ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಕುಕ್ಕೆ ಸುಬ್ರಹ್ಮಣ್ಯ: ಇಲ್ಲಿನ ಆದಿ ಸುಬ್ರಹ್ಮಣ್ಯ ದೇವಾಲಯದ ಅರ್ಚಕ ಶ್ರೀನಿವಾಸ್ ಅವರ ಮೇಲೆ ಪೊಲೀಸ್ ಪೇದೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಸ್ವತಃ ಎಸ್’ಐ ಪೇದೆ ಪರವಾಗ ಕ್ಷಮೆ ಯಾಚಿಸಿ ದೊಡ್ಡತನ ಮೆರೆದಿದ್ದಾರೆ.
ಈ ಕುರಿತಂತೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಎಸ್’ಐ, ಹಲ್ಲೆಗೊಳಗಾದ ಅರ್ಚಕರು ಮತ್ತು ದೇಗುಲದ ಕಾರ್ಯನಿರ್ವಹಣಾಧಿಕಾರಿ ಹಾಗೂ ಇತರರ ಸಮ್ಮುಖದಲ್ಲಿ ಮಾತುಕತೆ ನಡೆದಿದ್ದು, ವಿವಾದವನ್ನು ಇತ್ಯರ್ಥ ಮಾಡಲಾಗಿದೆ.
ಅರ್ಚಕರ ಮೇಲೆ ಹಲ್ಲೆ ಮಾಡಿದ್ದ ಪೇದೆ ಶಂಕರ್ ಕ್ಷಮೆ ಕೇಳಿದ್ದರು. ಆದರೆ, ತಮ್ಮ ಠಾಣೆಯ ಸಿಬ್ಬಂದಿಯೊಬ್ಬರು ಇಂತಹ ಅನಾಗರಿಕ ವರ್ತನೆ ಮಾಡಿದ್ದಕ್ಕೆ ತೀವ್ರ ಬೇಸರ ವ್ಯಕ್ತಪಡಿಸಿದ ಎಸ್’ಐ ಒಮನಾ ಅವರು, ಅರ್ಚಕರ ಬಳಿಯಲ್ಲಿ ಖುದ್ದು ಕ್ಷಮೆ ಕೇಳಿದ್ದಾರೆ.
ವಿನಾಕಾರಣ ಅರ್ಚಕರ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಪೇದೆಯನ್ನು ಅಮಾನತು ಮಾಡಿ, ತನಿಖೆ ನಡೆಸಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರೆಗೂ ದೂರು ಹೋಗಿದ್ದು, ಜಿಲ್ಲಾ ಉಸ್ತುವಾರಿ ಸಚಿವರಿಗೂ ಸಾಮಾಜಿಕ ಜಾಲತಾಣದಲ್ಲಿ ಒತ್ತಾಯಿಸಲಾಗಿತ್ತು.
Get in Touch With Us info@kalpa.news Whatsapp: 9481252093

















