ್- ಬೋರ್ಡ್ ಶೈಲಿಯ ಕೊಲಾಜ್ ಅನ್ನು ರಚಿಸಬಹುದು. ಇದರೊಂದಿಗೆ ವಿಮಾನ ಪ್ರಯಾಣ ಮತ್ತು ಹೋಟೆಲ್ ವೋಚರ್‌ ಗಳನ್ನು ಗೆಲ್ಲುವ ಅವಕಾಶವನ್ನು ಹೊಂದಬಹುದು.

ಕೋಕಾ-ಕೋಲಾ ಇಂಡಿಯಾ ಮತ್ತು ನೈರುತ್ಯ ಏಷ್ಯಾದ ಮಾರ್ಕೆಟಿಂಗ್ ವಿಭಾಗದ ವೈಸ್ ಪ್ರೆಸಿಡೆಂಟ್ ಆದ ಗ್ರೀಷ್ಮಾ ಸಿಂಗ್ ಅವರು ಮಾತನಾಡಿ, “ಇಂದಿನ ಜೆನ್ ಜೀ ಗ್ರಾಹಕರ, ಸ್ವ-ಅಭಿವ್ಯಕ್ತಿ ಪ್ರಕ್ರಿಯು ನಿರಂತರವಾಗಿ ಬದಲಾಗುವ, ದೃಶ್ಯ ರೂಪದ ಮತ್ತು ಸಂಗೀತ ಹಾಗೂ ಡಿಜಿಟಲ್ ಸಂಸ್ಕೃತಿಯಿಂದ ಆಳವಾಗಿ ಪ್ರಭಾವಿತವಾಗಿರುವ ಸಂಗತಿಯಾಗಿದೆ. ಕಾರಣದಿಂದ ನಾವು ‘ಕೋಕಾ-ಕೋಲಾ ಹಾಫ್‌ ಟೈಮ್ ಸರ್ಪ್ರೈಸ್’ ಮೂಲಕ, ಕೋಕ್ ಬ್ರೇಕ್‌ ನ ಸಮಯವನ್ನು ಅವರ ಪಾಲ್ಗೊಳ್ಳುವಿಕೆಗೆ ಮುಕ್ತವಾಗಿರುವ, ಹೆಚ್ಚು ಮೋಜಿನ ಮತ್ತು ವೈಯಕ್ತಿಕವಾದ ಕ್ಷಣವನ್ನಾಗಿ ಮರುರೂಪಿಸಲು ಬಯಸಿದ್ದೆವು. ಗೂಗಲ್ ಜೆಮಿನಿ ತಂತ್ರಜ್ಞಾನದ ಸಹಾಯದಿಂದ ಇಲ್ಲಿನ ಪ್ರತಿಯೊಂದು ಸಂವಹನವೂ ವಿಶಿಷ್ಟವಾಗಿರುತ್ತದೆ ಎಂಬುದು ಇದನ್ನು ಮತ್ತಷ್ಟು ರೋಮಾಂಚನಕಾರಿಯಾಗಿಸಿದೆ. ನೀವು ನಿಮ್ಮದೇ ಆದ ಕಾಮಿಕ್ ಸ್ಟ್ರಿಪ್ ರಚಿಸುತ್ತಿರಲಿ, ಎಐ ಮಾತ್ರ ನಿಮ್ಮನ್ನು ಕರೆದೊಯ್ಯಬಲ್ಲ ಜಗತ್ತಿಗೆ ಟೈಮ್-ಟ್ರಾವೆಲ್ ಮಾಡುತ್ತಿರಲಿ ಅಥವಾ ನಿಮ್ಮದೇ ಆಲ್ಬಮ್ ಕವರ್ ವಿನ್ಯಾಸಗೊಳಿಸುತ್ತಿರಲಿ, ಈ ಇಡೀ ಅನುಭವ ಸಂಪೂರ್ಣವಾಗಿ ನಿಮ್ಮದೇ ಅನಿಸುತ್ತದೆ. ಗೂಗಲ್ ಜೊತೆಗಿನ ಈ ಸಹಯೋಗವು ಸೃಜನಶೀಲತೆ ಮತ್ತು ತಂತ್ರಜ್ಞಾನವನ್ನು ಎಷ್ಟು ಸುಂದರವಾಗಿ ಬೆಸೆದಿದೆ ಎಂದರೆ, ಕೋಕಾ-ಕೋಲಾ ಪ್ಯಾಕ್ ಮೇಲೆ ಒಮ್ಮೆ ಸರಳವಾಗಿ ಸ್ಕ್ಯಾನ್ ಮಾಡಿದರೆ ಸಾಕು ನೈಜ ಅನ್ವೇಷಣೆಯ ಅದ್ಭುತ ಕ್ಷಣವಾಗಿ ಬದಲಾಗುತ್ತದೆ” ಎಂದು ಹೇಳಿದ್ದಾರೆ.
ಗೂಗಲ್ ಇಂಡಿಯಾದ ಮಾರ್ಕೆಟಿಂಗ್ ವಿಭಾಗದ ವೈಸ್ ಪ್ರೆಸಿಡೆಂಟ್ ಆದ ಶೇಖರ್ ಖೋಸ್ಲಾ ಅವರು ಮಾತನಾಡಿ, “ಯಾವುದೇ ಒಂದು ಬ್ರ್ಯಾಂಡ್‌ ಜೊತೆಗಿನ ಒಡನಾಟವು ಸಂವಾದಾತ್ಮಕ, ವೈಯಕ್ತಿಕ ಮತ್ತು ಮೋಜಿನಿಂದ ಕೂಡಿದ್ದಾಗ ಅದು ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತದೆ. ಕೋಕಾ-ಕೋಲಾ ಜೊತೆ ಕೈಜೋಡಿಸಿರುವುದಕ್ಕೆ ನಮಗೆ ಸಂತೋಷವಿದೆ. ‘ಕೋಕಾ-ಕೋಲಾ ಹಾಫ್‌ಟೈಮ್ ಸರ್ಪ್ರೈಸ್’ ಮೂಲಕ ಜನರು ಗೂಗಲ್ ಜೆಮಿನಿ ತಂತ್ರಜ್ಞಾನವನ್ನು ಬಳಸಿ ಆಟವಾಡಲು, ಹೊಸದನ್ನು ಸೃಷ್ಟಿಸಲು ಮತ್ತು ಹಂಚಿಕೊಳ್ಳಲು ಒಂದು ಆಕರ್ಷಕ ವೇದಿಕೆ ಸಿಗಲಿದೆ. ಪ್ರತಿಯೊಬ್ಬರಿಗೂ ಸಂಪೂರ್ಣವಾಗಿ ವೈಯಕ್ತೀಕರಿಸಿದ ಅನುಭವಗಳನ್ನು ನೀಡುವ ಸಾಮರ್ಥ್ಯವೇ ಈ ಅಭಿಯಾನದ ವಿಶೇಷತೆಯಾಗಿದೆ. ಜೆಮಿನಿ ತಂತ್ರಜ್ಞಾನವನ್ನು ಸೃಜನಶೀಲ ಸಂಗಾತಿಯನ್ನಾಗಿ ಮಾಡಿಕೊಂಡು, ಜನರು ಸುಲಭವಾಗಿ ಹೊಸ ದೃಶ್ಯ ಕಥೆಗಳನ್ನು ಕಲ್ಪಿಸಿಕೊಳ್ಳಬಹುದು ಮತ್ತು ದೈನಂದಿನ ಸಾಮಾನ್ಯ ಕ್ಷಣಗಳನ್ನು ತಮ್ಮ ಸ್ವ-ಅಭಿವ್ಯಕ್ತಿಯ ಮೋಜಿನ ಪ್ರದರ್ಶನವನ್ನಾಗಿ ಬದಲಾಯಿಸಿಕೊಳ್ಳಬಹುದು” ಎಂದು ಹೇಳಿದ್ದಾರೆ.

ದೀಪಾವಳಿ ಹಬ್ಬದ ಸಂದರ್ಭದಲ್ಲಿ ಗ್ರಾಹಕರು ಬೃಹತ್ ಪ್ರಮಾಣದಲ್ಲಿ ವೈಯಕ್ತಿಕ ಹಬ್ಬದ ಶುಭಾಶಯಗಳನ್ನು ಸೃಷ್ಟಿಸಲು ಅನುವು ಮಾಡಿಕೊಟ್ಟಿದ್ದ ಕೋಕಾ-ಕೋಲಾದ ಜನಪ್ರಿಯ ಜನರೇಟಿವ್ ಎಐ ಅಭಿಯಾನ ಫೆಸ್ಟಿಕಾನ್ಸ್ ಯಶಸ್ಸಿನ ಮುಂದುವರಿದ ಭಾಗವಾಗಿ ಈ ಹೊಸ ತಂತ್ರಜ್ಞಾನವನ್ನು ಬಿಡುಗಡೆ ಮಾಡಲಾಗಿದೆ. ‘ಕೋಕಾ-ಕೋಲಾ ಹಾಫ್‌ ಟೈಮ್ ಸರ್ಪ್ರೈಸ್’ ಮೂಲಕ ಕೋಕಾ-ಕೋಲಾ ಇಂಡಿಯಾ ಸಂಸ್ಥೆಯು ಆ ಸೃಜನಶೀಲತೆಯ ಉತ್ಸಾಹವನ್ನು ದಿನದ ಯಾವುದೇ ಸಮಯದಲ್ಲೂ ಲಭ್ಯವಿರುವ ಅನುಭವವನ್ನಾಗಿ ರೂಪಿಸಿದೆ. ಈ ಹೊಸ ತಂತ್ರಜ್ಞಾನವನ್ನು ದೈನಂದಿನ ಸಾಮಾನ್ಯ ಕ್ಷಣಗಳನ್ನು ಹೆಚ್ಚು ಅಭಿವ್ಯಕ್ತಿಶೀಲ, ಸಂವಾದಾತ್ಮಕ ಮತ್ತು ಆಶ್ಚರ್ಯಗಳಿಂದ ತುಂಬುವಂತೆ ವಿನ್ಯಾಸಗೊಳಿಸಲಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news     

https://kalpa.news/wp-content/uploads/2024/04/VID-20240426-WA0008.mp4

Tags: BENGALURUCoca-Cola Half Time SurpriseGoogle GeminiKannada NewsKannada News LiveKannada News OnlineKannada News WebsiteKannada WebsiteLatest News KannadaNews in KannadaNews Kannadaಕೊಕಾ ಕೋಲಾ ಹಾಫ್‌ ಟೈಮ್ ಸರ್ಪ್ರೈಸ್ಗೂಗಲ್ ಜೆಮಿನಿಬೆಂಗಳೂರು
Share197Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಶಿವಮೊಗ್ಗ | 7 ಲಕ್ಷ ರೂ. ನಗದು ದೋಚಿದ್ದ ಇಬ್ಬರು ಕಳ್ಳರ ಬಂಧನ

Next Post

ಮಾನವೀಯ ಮೌಲ್ಯಗಳ ಸರದಾರ ಅಂಬರೀಷ್: ಸುರೇಶ್ ಋಗ್ವೇದಿ

kalpa News

kalpa News

Next Post
ಮಾನವೀಯ ಮೌಲ್ಯಗಳ ಸರದಾರ ಅಂಬರೀಷ್: ಸುರೇಶ್ ಋಗ್ವೇದಿ

ಮಾನವೀಯ ಮೌಲ್ಯಗಳ ಸರದಾರ ಅಂಬರೀಷ್: ಸುರೇಶ್ ಋಗ್ವೇದಿ

Comments 1

  1. Pingback: ಮಾನವೀಯ ಮೌಲ್ಯಗಳ ಸರದಾರ ಅಂಬರೀಷ್: ಸುರೇಶ್ ಋಗ್ವೇದಿ » kalpa.news

Leave a Reply Cancel reply

Your email address will not be published. Required fields are marked *

No Result
View All Result
Gudinamana 2026 Classical Music Dance Guru Parampara
English Articles

Gudi Namana 2026: A Year-Long Musical Tribute to Guru Parampara Across Sacred Spaces

by kalpa News
September 29, 2026
0

Kalpa Media House  |  Article by Rasikapriya  | Gudinamana 2026, a distinctive classical music and dance initiative curated by renowned...

Read moreDetails
Hyderabad Pink Power Run 35K Breast Cancer Awareness copy

Hyderabad Runs Pink : 35,000 Unite For Breast Cancer Awareness

September 27, 2026
swr vigilance awareness campaign 2026 hubballi dharwad

SWR Vigilance Dept Organizes Inter-School Competitions to Promote Integrity & Ethical Values

September 24, 2026
Mysuru Project Assistant Job Kits Leap 22 K Salary

Mysuru Job Alert : Project Assistant Vacancy, 22,000 Salary, Apply by Oct 10

September 21, 2026
Tumkur limited height subway opens at bheemasandra gate

Tumkur Traffic Relief : New Limited Height Subway Opens At Old Bheemasandra Gate

September 18, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL