ಅಥರ್ವ ಚಿತ್ರದ ಮೂಲಕ ಅರ್ಜುನ್ ಸರ್ಜಾ ಕುಟುಂಬದಿಂದ ಬರುತ್ತಿರುವ ಮತ್ತೊಬ್ಬ ನಾಯಕ. ಅವರೇ ಪವನ್ ತೇಜ.
ಮಹಾ ಸಿಂಹ ಮೂವೀಸ್ ಅಡಿಯಲ್ಲಿ ಎಚ್. ವಿನಯ್ ಕುಮಾರ್ ನಿರ್ಮಾಣ ಮಾಡಿರುವ ಈ ಚಿತ್ರದ ನಿರ್ದೇಶಕರು ಅರುಣ್. ಎಸ್.ವಿ. ರಕ್ಷಯ್ ಸಹ ನಿರ್ಮಾಪಕರು.
ಹಲವು ತಾಕತ್ತುಗಳ ಸಂಗಮವನ್ನು ಪ್ರಥಮ ಪ್ರಯತ್ನದಲ್ಲೇ ಪವನ್ ತೇಜ ನಿಭಾಯಿಸುತ್ತಿದ್ದಾರೆ. ಸನಮ್ ಶೆಟ್ಟಿ ಈ ಚಿತ್ರದ ಕಥಾ ನಾಯಕಿ. ರಂಗಾಯಣ ರಘು, ತಾರಾ, ಧರ್ಮೇಂದ್ರ ಅರಸ್, ಯಶ್ವಂತ್ ಶೆಟ್ಟಿ, ಸುಚಿಂದ್ರ ಪ್ರಸಾದ್, ಸಿಲ್ಲಿ ಲಲ್ಲಿ ಶ್ರೀನಿವಾಸ ಗೌಡ ಟಾಮಿ ರವಿ, ನಿಶಾಂತ್, ಚೇತನ ಹಾಗೂ ಇತರರು ತಾರಾಗಣದಲ್ಲಿದ್ದಾರೆ.
ರಾಘವೇಂದ್ರ ಸಂಗೀತ ನಿರ್ದೇಶನ, ಶಿವ ಸೇನಾ ಛಾಯಾಗ್ರಹಣ, ಮೋಹನ್ ನೃತ್ಯ, ರಾಜು ಕಲಾ ನಿರ್ದೇಶನ, ಎಂ. ಸಂತೋಷ್ ಸಂಭಾಷಣೆ, ವಿಜೇತ ಕೃಷ್ಣ ಹಿನ್ನಲೆ ಸಂಗೀತ ಈ ‘ಅಥರ್ವ ಚಿತ್ರಕ್ಕೆ ಒದಗಿಸಿದ್ದಾರೆ.
Discussion about this post