ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಹುಬ್ಬಳ್ಳಿ ವಿಭಾಗದ ಅಡಿಯಲ್ಲಿ ಬರುವ ವಿಜಯಪುರ-ಬಾಗಲಕೋಟೆ ಭಾಗದ 35 ಕಿಲೋಮೀಟರ್ ಜೋಡಿ ಮಾರ್ಗ ನಿರ್ಮಾಣದ ಭಾಗವಾಗಿ, ಆಲಮಟ್ಟಿ–ಜಡ್ರಾಮಕುಂಟಿ–ಮುಗಳಳ್ಳಿ–ಬಾಗಲಕೋಟೆ ನಡುವಿನ ಡಬ್ಲಿಂಗ್ ಕಾಮಗಾರಿಯ ಹಿನ್ನೆಲೆಯಲ್ಲಿ ಈ ಕೆಳಗಿನ ರೈಲು ಸೇವೆಗಳಲ್ಲಿ ಬದಲಾವಣೆಗಳನ್ನು ಮಾಡಲಾಗಿದೆ.
ಈ ಕುರಿತಂತೆ ನೈಋತ್ಯ ರೈಲ್ವೆ ಇಲಾಖೆ ಮಾಹಿತಿ ಪ್ರಕಟಿಸಿದ್ದು, ಅವುಗಳ ವಿವರ ಈ ಕೆಳಗಿನಂತಿವೆ:
ರೈಲುಗಳ ಸಂಚಾರ ಭಾಗಶಃ ರದ್ದು:
1. ಆಗಸ್ಟ್ 13 ರಿಂದ 22, 2025 ರವರೆಗೆ ಯಶವಂತಪುರದಿಂದ ಹೊರಡುವ ರೈಲು ಸಂಖ್ಯೆ 06545 ಯಶವಂತಪುರ – ವಿಜಯಪುರ ದೈನಂದಿನ ವಿಶೇಷ ಎಕ್ಸ್‌ಪ್ರೆಸ್ ರೈಲು ಬಾಗಲಕೋಟೆ ಮತ್ತು ವಿಜಯಪುರ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಬಾಗಲಕೋಟೆಯಲ್ಲಿ ಕೊನೆಗೊಳ್ಳಲಿದೆ.
2. ಆಗಸ್ಟ್ 14 ರಿಂದ 23, 2025 ರವರೆಗೆ ಹೊರಡುವ ರೈಲು ಸಂಖ್ಯೆ 06546 ವಿಜಯಪುರ – ಯಶವಂತಪುರ ದೈನಂದಿನ ವಿಶೇಷ ಎಕ್ಸ್‌ಪ್ರೆಸ್ ರೈಲು ವಿಜಯಪುರದ ಬದಲಿಗೆ ಬಾಗಲಕೋಟೆಯಿಂದ ಪ್ರಾರಂಭವಾಗಲಿದೆ. ವಿಜಯಪುರ ಮತ್ತು ಬಾಗಲಕೋಟೆ ನಡುವಿನ ಸೇವೆ ರದ್ದುಗೊಳ್ಳಲಿದೆ.
3. ಆಗಸ್ಟ್ 13 ರಿಂದ 22, 2025 ರವರೆಗೆ ಹೊರಡುವ ರೈಲು ಸಂಖ್ಯೆ 17307 ಮೈಸೂರು – ಬಾಗಲಕೋಟೆ ಬಸವ ದೈನಂದಿನ ಎಕ್ಸ್‌ಪ್ರೆಸ್ ರೈಲು ವಿಜಯಪುರ ಮತ್ತು ಬಾಗಲಕೋಟೆ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ವಿಜಯಪುರದಲ್ಲಿ ಕೊನೆಗೊಳ್ಳಲಿದೆ.
4. ಆಗಸ್ಟ್ 14 ರಿಂದ 23, 2025 ರವರೆಗೆ ಹೊರಡುವ ರೈಲು ಸಂಖ್ಯೆ 17308 ಬಾಗಲಕೋಟೆ – ಮೈಸೂರು ಬಸವ ದೈನಂದಿನ ಎಕ್ಸ್‌ಪ್ರೆಸ್ ರೈಲು ಬಾಗಲಕೋಟೆಯ ಬದಲಿಗೆ ವಿಜಯಪುರದಿಂದ ಹೊರಡಲಿದೆ. ಬಾಗಲಕೋಟೆ ಮತ್ತು ವಿಜಯಪುರ ನಡುವಿನ ಸೇವೆ ರದ್ದುಗೊಳ್ಳಲಿದೆ.
5. ಆಗಸ್ಟ್ 13 ರಿಂದ 22, 2025 ರವರೆಗೆ ಮುಂಬೈಯಿಂದ ಹೊರಡುವ ರೈಲು ಸಂಖ್ಯೆ 11139 ಸಿ.ಎಸ್.ಎಮ್.ಟಿ, ಮುಂಬೈ – ಹೊಸಪೇಟೆ ದೈನಂದಿನ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ರೈಲು ವಿಜಯಪುರ ಮತ್ತು ಹೊಸಪೇಟೆ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ವಿಜಯಪುರದಲ್ಲಿ ಕೊನೆಗೊಳ್ಳಲಿದೆ.
6. ಆಗಸ್ಟ್ 14 ರಿಂದ 23, 2025 ರವರೆಗೆ ಹೊರಡುವ ರೈಲು ಸಂಖ್ಯೆ 11140 ಹೊಸಪೇಟೆ – ಸಿ.ಎಸ್.ಎಮ್.ಟಿ, ಮುಂಬೈ ದೈನಂದಿನ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ ಹೊಸಪೇಟೆಯ ಬದಲಿಗೆ ವಿಜಯಪುರದಿಂದ ಹೊರಡಲಿದೆ. ಹೊಸಪೇಟೆ ಮತ್ತು ವಿಜಯಪುರ ನಡುವಿನ ಸೇವೆ ರದ್ದುಗೊಳ್ಳಲಿದೆ.
7. ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್ – ವಿಜಯಪುರ ದೈನಂದಿನ ಎಕ್ಸ್‌ಪ್ರೆಸ್ ವಿಶೇಷ ಈ ಕೆಳಗಿನಂತೆ ಭಾಗಶಃ ರದ್ದುಗೊಳ್ಳಲಿದೆ:
- ಆಗಸ್ಟ್ 13 ರಿಂದ 18, 2025 ರವರೆಗೆ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಡುವ ಪ್ರಯಾಣ ಬಾಗಲಕೋಟೆ ಮತ್ತು ವಿಜಯಪುರ ನಡುವೆ ರದ್ದುಗೊಂಡಿದೆ. ಈ ರೈಲಿನ ಸೇವೆ ಬಾಗಲಕೋಟೆಯಲ್ಲಿ ಕೊನೆಗೊಳ್ಳಲಿದೆ.
- ಆಗಸ್ಟ್ 19 ರಿಂದ 22, 2025 ರವರೆಗೆ ಮಂಗಳೂರು ಸೆಂಟ್ರಲ್ ನಿಲ್ದಾಣದಿಂದ ಹೊರಡುವ ಪ್ರಯಾಣ ಎಸ್.ಎಸ್.ಎಸ್. ಹುಬ್ಬಳ್ಳಿ ಮತ್ತು ವಿಜಯಪುರ ನಡುವೆ ರದ್ದುಗೊಂಡಿದೆ. ಈ ರೈಲು ಹುಬ್ಬಳ್ಳಿಯಲ್ಲಿ ಕೊನೆಗೊಳ್ಳಲಿದೆ.
8. ರೈಲು ಸಂಖ್ಯೆ 07377 ವಿಜಯಪುರ – ಮಂಗಳೂರು ಸೆಂಟ್ರಲ್ ದೈನಂದಿನ ಎಕ್ಸ್‌ಪ್ರೆಸ್ ವಿಶೇಷ ಈ ಕೆಳಗಿನಂತೆ ಭಾಗಶಃ ರದ್ದುಗೊಳ್ಳಲಿದೆ:
- ಆಗಸ್ಟ್ 14 ರಿಂದ 19, 2025 ರವರೆಗೆ ಹೊರಡುವ ಪ್ರಯಾಣ: ವಿಜಯಪುರದ ಬದಲಿಗೆ ಬಾಗಲಕೋಟೆಯಿಂದ ಹೊರಡಲಿದೆ; ವಿಜಯಪುರ ಮತ್ತು ಬಾಗಲಕೋಟೆ ನಡುವಿನ ಸೇವೆ ರದ್ದುಗೊಳ್ಳಲಿದೆ.
- ಆಗಸ್ಟ್ 20 ರಿಂದ 23, 2025 ರವರೆಗೆ ಹೊರಡುವ ಪ್ರಯಾಣ: ವಿಜಯಪುರದ ಬದಲಿಗೆ ಎಸ್.ಎಸ್.ಎಸ್. ಹುಬ್ಬಳ್ಳಿಯಿಂದ ಹೊರಡಲಿದೆ; ಹುಬ್ಬಳ್ಳಿ ಮತ್ತು ವಿಜಯಪುರ ನಡುವಿನ ಸೇವೆ ರದ್ದುಗೊಳ್ಳಲಿದೆ.
9. ಆಗಸ್ಟ್ 14 ರಿಂದ 19, 2025 ರವರೆಗೆ ಹೊರಡುವ ರೈಲು ಸಂಖ್ಯೆ 06919 ಎಸ್.ಎಸ್.ಎಸ್. ಹುಬ್ಬಳ್ಳಿ – ವಿಜಯಪುರ ದೈನಂದಿನ ಪ್ಯಾಸೆಂಜರ್ ವಿಶೇಷ ರೈಲು ಬಾಗಲಕೋಟೆ ಮತ್ತು ವಿಜಯಪುರ ನಡುವೆ ಭಾಗಶಃ ರದ್ದುಗೊಳ್ಳಲಿದೆ. ಈ ರೈಲು ಬಾಗಲಕೋಟೆಯಲ್ಲಿ ಕೊನೆಗೊಳ್ಳಲಿದೆ.
10. ಆಗಸ್ಟ್ 14 ರಿಂದ 19, 2025 ರವರೆಗೆ ಹೊರಡುವ ರೈಲು ಸಂಖ್ಯೆ 06920 ವಿಜಯಪುರ – ಎಸ್.ಎಸ್.ಎಸ್. ಹುಬ್ಬಳ್ಳಿ ದೈನಂದಿನ ಪ್ಯಾಸೆಂಜರ್ ವಿಶೇಷ ರೈಲು ವಿಜಯಪುರದ ಬದಲಿಗೆ ಬಾಗಲಕೋಟೆಯಿಂದ ಹೊರಡಲಿದೆ. ವಿಜಯಪುರ ಮತ್ತು ಬಾಗಲಕೋಟೆ ನಡುವಿನ ಸೇವೆ ರದ್ದುಗೊಳ್ಳಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post