ಕಲ್ಪ ಮೀಡಿಯಾ ಹೌಸ್ | ವಿಶೇಷ ಲೇಖನ : ಸತೀಶ ಶೆಟ್ಟಿ ಚೇರ್ಕಾಡಿ ದೊಡ್ಡಮನೆ |
ಕ್ರೀಡೆ, ನಟನೆ, ನೃತ್ಯ, ಈಜು, ಫುಟ್ಬಾಲ್, ಕಿಕ್ ಬಾಕ್ಸಿಂಗ್, ಕರಾಟೆ, ಚಿತ್ರಕಲೆ… ಹೀಗೆ ಮುಂದುವರೆಯುತ್ತದೆ ತುಳುನಾಡಿನ ಈ ಸಕಲಕಲಾ ವಲ್ಲಭ ಅತೀಶ್ ಎಸ್. ಶೆಟ್ಟಿ ಸಾಧನೆ.
ತುಳುನಾಡಿನ ಮಂಗಳೂರು ಮೂಲದ ಎಂಆರ್’ಪಿಎಲ್ ಉದ್ಯೋಗಿಯಾಗಿರುವ ಸತೀಶ್ ಶೆಟ್ಟಿ, ಉಪನ್ಯಾಸಕಿಯಾಗಿರುವ ಭಾರತಿ ದಂಪತಿ ಪುತ್ರನಾದ ಅತೀಶ್ ಎಸ್. ಶೆಟ್ಟಿ ಸದ್ಯ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ ಬಿಜೈನಲ್ಲಿ 10ನೇ ತರಗತಿ ಕಲಿಯುತ್ತಿದ್ದಾರೆ.
ಬಾಲ್ಯದಿಂದಲೇ ಚುರುಕುತನದಿಂದ ಕೂಡಿದ ಇವರು, ಕ್ರೀಡೆ, ನಟನ, ನೃತ್ಯ, ಈಜು, ಫುಟ್ಬಾಲ್, ಕಿಕ್ ಬಾಕ್ಸಿಂಗ್, ಕರಾಟೆ ಹಾಗೂ ಚಿತ್ರಕಲೆ ಮುಂತಾದ ಅನೇಕ ಹವ್ಯಾಸಗಳಲ್ಲಿ ತಮ್ಮದೇ ಆದ ಗುರುತನ್ನು ಮೂಡಿಸಿಕೊಂಡಿದ್ದಾರೆ. ಪ್ರತಿಯೊಂದು ಕ್ಷೇತ್ರದಲ್ಲೂ ಸಾಧನೆ ತಂದುಕೊಂಡು ಅವರು ಇಂದಿನ ಯುವಜನತೆಗೆ ಪ್ರೇರಣೆಯಾಗಿದ್ದಾರೆ.
2021ರಲ್ಲಿ ಮೈಸೂರಿನಲ್ಲಿ ನಡೆದ ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಚಿನ್ನದ ಪದಕ ಗೆದ್ದ ಅವರು, ಪುಣೆಯ ರಾಜ್ಯಮಟ್ಟದ ಕಿಕ್ ಬಾಕ್ಸಿಂಗ್’ನಲ್ಲಿ ಚಿನ್ನದ ಪದಕ ಪಡೆದು ಅಂತಾರಾಷ್ಟ್ರೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಕೇರಳ ಶಾಲಾಮಟ್ಟ, ಮಂಗಳೂರು ಜಿಲ್ಲಾ ಮಟ್ಟ, ಬೆಂಗಳೂರು ರಾಷ್ಟ್ರೀಯ ಮಟ್ಟ ಹಾಗೂ ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲೂ ಚಿನ್ನದ ಪದಕ ಜಯಿಸುವ ಮೂಲಕ ತಮ್ಮ ಶಕ್ತಿಯನ್ನು ಸಾಬೀತುಪಡಿಸಿದ್ದಾರೆ. ಜೊತೆಗೆ, ಜಾರ್ಖಂಡ್’ನಲ್ಲಿ ನಡೆದ ಕಿಕ್ ಬಾಕ್ಸಿಂಗ್ ಸ್ಪರ್ಧೆಗೆ ಸಹ ಆಯ್ಕೆಯಾಗಿರುವುದು ಇವರ ಇನ್ನೊಂದು ಮಹತ್ವದ ಸಾಧನೆ.
ಅತೀಶ್ ಅವರು ಬಾಲ್ಯದಲ್ಲಿಯೇ ತಮ್ಮ ನಟನಾ ಪ್ರತಿಭೆಯನ್ನು ತೋರಿಸಿದ್ದಾರೆ. K-Star Suvarna ವಾಹಿನಿಯ Junior Drama Funters ಕಾರ್ಯಕ್ರಮದಲ್ಲಿ “Best Performer of the Week” ಪ್ರಶಸ್ತಿಯನ್ನು ಪಡೆದು ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು.
ಕಲರ್ ಸೂಪರ್ ವಾಹಿನಿಯ Mahabharata Reality Show ನಲ್ಲಿ ಅಭಿನಯಿಸಿ ತೀರ್ಪುಗಾರರಾಗಿದ್ದ ಚಿತ್ರ ನಿರ್ದೇಶಕ ಎಸ್. ನಾರಾಯಣ್ ಹಾಗೂ ಶ್ರುತಿ ಅವರ ಪ್ರಶಂಸೆ ಪಡೆದರು. ಕೇವಲ ಐದು ವರ್ಷದ ವಯಸ್ಸಿನಲ್ಲಿ ಮಜಾಭಾರತ ಕಾರ್ಯಕ್ರಮದಲ್ಲಿ ಕಿರೀಟವನ್ನು ಮುಡಿಗೇರಿಸಿಕೊಂಡಿದ್ದು ಅವರ ನಟನಾ ಜೀವನದ ದೊಡ್ಡ ಸಾಧನೆ.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು ಎಂಬ ಚಿತ್ರದಲ್ಲಿ ನಟಿಸಿದ್ದು, ಅದರ ಪ್ರಚಾರಕ್ಕಾಗಿ ಅವರಿಗೆ ಪ್ರಸಿದ್ಧ ಮಜಾ ಟಾಕೀಸ್ ಕಾರ್ಯಕ್ರಮಕ್ಕೆ ಪ್ರವೇಶ ದೊರಕಿತು. ಇದುವರೆಗೆ ಅವರು ನಾಲ್ಕು ಕಿರುಚಿತ್ರಗಳಲ್ಲಿ ಹಾಗೂ ಹದಿನೇಳು ತುಳು, ಕನ್ನಡ ಮತ್ತು ಇತರ ಭಾಷೆಗಳ ಚಲನಚಿತ್ರಗಳಲ್ಲಿ ನಟಿಸಿದ್ದಾರೆ.
ಅತೀಶ್ ಸಾಧನೆಯನ್ನು ಪುರಸ್ಕರಿಸಿ ಅನೇಕ ಗೌರವಗಳು ಅವರನ್ನು ಅರಸಿ ಬಂದಿವೆ. ಕರ್ನಾಟಕ ಪ್ರತಿಭಾ ರತ್ನ, ಕರ್ನಾಟಕ ಕಲಾಶ್ರೀ, ಕಾರಂತರ ಹುಟ್ಟುಹಬ್ಬ ಸಾಧನಶ್ರೀ ಮುಂತಾದ ಪ್ರಮುಖ ಪ್ರಶಸ್ತಿಗಳು ಅವರ ಮುಡಿಗೇರಿವೆ.
ಬೆಂಗಳೂರಿನ ಬಂಟರ ಸಂಘದ ವತಿಯಿಂದ ನೀಡಲಾದ Best Excellence Award ಸಹ ಇವರ ಸಾಧನೆಯ ಮತ್ತೊಂದು ಮುತ್ತಾಗಿದೆ. ಇವುಗಳೊಂದಿಗೆ ಅನೇಕ ಸಾಂಸ್ಕೃತಿಕ ಸಂಸ್ಥೆಗಳು, ಸಂಘಟನೆಗಳು ಹಾಗೂ ಕ್ರೀಡಾ ವೇದಿಕೆಗಳಿಂದ ಅವರು ಹಲವಾರು ಸನ್ಮಾನಗಳನ್ನು ಸ್ವೀಕರಿಸಿದ್ದಾರೆ. ಈ ಸನ್ಮಾನಗಳು ಅವರ ಪರಿಶ್ರಮ, ಪ್ರತಿಭೆ ಹಾಗೂ ಸಮಾಜದಲ್ಲಿ ಮೂಡಿಸಿರುವ ಪ್ರಭಾವಕ್ಕೆ ಸಾಕ್ಷಿಯಾಗಿವೆ. ವಿದ್ಯಾಭ್ಯಾಸದೊಂದಿಗೆ ಪಠ್ಯೇತರ ಚಟುವಟಿಕೆಗಳನ್ನು ಸಮನ್ವಯಗೊಳಿಸಿಕೊಂಡು ಸಾಧನೆಗೈದ ಅತೀಶ್ ಎಸ್. ಶೆಟ್ಟಿ ಅವರು ನಮ್ಮ ಸಮಾಜಕ್ಕೆ ಹೆಮ್ಮೆಯ ವ್ಯಕ್ತಿ. ಅವರ ಪರಿಶ್ರಮ, ಶಿಸ್ತು ಹಾಗೂ ಬಹುಮುಖ ಪ್ರತಿಭೆ ಇಂದಿನ ಪೀಳಿಗೆಯವರಿಗೆ ಮಾದರಿಯಾಗಿದೆ.

1) 2021 ರಲ್ಲಿ ಪುಣೆ ಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ
2) 2023 ರಲ್ಲಿ ಮೈಸೂರಿನಲ್ಲಿ ನಡೆದ ರಾಜ್ಯ ಮಟ್ಟದ ಕಿಕ್ ಬಾಕ್ಸಿಂಗ್ ನಲ್ಲಿ ಪ್ರಥಮ ಸ್ಥಾನ ಪಡೆದು, ಜಾರ್ಖಂಡ್ ನ ರಾಂಚಿ ಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ
3) 2024 ರಲ್ಲಿ ಪುಣೆಯಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್’ನಲ್ಲಿ ಬೆಳ್ಳಿಯ ಪದಕ
4)2025ರಲ್ಲಿ ತಮಿಳ್ ನಾಡಿನ ಚೆನ್ನೈನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕಿಕ್ ಬಾಕ್ಸಿಂಗ್ ಚಾಂಪಿಯನ್ ಶಿಪ್’ನಲ್ಲಿ ಒಂದು ಚಿನ್ನದ ಪದಕ ಹಾಗೂ ಒಂದು ಬೆಳ್ಳಿಯ ಪದಕ
4) ಬೆಂಗಳೂರು ನಲ್ಲಿ ನಡೆದ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿಯ ಪದಕ
5) ಮೈಸೂರ್ ದಸರಾ ಕ್ರೀಡಾಕೂಟದಲ್ಲಿ ವುಷು ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ
6) 2019 ರಲ್ಲಿ ಬಾಗಲಕೋಟೆಯಲ್ಲಿ ನಡೆದ ಹಾಗೂ 2020ರಲ್ಲಿ ಮಂಗಳೂರುನಲ್ಲಿ ನಡೆದ ರಾಜ್ಯ ಮಟ್ಟದ ಚೆಸ್ ಚಾಂಪಿಯನ್ ಶಿಪ್’ನಲ್ಲಿ ಭಾಗಿ
7) ಕೇರಳದ ಪಾಲಾಕಾಡ್’ನಲ್ಲಿ ನಡೆದ ಶಾಲಾಮಟ್ಟದ ಕರಾಟೆ ಚಾಂಪಿಯನ್ ಶಿಪ್’ನಲ್ಲಿ ಚಿನ್ನದ ಪದಕ
8) ಮಂಗಳೂರಿನಲ್ಲಿ ನಡೆದ ಜಿಲ್ಲಾ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಬೆಳ್ಳಿಯ ಪದಕ
9) ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್’ನಲ್ಲಿ ಚಿನ್ನದ ಪದಕ
10) ಗೋವಾದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಚಿನ್ನದ ಪದಕ
ನಟನಾ ಹಾದಿ
- ಕೆ ಸ್ಟಾರ್ ಚಾನೆಲ್ ನ ಜೂನಿಯರ್ ಡ್ರಾಮ ಫಂಟರ್ಸ್ ನಲ್ಲಿ ಉತ್ತಮ ಅಭಿನಯ ನೀಡಿ Best Performer of the Week ಪ್ರಶಂಸೆ
- ಕಲರ್ಸ್ ಸೂಪರ್ ಚಾನೆಲ್’ನ ಮಜಭಾರತ ರಿಯಾಲಿಟಿ ಶೋನಲ್ಲಿ ಉತ್ತಮ ಅಭಿನಯ ನೀಡಿ ತೀರ್ಪುಗಾರರಾದ ಎಸ್. ನಾರಾಯಣ್ ಮತ್ತು ಶ್ರುತಿ
- ಅವರಿಂದ ಉತ್ತಮ ಪ್ರಶಂಸೆ ಪಡೆದು 2ಬಾರಿ ಮಜಭಾರತದ ಕಿರೀಟ ಮುಡಿಲಿಗೆ
- ಡೈಜಿ ವರ್ಡ್ ಚಾನೆಲ್’ನಲ್ಲಿ ಬಿನ್ನೆರ್ ಬರ್ಪೆರ್ ಕಾರ್ಯಕ್ರಮದಲ್ಲೂ ಅಭಿನಯ
ಕಿರುಚಿತ್ರಗಳು ಹಾದಿ
1) ಗಣೇಶ್ ನಿರ್ದೇಶನದ ಸ್ಫೂರ್ತಿ
2) ಪ್ರತೀಕ್ ಅತ್ತಾವರ, ನಿರ್ದೇಶನದ ಯಥಾ ತಥಾ
3) ಪ್ರದೀಪ್ ಕುಕ್ಕಿಪಾಡಿ ನಿರ್ದೇಶನದ ಆಪರೇಷನ್ ತುಳುನಾಡ್
4) ದೀಕ್ಷಿತ್ ನಿರ್ದೇಶನದ “cup ice cream”

- ನುಗ್ಗೆಕಾಯಿ
- ರಿಷಬ್ ಶೆಟ್ಟಿ ನಿರ್ದೇಶನದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು
- ಸೂರಜ್ ಬೋಳಾರ್ ನಿರ್ದೇಶನದ ರಾಹುಕಾಲ ಗುಳಿಗಕಾಲ
- ಚಂದ್ರಪ್ರಭಾ ನಿರ್ದೇಶನದ ಅಂಗಿಕಮ್
- ಶೋಭರಾಜ್ ಪಾವೂರು ನಿರ್ದೇಶನದ ಪೆಪೆಪೆರೆ ಪೆರೆರೆರೆ
- ಸಂತೋಷ್ ಮಾಡ ನಿರ್ದೇಶನದ ಲಕ್ಕಿ ಬಾಬು
- ಆರ್ಯ ಮೇಡಂ ನಿರ್ದೇಶನದ ನಮ್ದು ಊರು ಕುಡ್ಲ ಸಿನಿಮಾ
- ಅನೂಪ್ ಭಂಡಾರಿ ನಿರ್ದೇಶನದ ಸುದೀಪ್ ಅಭಿನಯದ ವಿಕ್ರಂತ್ ರೋಣ
- ಸೂರಜ್ ಶೆಟ್ಟಿ ನಿರ್ದೇಶನದ ನಾನ್ ವೆಜ್ (ಕನ್ನಡ )
- ಎಕಂ Web series
- ರಿಷಬ್ ಶೆಟ್ಟಿ ನಿರ್ದೇಶನದ ಕಾಂತಾರಾ ಸಿನಿಮಾ
- ಕಿಶೋರ್ ಮೂಡಬಿದ್ರೆ ನಿರ್ದೇಶನದ ಕೇಕ್ ಸಿನಿಮಾ. ಇದಕ್ಕೆ International film festival ಬೆಂಗಳೂರು awardಲ್ಲಿ best jury film award 13) ಅಪ್ಪು ಚಲನ ಚಿತ್ರೋತ್ಸವದಲ್ಲಿ ಭಾಗವಹಿಸುವಿಕೆ
- ರಕ್ಷಿತ್ ಶೆಟ್ಟಿ ನಿರ್ಮಾಣದ, ಸುಮಂತ್ ಭಟ್ ನಿರ್ದೇಶನದ ಮಿಥ್ಯ ಸಿನಿಮಾ(ಕನ್ನಡ)
- ಸುಕೇಶ್ ಶೆಟ್ಟಿ ನಿರ್ದೇಶನದ ದೂರದರ್ಶನ ಸಿನಿಮಾ (ಕನ್ನಡ )
- ಶ್ರೀ ಮುರುಳಿ ನಟಿಸಿರುವ ಭಗೀರ ಸಿನಿಮಾ
- ಶಂಕರ್ ನಿರ್ದೇಶನದ ಧ್ರುವ 369 ಸಿನಿಮಾ
- ಸಂತೋಷ ಶೆಟ್ಟಿ ನಿರ್ದೇಶನದ ಯಾನ್ ಸೂಪರ್ ಸ್ಟಾರ್ ಸಿನಿಮಾ
- ಪರೀಕ್ಷೆ ಭಯವೇ ಕನ್ನಡ ಸಿನಿಮಾದಲ್ಲಿ ನಟನೆ
ಜಾಹೀರಾತುಗಳು
ಅರುಣಾ ಮಸಾಲ,
ಸಂಜೀವ ಶೆಟ್ಟಿ ಟೆಕ್ಸ್’ಟೈಕ್ಸ್
ಮುಡಿಗೇರಿರುವ ಪ್ರಶಸ್ತಿಗಳು
1) ಕರ್ನಾಟಕ ಪ್ರತಿಭಾ ರತ್ನ
2) ಕರ್ನಾಟಕ ಕಲಾಶ್ರೀ
3) ಕಾರಂತರ ಹುಟ್ಟುಹಬ್ಬ ಸಾಧನಶ್ರೀ
4) ಸೌರಭ ರತ್ನ
ಸನ್ಮಾನಗಳು
- ಬಂಟರ ವಲಯವಾದ ಮುಡಿಪು ವಲಯ ಬಂಟರ ಸಂಘದಲ್ಲಿ ಸನ್ಮಾನ
- ಬಂಟರ ಸಂಘ ಬೋಳಿಯಾರ್ ಮತ್ತು ವರ್ಕಾಡಿಯಲ್ಲಿ ಸನ್ಮಾನ
- ಬಂಟರ ಸಂಘ ಬೆಂಗಳೂರು ನಲ್ಲಿ ಬೆಸ್ಟ್ ಎಕ್ಸಲೆನ್ಸ್ ಅವಾರ್ಡ್
- 150ಕ್ಕೂ ಹೆಚ್ಚು ಸ್ಟೇಜ್’ಗಳಲ್ಲಿ ಕಾರ್ಯಕ್ರಮ
- 50ಕ್ಕೂ ಹೆಚ್ಚು ಸ್ಟೇಜ್’ಗಳಲ್ಲಿ ಸನ್ಮಾನಗಳು
- 50ಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಭಾಗಿ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post