ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಯಶವಂತಪುರ ರೈಲು ನಿಲ್ದಾಣದ ಯಾರ್ಡ್’ನಲ್ಲಿ ನಡೆಯುತ್ತಿರುವ ಕಾಮಗಾರಿಗಳಿಂದಾಗಿ, ಕೆಲವು ರೈಲುಗಳ ತಾತ್ಕಾಲಿಕ ಸಂಚಾರ ರದ್ದು ಹಾಗೂ ಮಾರ್ಗಗಳನ್ನು ಬದಲಾವಣೆ ಮಾಡಲಾಗಿದೆ.
Also Read>> ಮೈಕ್ರೋ ಫೈನಾನ್ಸ್ ಸಂಸ್ಥೆಗಳಿಗೆ ನೋಂದಣಿ ಕಡ್ಡಾಯವೇ: ಗೃಹ ಸಚಿವ ಪರಮೇಶ್ಚರ್ ಹೇಳಿದ್ದೇನು?
ಈ ಕುರಿತಂತೆ ರೈಲ್ವೆ ಇಲಾಖೆ ಮಾಹಿತಿ ಪ್ರಕಟಿಸಿದ್ದು, ಕೆಲವು ರೈಲುಗಳ ಸಂಚಾರದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗುತ್ತಿದೆ.
ಈ ಕೆಳಗಿನ ಸಾಪ್ತಾಹಿಕ ರೈಲುಗಳ ರದ್ದು:
- ಏಪ್ರಿಲ್ 4: ರೈಲು ಸಂಖ್ಯೆ 12291 ಯಶವಂತಪುರ-ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್ ಎಕ್ಸ್’ಪ್ರೆಸ್
- ಏಪ್ರಿಲ್ 5: ರೈಲು ಸಂಖ್ಯೆ 12292 ಡಾ.ಎಂಜಿಆರ್ ಚೆನ್ನೈ ಸೆಂಟ್ರಲ್-ಯಶವಂತಪುರ ಎಕ್ಸ್’ಪ್ರೆಸ್
- ಏಪ್ರಿಲ್ 4: ರೈಲು ಸಂಖ್ಯೆ 16573 ಯಶವಂತಪುರ-ಪುದುಚೇರಿ ಎಕ್ಸ್’ಪ್ರೆಸ್
- ಏಪ್ರಿಲ್ 5: ರೈಲು ಸಂಖ್ಯೆ 16574 ಪುದುಚೇರಿ-ಯಶವಂತಪುರ ಎಕ್ಸ್’ಪ್ರೆಸ್
- ಏಪ್ರಿಲ್ 5: ರೈಲು ಸಂಖ್ಯೆ 16577 ಯಶವಂತಪುರ-ಬೀದರ್ ಎಕ್ಸ್’ಪ್ರೆಸ್
- ಏಪ್ರಿಲ್ 6: ರೈಲು ಸಂಖ್ಯೆ 16578 ಬೀದರ್-ಯಶವಂತಪುರ ಎಕ್ಸ್’ಪ್ರೆಸ್
- ಏಪ್ರಿಲ್ 3 ಮತ್ತು ಏಪ್ರಿಲ್ 10: ರೈಲು ಸಂಖ್ಯೆ 16541 ಯಶವಂತಪುರ-ಪಂಢರಪುರ ಎಕ್ಸ್’ಪ್ರೆಸ್
- ಏಪ್ರಿಲ್ 4 ಮತ್ತು 11: ರೈಲು ಸಂಖ್ಯೆ 16542 ಪಂಢರಪುರ-ಯಶವಂತಪುರ
ರೈಲುಗಳ ಟರ್ಮಿನಲ್ ಮತ್ತು ಮಾರ್ಗ ಬದಲಾವಣೆ
ರೈಲು ಸಂಖ್ಯೆ 16511/16512 ಕೆಎಸ್’ಆರ್ ಬೆಂಗಳೂರು-ಕಣ್ಣೂರು-ಕೆಎಸ್’ಆರ್ ಬೆಂಗಳೂರು ಎಕ್ಸ್’ಪ್ರೆಸ್ ರೈಲುಗಳ ಟರ್ಮಿನಲ್ ಮತ್ತು ಮಾರ್ಗದಲ್ಲಿ ತಾತ್ಕಾಲಿಕ ಬದಲಾವಣೆ ಮಾಡಲಾಗಿದೆ.
1. ರೈಲು ಸಂಖ್ಯೆ 16511 ಕೆಎಸ್’ಆರ್ ಬೆಂಗಳೂರು-ಕಣ್ಣೂರು ಎಕ್ಸ್’ಪ್ರೆಸ್ ರೈಲು ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ನಿಂದ ರಾತ್ರಿ 8:00 ಗಂಟೆಗೆ ಹೊರಟು, ಬಾಣಸವಾಡಿ, ಹೆಬ್ಬಾಳ ಮತ್ತು ಚಿಕ್ಕಬಾಣಾವರ ಮಾರ್ಗದ ಮೂಲಕ ಸಂಚರಿಸಲಿದೆ.
2. ರೈಲು ಸಂಖ್ಯೆ 16512 ಕಣ್ಣೂರು-ಕೆಎಸ್’ಆರ್ ಬೆಂಗಳೂರು ಎಕ್ಸ್’ಪ್ರೆಸ್ ರೈಲು ಚಿಕ್ಕಬಾಣಾವರ, ಹೆಬ್ಬಾಳ, ಬಾಣಸವಾಡಿ ಮಾರ್ಗದ ಮೂಲಕ ಬೆಂಗಳೂರಿನ ಸರ್ ಎಂ. ವಿಶ್ವೇಶ್ವರಯ್ಯ ಟರ್ಮಿನಲ್ ತಲುಪಲಿದೆ. ಈ ರೈಲು -ಕೆಎಸ್’ಆರ್ ಬೆಂಗಳೂರಿನ ಬದಲು ಎಸ್’ಎಂವಿಟಿನಲ್ಲಿ ತನ್ನ ಪ್ರಯಾಣವನ್ನು ಅಂತ್ಯಗೊಳಿಸಲಿದೆ. ಈ ರೈಲು ಬೆಳಿಗ್ಗೆ 07:45ಕ್ಕೆ ಎಸ್’ಎಂವಿಟಿ ಬೆಂಗಳೂರಿಗೆ ಆಗಮಿಸಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post